ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಕ್ಯಾಂಪಸ್ನೊಳಗೆ ವಿದ್ಯಾರ್ಥಿನಿಯೋರ್ವಳ ಬರ್ಬರ ಹತ್ಯೆ ನಡೆದಿದೆ. ಪ್ರೀತಿಯ ವಿಚಾರಕ್ಕೆ ಹತ್ಯೆ ನಡೆದಿದೆ ಎನ್ನಲಾಗ್ತಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಗಲ್ಲಿಗೇರಿಸುವಂತೆ ಎಬಿವಿಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಹುಬ್ಬಳ್ಳಿ ಮಹಾನಗರ ಪಾಲಿಕೆ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾ ಹಿರೇಮಠ್ ಹತ್ಯೆಯಾದ ದುರ್ದೈವಿ. ಪ್ರೀತಿಯ ವಿಚಾರಕ್ಕೆ ಬೆಳಗಾವಿ ಮೂಲದ ಫಯಾಜ್ ಎಂಬಾತ 11 ಬಾರಿ ಇರಿದು ಭೀಕರವಾಗಿ ಕೊಲೆಗೈದಿದ್ದಾನೆ. ಆಕೆ ಸ್ಥಳದಲ್ಲೇ ಅಸುನೀಗಿದ್ದಾಳೆ. ಕೃತ್ಯ ಎಸಗಿ ರಾಜಕಾಲುವೆಯ ಕೆಳಗೆ ಅಡಗಿ ಕುಳಿತಿದ್ದ ಫಯಾಜ್ನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ. ಸದ್ಯ ನಾವು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಯಾರು ಈ ಕೆಲಸ ಮಾಡಿದ್ದಾನೋ, ಅವನಿಗೆ ಶಿಕ್ಷೆ ಕೊಡಬೇಕು. ಇಲ್ಲ ಅಂದರೆ ಕಾಲೇಜ್ ಅನ್ನೇ ಬಂದ್ ಮಾಡಿಸುತ್ತೇವೆ. ನನ್ನ ಮಗಳಿಗೆ ನ್ಯಾಯ ಬೇಕು ಎಂದು ನೇಹಾ ತಾಯಿ ಕಣ್ಣೀರು ಇಟ್ಟಿದ್ದಾರೆ ನೇಹಾ ತಂದೆ ನಿರಂಜನ್ ಹಿರೇಮಠ್ ಮಾತನಾಡಿ.. ಅವನಿಗೆ ಯಾವುದೇ ಕಾರಣಕ್ಕೂ ಬೇಲ್ ಸಿಗಬಾರದು. ಸರ್ಕಾರ ಆ ಕೆಲಸವನ್ನು ಮಾಡಬೇಕು. ಅವನಿಗೆ ಗಲ್ಲು ಶಿಕ್ಷೆ ಆಗಬೇಕು. ನಾನೇ ಹುಬ್ಬಳ್ಳಿ-ಮಹಾನಗರ ಪಾಲಿಕೆ ಸದಸ್ಯ. ನನ್ನ ಮಗಳಿಗೆ ಹೀಗೆ ಆಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಕಾರ್ಪೊರೇಟರ್ ಪುತ್ರಿಯ ಭೀಕರ ಹತ್ಯೆ; ಲವ್ ಜಿಹಾದ್ ಅನುಮಾನ, ನೇಹಾ ಹಿರೇಮಠ್ ತಾಯಿ ಕಣ್ಣೀರು
No Ads
Log in to write reviews