No Ads

ರಸ್ತೆಗಳನ್ನು ಧೂಳು ಮುಕ್ತ ಮಾಡಲು 764 ಕೋಟಿ ಮೌಲ್ಯದ ಯಂತ್ರ ಆಮದು! ಪೌರಕಾರ್ಮಿಕರ ಉದ್ಯೋಗಕ್ಕೆ ಆತಂಕ ವ್ಯಕ್ತ.

ಜಿಲ್ಲೆ 2025-02-03 17:26:05 99
post

ಬೆಂಗಳೂರುರಾಜ್ಯದ ರಾಜಧಾನಿ ಬೆಂಗಳೂರಿಗೆ 764 ಕೋಟಿ ರೂಪಾಯಿ ಮೌಲ್ಯದ 20 ಮಷೀನ್‌ಗಳ ಅವಶ್ಯಕತೆ ಉಂಟಾಗಿದ್ದು, ಇವುಗಳನ್ನು ಆಮದು ಮಾಡಿಕೊಳ್ಳಲು ಬಿಬಿಎಂಪಿ ಪ್ಲಾನ್ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಮುಂದಿನ ಏಳು ವರ್ಷ ಬೆಂಗಳೂರು ರಸ್ತೆಗಳನ್ನು ಧೂಳು ಮುಕ್ತವಾಗಿಡಲು ಅತ್ಯಾಧುನಿಕ ಕಸ ಗುಡಿಸುವ ಯಂತ್ರಗಳ ಅಗತ್ಯತೆ ಬೆಂಗಳೂರು ಮಹಾನಗರಕ್ಕಿದ್ದು, ಇವುಗಳನ್ನು ಬಾಡಿಗೆಗೆ ಪಡೆಯುವ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿದೆ. ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆಯಾದ ಪ್ರಸ್ತಾವನೆಯ ಪ್ರಕಾರ, ಅತ್ಯಾಧುನಿಕ ಯಂತ್ರಗಳು ಎಷ್ಟು ಕಿಲೋ ಮೀಟರ್ ರಸ್ತೆ ಕಸ ಗುಡಿಸುತ್ತವೆ ಎಂಬುದರ ಆಧಾರದ ಮೇಲೆ ಬಾಡಿಗೆ ನಿರ್ಧಾರವಾಗುತ್ತದೆ. ಪ್ರತಿ ಕಿಮೀ ರಸ್ತೆಯ ಸ್ವಚ್ಛತೆಗೆ ಅಂದಾಜು 1,000 ರೂಪಾಯಿ ಬಾಡಿಗೆ ನಿಗದಿ ಮಾಡಬಹುದು. ಈ ಬೆಲೆಯನ್ನು BBMPಯ ಸಲಹಾ ಸಂಸ್ಥೆ RITES ಲಿಮಿಟೆಡ್‌ನ ಆರ್ಕಿಟೆಕ್ಟ್ ನಿರ್ಧರಿಸಿದೆ ಎಂದು ವರದಿಯಾಗಿದೆ.  2024-25ರ ಬಜೆಟ್‌ನಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿಯಲ್ಲಿ ಕಸ ಗುಡಿಸುವ ಯಂತ್ರಗಳಿಗಾಗಿ 30 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದೆ.  ಮುಂದಿನ ವರ್ಷಗಳಲ್ಲಿ ಈ ಹಣದ ಪ್ರಮಾಣ 30 ರಿಂದ 60 ಕೋಟಿ ರೂಪಾಯಿಗಳಷ್ಟು ಅಧಿಕವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಮುಂದಿನ ಆರ್ಥಿಕ ವರ್ಷದ ಬಳಿಕ ಕಸ ಗುಡಿಸುವ  ಯಂತ್ರಗಳಿಗಾಗಿ ಮೀಸಲಿಡುವ ಅನುದಾನದ ಪ್ರಮಾಣ  ಮೂರುಪಟ್ಟು ಹೆಚ್ಚಾಗಲಿದೆ. 

ಬಿಬಿಎಂಪಿಯ ಈ ನಿರ್ಧಾರ ಕೆಲವು ಸಾಮಾಜಿಕ ಕಾರ್ಯಕರ್ತರನ್ನು ಕೆರಳಿಸಿದೆ. ಅವರು ರಸ್ತೆಗಳನ್ನು ಸ್ವಚ್ಛಗೊಳಿಸಲು ಈಗಾಗಲೇ ಪೌರಕಾರ್ಮಿಕರು ಕೆಲಸಕ್ಕಿದ್ದಾರೆ. ಮುಂದೆ ಯಂತ್ರಗಳ ಮೂಲಕ ರಸ್ತೆಗಳನ್ನು ಸ್ವಚ್ಛ ಮಾಡುವುದಾದರೆ ಈ ಪೌರ ಕಾರ್ಮಿಕರನ್ನು ಕೆಲಸದಲ್ಲಿ ಇಟ್ಟುಕೊಳ್ಳುವ ಇರಾದೆ ಬಿಬಿಎಂಪಿಗೆ ಇಲ್ಲವೇ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ಇದಕ್ಕೆ ಉತ್ತರಿಸಿರುವ ಪೌರಕಾರ್ಮಿಕರಿಗೆ ಯಾವುದೇ ತೊಂದರೆಯಾಗಲ್ಲ. ಅಲ್ಲದೆ, ಯಂತ್ರಗಳ ಮೂಲಕ ನಗರದ ರಸ್ತೆಗಳನ್ನು ಸ್ವಚ್ಛ ಮಾಡುವ ಕ್ರಮ ಹೊಸತೇನಲ್ಲ ಈಗಾಗಲೇ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದಲೂ ಜಾರಿಯಲ್ಲಿದೆ. ಆ ಸ್ವಚ್ಛತಾ ವ್ಯವಸ್ಥೆಗೆ ಮತ್ತಷ್ಟು ಶಕ್ತಿ ತುಂಬಲು ಹೊಸ ಯಂತ್ರಗಳನ್ನು ಖರೀದಿಸಲಾಗುತ್ತದೆಯಷ್ಟೇ. ಅಲ್ಲದೆ, ಹೊಸ ಯಂತ್ರಗಳಿಂದ ಬಿಬಿಎಂಪಿಗೆ ಹೆಚ್ಚಿನ ಖರ್ಚೇನೂ ಬಾರದು. ಮಿತವ್ಯಯದಿಂದಲೇ ಅವುಗಳನ್ನು ನಿರ್ವಹಿಸಬಹುದಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner