ಸಂಖ್ಯಾಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರೀತಿಯ ಹೆಸರನ್ನ ಇಟ್ಕೊಂಡ್ರೆ ಆ ವ್ಯಕ್ತಿಗಳ ಜೀವನದಲ್ಲಿ ಸಾಕಷ್ಟು ಸವಾಲುಗಳು ಎದುರಾಗಲಿದೆ. ಅವರು ಸಂಕಷ್ಟ ಎದುರಿಸುವ ಸಾಧ್ಯತೆ ಬಹಳ ಇರುತ್ತದೆ. ಒಬ್ಬ ಹುಟ್ಟಿದ ಮನುಷ್ಯನ ಜೀವನದಲ್ಲಿ ಸಾಕಷ್ಟು ವಿಚಾರಗಳು ಪ್ರಮುಖ ಎಂಬುದಾಗಿ ಪರಿಗಣಿಸಲಾಗುತ್ತದೆ ಅದರಲ್ಲಿ ಆತನ ಹೆಸರು ಕೂಡ ಅತ್ಯಂತ ಪ್ರಮುಖ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಕರೆಯೋಕೆ ಒಂದು ಹೆಸರಾಯಿತು ಅಂತ ಯಾವುದೋ ಒಂದು ಹೆಸರನ್ನ ಇಟ್ಟರೆ ಅಥವಾ ಕೇಳೋದಕ್ಕೆ ಸ್ಟೈಲಿಶ್ ಆಗಿದೆ ಎನ್ನುವ ಕಾರಣಕ್ಕಾಗಿ ಮಾಡರ್ನ್ ಹೆಸರನ್ನ ಇಟ್ಟರೆ ಅದು ನಿಮ್ಮ ಜೀವನವನ್ನು ಸರಿಪಡಿಸುವುದಿಲ್ಲ ಬದಲಾಗಿ ಸಂಖ್ಯಾಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಮ್ಮೆ ಇದು ತಿರುಗಿ ಬೀಳುವಂತಹ ಸಾಧ್ಯತೆ ಕೂಡ ಇದೆ. ಈ ರೀತಿಯ ತಪ್ಪು ಹೆಸರುಗಳನ್ನು ಇಟ್ಟುಕೊಳ್ಳುವ ಮೂಲಕ ನಿಮ್ಮ ಜೀವನದಲ್ಲಿ ಅನವಶ್ಯಕವಾಗಿ ಸಮಸ್ಯೆಗಳನ್ನು ನೀವು ಜೀವನದಲ್ಲಿ ಆಹ್ವಾನ ಮಾಡಿದಂತಾಗುತ್ತದೆ ಸಂಖ್ಯಾಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹುಲ್, ರಾಜೇಶ್, ರಘು ಎನ್ನುವಂತಹ ಹೆಸರುಗಳನ್ನು ಹೊಂದಿರುವಂತಹ ವ್ಯಕ್ತಿಗಳ ಜೀವನದಲ್ಲಿ ಕಷ್ಟಗಳು ಎನ್ನುವುದು ಹುಡುಕಿಕೊಂಡು ಬರುತ್ತವೆ ಎಂಬುದಾಗಿ ಹೇಳಲಾಗುತ್ತದೆ. ಇವರಿಗೆ ಗೊತ್ತಿಲ್ಲದ ರೀತಿಯಲ್ಲಿ ಇವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನ ಇವರು ಆಹ್ವಾನ ಮಾಡಿಕೊಂಡಿರುತ್ತಾರೆ. ಇದನ್ನು ಅವರು ಎಷ್ಟೇ ಶಮನಗೊಳಿಸಬೇಕು ಎಂಬುದಾಗಿ ಪ್ರಯತ್ನ ಪಟ್ಟರು ಕೂಡ ಅದು ಬೆಂಕಿಗೆ ತುಪ್ಪ ಹಾಕಿದಂತಾಗುತ್ತದೆ. ಸಾಂಸಾರಿಕ ಜೀವನ ಕೂಡ ಸಾಕಷ್ಟು ಹದಗೆಟ್ಟಿರುವ ಕಾರಣದಿಂದಾಗಿ ಇವರು ದುಶ್ಚಟಕ್ಕೆ ದಾಸರಾಗುವ ಸಾಧ್ಯತೆ ಕೂಡ ಇರುತ್ತದೆ ಎಂಬುದನ್ನು ಶಾಸ್ತ್ರಗಳು ಹೇಳುತ್ತವೆ. ರಘುವೀರ್, ರಘುವರನ್ ಎನ್ನುವಂತಹ ಹೆಸರುಗಳನ್ನು ಹೊಂದಿರುವಂತಹ ಸೆಲೆಬ್ರಿಟಿಗಳು ಕೂಡ ಈ ಹೆಸರಿನಲ್ಲಿ ಇದ್ದರೆ ಸಂಪೂರ್ಣವಾಗಿ ಜೀವನದಲ್ಲಿ ಅಧೋಗತಿಗೆ ಬರ್ತಾರೆ ಅನ್ನೋದಕ್ಕೆ ಉದಾಹರಣೆಯನ್ನು ನೋಡೋದಾದರೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ರಘುವರನ್ ಹಾಗೂ ನಮ್ಮ ಕನ್ನಡ ಚಿತ್ರರಂಗದ ಒಂದು ಕಾಲದ ಸೂಪರ್ ಸ್ಟಾರ್ ಆಗಿರುವಂತಹ ರಘುವೀರ್ ಅವರ ಜೀವನವನ್ನು ನಾವು ಉದಾಹರಣೆಯಾಗಿ ತೆಗೆದುಕೊಳ್ಳಬಹುದಾಗಿದೆ. ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದು ಕೈ ತುಂಬಾ ಹಣವನ್ನು ಸಂಭಾವನೆ ರೂಪದಲ್ಲಿ ಪಡೆದುಕೊಳ್ಳುತ್ತಿದ್ದಂತಹ ಇವರು ಯಾವ ರೀತಿಯಲ್ಲಿ ತಮ್ಮ ಜೀವನದಲ್ಲಿ ವೈಫಲ್ಯವನ್ನು ಕಂಡುಕೊಳ್ಳುತ್ತಾರೆ ಹಾಗೂ ದುಶ್ಚಟಕ್ಕೆ ದಾಸರಾಗಿ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಾರೆ ಎಂಬುದನ್ನು ನೀವು ಈಗಾಗಲೇ ನೋಡಿರುತ್ತೀರಿ. ಎಮ್ ಅಕ್ಷರ ಇನ್ನು ಎಮ್ ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರನ್ನು ಹೊಂದಿರುವವರ ಜೀವನ ಕೂಡ ಸಾಕಷ್ಟು ಚಿಂತೆ ಹಾಗೂ ಗೋಳುಗಳಿಂದ ತುಂಬಿಕೊಂಡಿರುತ್ತದೆ. ಉದಾಹರಣೆಗೆ ಬಾಲಿವುಡ್ ನಟಿ ಆಗಿರುವಂತಹ ಮಧುಬಾಲ ಅವರ ಜೀವನವನ್ನೇ ತೆಗೆದುಕೊಂಡ್ರು ಕೂಡ ಅವರು ಎಷ್ಟು ಸೌಂದರ್ಯವತಿಯಾಗಿ ಜನಪ್ರಿಯ ನಟಿಯಾಗಿದ್ದರೂ ಕೂಡ ಯಾವ ರೀತಿಯಲ್ಲಿ ಅವರ ಜೀವನ ಅಂತ್ಯ ಆಯ್ತು ಅನ್ನೋದನ್ನ ನಿಜಕ್ಕೂ ಕೂಡ ನಾವು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಹೀಗಾಗಿ ಕೇಳೋದಕ್ಕೆ ಸ್ಟೈಲಿಶ್ ಆಗಿದೆ ಎಂದು ನೀವು ಎಂ ಅಕ್ಷರದಿಂದ ಮಕ್ಕಳಿಗೆ ಹೆಸರನ್ನ ಇಡುವುದಕ್ಕೆ ಹೋಗಬೇಡಿ. ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ಮಂಜುಳಾ ಅವರ ಜೀವನ ದುರಂತ ಅಂತ್ಯವನ್ನು ಸಹ ನಾವಿಲ್ಲಿ ಸ್ಮರಿಸಬಹುದು. ಪುಷ್ಪ ಎನ್ನುವಂತಹ ಹೆಸರನ್ನು ಹೊಂದಿರುವವರು ಕೂಡ ತಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನ ಅನವಶ್ಯಕವಾಗಿ ಎದುರಿಸುವಂತಹ ಹೆಸರನ್ನ ಹೊಂದಿರುತ್ತಾರೆ. ಒಂದು ವೇಳೆ ನಿಮ್ಮ ಮಕ್ಕಳಿಗೆ ನೀವು ಈ ರೀತಿ ಹೆಸರುಗಳನ್ನು ಇಟ್ಟಿದ್ದರೆ ಕೆಲವೊಂದು ನಿರ್ದಿಷ್ಟ ಸಮಯದ ಒಳಗೆ ಅವುಗಳನ್ನು ಬದಲಾವಣೆ ಮಾಡಿಕೊಳ್ಳುವಂತಹ ಎಲ್ಲಾ ಪ್ರಯತ್ನವನ್ನು ಮಾಡಿ.
ಈ ತರದ ಹೆಸರು ಇಟ್ಟುಕೊಂಡರೆ ಜೀವನ ಪೂರ್ತಿ ಕಷ್ಟ ತಪ್ಪಿದ್ದಲ್ಲ
No Ads
Log in to write reviews