ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಲೂರಪ್ಪ ಪೂಜಾರ ಹೆಂಡತಿ ಮೇಲೆ ಹಲ್ಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಮಾರಣಾಂತಿಕವಾಗಿ ಹಲ್ಲೆ ಮಾಡಿರೋ ಹಿನ್ನೆಲೆಯಲ್ಲಿ ಮಹಿಳೆ ಸ್ಥಿತಿ ಗಂಭೀರವಾಗಿದೆ. ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ಒಳಗಾದ ಗೀತಾ ಬೇಲೂರಪ್ಪ ಪೂಜಾರ ಅವರು ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು. ಹಲ್ಲೆ ಮಾಡಿದ ಆರೋಪಿ ಪತಿ ಬೇಲೂರಪ್ಪ ಮಾರಕಾಸ್ತ್ರ ಹಿಡಿದು ಸ್ಥಳದಲ್ಲೇ ನಿಂತಿದ್ದ. ಗಂಡನ ರೌದ್ರಾವತಾರ ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಡುಬೀದಿಯಲ್ಲೇ ಹೆಂಡತಿಗೆ ಮಚ್ಚಿನಿಂದ ಕೊಚ್ಚಿ ಪೊಲೀಸ್ಗೆ ಶರಣಾದ ಗಂಡ
No Ads
Log in to write reviews