No Ads

ಹೆಣ್ಣು ನೋಡಲು ಹೋಗಿದ್ದ ಹುಡುಗನ ಹನಿಟ್ರ್ಯಾಪ್; ನಾಲ್ವರು ಮಹಿಳೆಯರಿಂದ ಸುಲಿಗೆ

ಜಿಲ್ಲೆ 2025-02-01 12:21:34 392
post

ಬೆಂಗಳೂರು : ವಧು ತೋರಿಸುವ ರೀತಿಯಲ್ಲಿ ಯುವಕನೊಬ್ಬನಿಗೆ ಹನಿಟ್ರ್ಯಾಪ್​ ಮಾಡಿದ್ದ ನಾಲ್ವರು ಮಹಿಳೆಯರು ಸೇರಿದಂತೆ 6 ಜನರನ್ನು ಪೊಲೀಸರು ಬಂಧಿಸಿದ್ದು. ಸಂತ್ರಸ್ಥ ಯುವಕನಿಂದ ಆರೋಪಿಗಳು 50 ಸಾವಿರ ಹಣವನ್ನು ವಸೂಲಿ ಮಾಡಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳನ್ನು ಗೀತಾ, ಮಂಜುಳಾ, ವಿಜಯಲಕ್ಷ್ಮಿ, ಲೀಲಾವತಿ, ಹರೀಶ್, ವೆಂಕಟೇಶ ಎಂದು ಗುರುತಿಸಲಾಗಿದೆ.

ಆರೋಪಿ ಮಂಜುಳ ಇತ್ತಿಚೆಗೆ ಸಂತ್ರಸ್ಥ ಯುವಕನೊಂದಿಗೆ ಪರಿಚಿತಳಾಗಿದ್ದಳು. ಪರಸ್ಪರ ನಂಬರ್​ ಬದಲಿಸಿಕೊಂಡಿದ್ದ ಇಬ್ಬರು. ಪೋನ್​ ಕಾಲ್​ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಮದುವೆಗೆ ವಧುವನ್ನು ಹುಡುಕುತ್ತಿರುವುದಾಗಿ ಹೇಳಿದ್ದ ಸಂತ್ರಸ್ಥನಿಗೆ ಜನವರಿ 20ರಂದು ಮಂಜುಳಾ ಕರೆ ಮಾಡಿ ಹೆಬ್ಬಾಳದಲ್ಲಿರುವ ತನ್ನ ಸ್ನೇಹಿತೆ ಮನೆಗೆ ಹೋದರೆ ವಧು ತೋರಿಸುವುದಾಗಿ ಹೇಳಿದ್ದಳು.

ಈಕೆಯ ಮಾತನ್ನು ನಂಬಿದ ಸಂತ್ರಸ್ಥ ಆಕೆಯ ಸ್ನೇಹಿತೆ ವಿಜಯಲಕ್ಷ್ಮೀ ಮನೆಗೆ ಹೋಗಿದ್ದನು. ಈ ವೇಳೆ ಲೀಲಾವತಿ ಎಂಬಾಕೆಯನ್ನು ಪರಿಚಯಿಸಿದ್ದ ವಿಜಯಲಕಲಕ್ಷ್ಮೀ, ಟೀ ಕುಡಿಯುತ್ತಿರಿ ಸ್ವಲ್ಪ ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಈ ವೇಳೇ ಮನೆಗೆ ಎಂಟ್ರಿಕೊಟ್ಟ ನಕಲಿ ಪೊಲೀಸರು ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಿರ, ಇಬ್ಬರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು.

ಈ ವೇಳೇ ಆರೋಪಿಗಳು ಸಂತ್ರಸ್ಥ ಯುವಕನಿಂದ 50 ಸಾವಿರ ಹಣವನ್ನು ಪೋನ್​ ಪೇ ಮಾಡಿಸಿಕೊಂಡಿದ್ದರು. ಬಳಿಕ ಹೆಬ್ಬಾಳ ಪೊಲೀಸ್​ ಠಾಣೆಗೆ ಯುವಕ ದೂರು ನೀಡಿದ್ದನು. ದೂರನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗೆ ಹುಡುಕಾಟ ಆರಂಭಿಸಿದ್ದರು. ಇದೀಗ ಪೊಲೀಸರು ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರಷರನ್ನು ಬಂಧೀಸಿದ್ದಾರೆ ಎಂದು ತಿಳಿದು ಬಂದಿದೆ.

 

No Ads
No Reviews
No Ads

Popular News

No Post Categories
Sidebar Banner
Sidebar Banner