ಒಬ್ಬ ಜೀವಂತ ವ್ಯಕ್ತಿಯ ಮೈ ಮೇಲಿನ ಬಟ್ಟೆಯನ್ನು ಕತ್ತರಿಸುವಂತಿಲ್ಲ, ಅದೇ ರೀತಿ ಬಟ್ಟೆಯನ್ನು ಹಾಕಿರುವಂತೆಯೇ ಹೊಲಿಯುವುದು, ಬಟ್ಟೆಗೆ ಬೆಂಕಿ ತಗುಲುವುದು ಇವೆಲ್ಲ ಆಗಬಾರದು ಮೇಲುನೋಟಕ್ಕೆ ಕಣ್ಣಿಗೆ ಕಂಡಿಲ್ಲ ಅಂತಲೋ ಅಥವಾ ನಿರ್ಲಕ್ಷ್ಯದಿಂದ ಹೀಗಾಗಿರುತ್ತದೆ ಅಷ್ಟೇ ಅಂತ ಹೇಳುವವರು ಸಹ ಇರಬಹುದು. ಆದರೆ ಇಂಥ ಘಟನೆಗಳು ಏನನ್ನೋ ಸೂಚಿಸುತ್ತವೆ. ಅದನ್ನು ಗ್ರಹಿಸುವ ಹಾಗೂ ಮುಂಜಾಗ್ರತೆ ವಹಿಸುವ ಎಚ್ಚರಿಕೆ ಅತ್ಯಗತ್ಯ. ಮುಂಜಾಗ್ರತ ಕ್ರಮ ಈ ರೀತಿ ಬೆಂಕಿ ತಗುಲಿದ ವಸ್ತ್ರವನ್ನು ಮತ್ತೊಮ್ಮೆ ಧರಿಸುವಂತೆ ಇಲ್ಲ. ಇನ್ನು ಈ ರೀತಿಯಾಗಿ ಬೆಂಕಿ ತಗುಲಿದ ವಸ್ತ್ರವನ್ನು ಹಾಲಿನ ಪಾತ್ರೆಯಲ್ಲಿ ನೆನೆಸಿಟ್ಟು, ಆ ನಂತರದಲ್ಲಿ ಆ ಬಟ್ಟೆಯನ್ನು ಮನೆಯಿಂದ ಹೊರಗೆ ಎಲ್ಲಾದರೂ ಬಿಸಾಡಲಾಗುತ್ತದೆ. ಹೀಗೊಂದು ಕ್ರಮವಿದೆ ಮನೆಯಲ್ಲಿನ ದೇವರ ಕೋಣೆಯಲ್ಲಿ ದೀಪ ಹಚ್ಚಿ, ಹೆಚ್ಚಿನ ಅನಾಹುತ ಆಗದಂತೆ ಕಾಪಾಡಿದೆ ಭಗವಂತ ಎಂದು ಪ್ರಾರ್ಥನೆ ಸಲ್ಲಿಸಿ. ಆ ನಂತರದಲ್ಲಿ ಜಾತಕದ ವಿಶ್ಲೇಷಣೆಯನ್ನು ಮಾಡಿಸಿ. ಶೇಕಡಾ ತೊಂಬತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಗ್ರಹಗಳ ಕ್ರೂರತೆ ಅಥವಾ ಗ್ರಹ ಸ್ಥಿತಿಯ ಕಾರಣಕ್ಕೆ ಶಾಂತಿ- ಪೂಜೆ- ಪುನಸ್ಸರಾದಿಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ಸೂಚಿಸುವಂಥದ್ದೇ ಆಗಿರುತ್ತದೆ. ಹಾಗೊಂದು ವೇಳೆ ಇಲ್ಲದಿದ್ದಲ್ಲಿ ಪ್ರಶ್ನಾ ಸಮಯಕ್ಕೆ ಕುಂಡಲಿಯನ್ನು ಸಿದ್ಧ ಮಾಡಿಕೊಂಡು, ಇದು ಯಾವುದರ ಮುನ್ಸೂಚನೆ ಎಂಬುದನ್ನು ವಿಶ್ಲೇಷಣೆ ಮಾಡಬೇಕಾಗುತ್ತದೆ
ಉಟ್ಟ ಬಟ್ಟೆಗೆ ಬೆಂಕಿ ತಗುಲಿದರೆ, ಹಿಂಗಾಗತ್ತೆ ಅನ್ನೋದರ ಮುನ್ಸೂಚನೆ ನಾ..?
No Ads
Log in to write reviews