No Ads

ಐಸ್ಕ್ರೀಮ್ ತಿಂದ ಮೇಲೆ ಈ ತಪ್ಪುಗಳನ್ನು ಮಾಡಲೇಬೇಡಿ;

ಕರ್ನಾಟಕ 2024-04-04 12:19:55 52
post

ಉರಿ ಬಿಸಿಲಿನ ಬೇಸಿಗೆ ಆರಂಭವಾಗಿದೆ. ವಿಪರಿತ ಸೆಕೆ, ಬಾಯಾರಿಕೆ, ದಣಿವು ಆರಿಸಿಕೊಳ್ಳಲು ಜನ ಐಸ್​ ಕ್ರೀಮ್​​ ಹಾಗೂ ತಂಪು ಪಾನೀಯಗಳ ಮೊರೆ ಹೋಗ್ತಿದ್ದಾರೆ.ಬೇಸಿಗೆಯಲ್ಲಿ ಸಾಮಾನ್ಯವಾಗಿ ಜನ ಐಸ್​​ಕ್ರೀಂಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಐಸ್​ಕ್ರೀಂ ಇಷ್ಟವೆಂದು ವಿಪರೀತ ತಿನ್ನುವುದರ ಜೊತೆಗೆ ಕೆಲವು ವಸ್ತುಗಳನ್ನು ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ಕುತ್ತು ಬರೋದ್ರಲ್ಲಿ ಡೌಟೇ ಇಲ್ಲ. ಹೀಗಾಗಿ ನೀವು ಐಸ್​ಕ್ರೀಂಗಳನ್ನು ತಿನ್ನುವಾಗ ಮತ್ತು ತಿಂದ ನಂತರ ಹೇಗಿರಬೇಕು ಅನ್ನೋದ್ರ ವಿವರ ಇಲ್ಲಿದೆ.ಐಸ್ ಕ್ರೀಂ ತಿಂದ ನಂತರ ಬಿಸಿಯಾದ ಆಹಾರ ಮತ್ತು ನೀರನ್ನು ಸೇವಿಸಬೇಡಿ. ಚಹಾ, ಕಾಫಿ, ಸೂಪ್, ಗ್ರೀನ್ ಟೀ ಇತ್ಯಾದಿ.. ಅಷ್ಟೇ ಅಲ್ಲ, ಐಸ್ ಕ್ರೀಂ ತಿಂದ ನಂತರ ಕಿತ್ತಳೆ, ನಿಂಬೆ ಪಾನಕ, ದ್ರಾಕ್ಷಿಯಂತಹ ಹಣ್ಣುಗಳನ್ನು ಸೇವಿಸುವುದರಿಂದಲೂ ದೇಹಕ್ಕೆ ಅಪಾಯ.ಐಸ್ ಕ್ರೀಂ ತಿಂದ ನಂತರ ಮದ್ಯಪಾನ ಮಾಡಬಾರದು. ಒಂದು ವೇಳೆ ಸೇವಿಸಿದರೆ ವಾಂತಿ, ಭೇದಿ ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆ ಶುರುವಾಗುತ್ತದೆ. ಐಸ್ ಕ್ರೀಮ್ ತಿಂದ ನಂತರ ಮಟನ್, ಬೆಣ್ಣೆ, ತುಪ್ಪ ಆಧಾರಿತ ಖಾದ್ಯಗಳು, ಬಿರಿಯಾನಿ, ಚೈನೀಸ್ ಫುಡ್, ಜಂಕ್ ಫುಡ್ ಮುಂತಾದ ಘಟ್ಟಿ ಪದಾರ್ಥ ಸೇವಿಸುವುದನ್ನು ತಪ್ಪಿಸಬೇಕು.ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅತಿಯಾಗಿ ಐಸ್ ಕ್ರೀಂ ಸೇವನೆ ಮಾಡಬಾರದು. ಅದು ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಐಸ್ ಕ್ರೀಮ್ ತಿಂದ ನಂತರ ಕನಿಷ್ಠ 40 ನಿಮಿಷಗಳ ಕಾಲ ಏನನ್ನೂ ತಿನ್ನದಿರಲು ಪ್ರಯತ್ನಿಸಿ. ಐಸ್ ಕ್ರೀಂ ಕೆಲವರಿಗೆ ಹಾನಿಯುಂಟುಮಾಡಬಹುದು. ಇದರಿಂದ ಅಲರ್ಜಿಯಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.  

No Ads
No Reviews
No Ads

Popular News

No Post Categories
Sidebar Banner
Sidebar Banner