No Ads

ಹೋಳಿ ಸ್ಪೆಷಲ್

ಮನರಂಜನೆ 2024-03-21 11:33:34 44
post

  ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬವು ವಿಶೇಷವಾದ ಹಿನ್ನೆಲೆ ಹಾಗೂ ಕಥೆಯನ್ನು ಒಳಗೊಂಡಿದೆ. ಅಂತೆಯೇ ಹೋಳಿ ಹಬ್ಬ ಎಂದು ಕರೆಯುವ ಬಣ್ಣದ ಹಬ್ಬವು ವಿಶೇಷವಾದ ಆಚರಣೆಯನ್ನು ಒಳಗೊಂಡಿದೆ. ಈ ಹಬ್ಬವನ್ನು ಪ್ರತಿಯೊಬ್ಬ ವ್ಯಕ್ತಿಯು ಸ್ವಚ್ಛಂದ ಮನಸ್ಸಿನಿಂದ ಆಹ್ವಾನಿಸಿ ಆಚರಿಸಬೇಕು. ತಾನು, ತನ್ನವರು ಹಾಗೂ ನೆರೆಯವರೊಂದಿಗೆ ಕೂಡಿ ನಲಿಯಬೇಕು. ಆಗ ಹೊಸ ವರ್ಷದ ಆರಂಭವು ಜೀವನದಲ್ಲಿ ಸಂತೋಷನ್ನು ತಂದುಕೊಡುವುದು. ಎಲ್ಲರೊಂದಿಗೂ ಬೆರೆತು ಆಚರಿಸುವ ಈ ಹಬ್ಬವು ಉತ್ತಮ ಒಡನಾಟ ಹಾಗೂ ಮಾನಸಿಕವಾಗಿ ನೆಮ್ಮದಿಯನ್ನು ತಂದುಕೊಡುವುದು. ಆದ್ದರಿಂದ ಈ ಹಬ್ಬವನ್ನು ಪ್ರತಿಯೊಬ್ಬರು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಬೇಕು ಎಂದು ಧಾರ್ಮಿಕ ಸಂಗತಿಗಳು ತಿಳಿಸುತ್ತವೆ. ಹೋಳಿ ಹಬ್ಬಕ್ಕೆ ಕೆಲವೇ ದಿನಗಳು ಉಳಿದಿವೆ. ಬಣ್ಣಗಳ ಈ ಹಬ್ಬವನ್ನು ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಹೋಳಿಯಲ್ಲಿ ಬಣ್ಣಗಳೊಂದಿಗೆ ಆಡಲು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಲಾಗುತ್ತದೆ ಭಾರತದ ದೊಡ್ಡ ಹಬ್ಬಗಳಲ್ಲಿ ಹೋಳಿಯೂ ಒಂದಾಗಿದೆ. ಇನ್ನೇನು ಹೋಳಿ ಹಬ್ಬಕ್ಕೆ ಕೆಲವೇ ದಿನಗಳು ಉಳಿದಿವೆ. ಬಣ್ಣಗಳ ಈ ಹಬ್ಬವನ್ನು ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಈ ಓಕುಳಿ ಹಬ್ಬವು ಬಣ್ಣ, ಸಂತೋಷ, ಉತ್ಸಾಹಗಳಿಂದ ಕೂಡಿರುತ್ತದೆ. ಅಲ್ಲದೆ ಹೋಳಿ ಹಬ್ಬವನ್ನು ಪರಸ್ಪರ ಪ್ರೀತಿ ಹಂಚುವ ಹಬ್ಬವೆಂದು ಪರಿಗಣಿಸಲಾಗುತ್ತದೆ. ಹೋಳಿ ವಿವಿಧ ಬಣ್ಣಗಳ ಹಬ್ಬವಾಗಿದ್ದರೂ ಕೂಡ ಓಕುಳಿ ಆಡುವಾಗ ಬಿಳಿ ಬಟ್ಟೆಗಳನ್ನು ಧರಿಸುವ ಸಂಪ್ರದಾಯವಿದೆ ಹೋಳಿ ಅಥವಾ ಓಕುಳಿ ಆಡುವಾಗ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಲು ಮುಖ್ಯ ಕಾರಣವೆಂದರೆ ಬಿಳಿ ಬಟ್ಟೆಗಳ ಮೇಲೆ ಯಾವುದೇ ಬಣ್ಣ ಬಿದ್ದರು ಕೂಡ ತುಂಬಾ ಸುಂದರವಾಗಿ ಕಾಣುತ್ತದೆ. ಅದು ಬಿಳಿಯ ಬಣ್ಣದ ಜೊತೆಗೆ ಬಹುಬೇಗ ಹೊಂದಿಕೊಳ್ಳುತ್ತದೆ. ಇದು ಎಲ್ಲಾ ಬಣ್ಣಗಳಲ್ಲಿಯೂ ಆಗುವುದಿಲ್ಲ. ಇದರಿಂದಾಗಿ ನಿಮ್ಮ ಬಟ್ಟೆಯ ಜೊತೆಗೆ ನೀವು ಕೂಡ ಸುಂದರವಾಗಿ ಕಾಣುತ್ತೀರಿ. ಅದೂ ಅಲ್ಲದೆ ನೀವು ಎಷ್ಟು ಹೋಳಿ ಆಡಿದ್ದೀರಾ ಎಂದು ಕೂಡ ಈ ಬಣ್ಣ ಹೇಳುತ್ತವೆ. ಏಕೆಂದರೆ ಜಾಸ್ತಿ ಓಕುಳಿ ಆಡಿದ್ದರೆ ಬಿಳಿ ಬಟ್ಟೆಗಳು ಸಂಪೂರ್ಣವಾಗಿ ವಿಭಿನ್ನ ಬಣ್ಣಗಳಿಂದ ಕೂಡಿರುತ್ತವೆ. ಹೋಳಿ ಹಬ್ಬವು ಬೇಸಿಗೆ ಕಾಲದಲ್ಲಿ ಬರುವುದರಿಂದ ಬಿಳಿ ಬಣ್ಣದ ಬಟ್ಟೆಗಳು ಪರಿಸರದಿಂದ ಕಡಿಮೆ ಶಾಖವನ್ನು ಹೀರಿಕೊಳ್ಳುತ್ತದೆ, ಹಾಗಾಗಿ ಹೆಚ್ಚು ಬಿಸಿಯ ಅನುಭವ ಆಗುವುದಿಲ್ಲ. ಈ ಹಬ್ಬದಂದು ದಿನ ಪೂರ್ತಿ ಬಿಸಿಲಿನಲ್ಲಿ ಬಣ್ಣಗಳೊಂದಿಗೆ ಆಟವಾಡಿದರೂ ಕೂಡ ನಿಮಗೆ ಶಾಖದ ಅನುಭವ ಆಗುವುದಿಲ್ಲ. ಹಾಗಾಗಿ ಹಿಂದಿನಿಂದಲೂ ಬಿಳಿ ಬಣ್ಣದ ಬಟ್ಟೆಯನ್ನು ಹೋಳಿ ಹಬ್ಬದ ದಿನ ತಪ್ಪದೆ ಧರಿಸುವುದು ಸೂಕ್ತ ಎನ್ನಲಾಗುತ್ತದೆ. ಹೋಳಿ ಹಬ್ಬದಂದು ಬಿಳಿ ಬಟ್ಟೆಗಳನ್ನು ಧರಿಸುವುದರ ಹಿಂದೆ ಮತ್ತೊಂದು ಕಾರಣವಿದೆ. ಬಿಳಿ ಬಣ್ಣವನ್ನು ಸಕಾರಾತ್ಮಕ ಶಕ್ತಿಯನ್ನು ಬೇಗ ಸೆಳೆಯುವ ಮತ್ತು ಶಾಂತಿಯ ಸಂದೇಶವನ್ನು ನೀಡುವ ಬಣ್ಣವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಹೋಳಿ ಹಬ್ಬವು ಕೂಡ ಶಾಂತಿಯ ಸಂದೇಶವನ್ನು ನೀಡುವುದರಿಂದ ಈ ಹಬ್ಬದಲ್ಲಿ ತಪ್ಪದೆ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವ ಪ್ರವೃತ್ತಿ ಇದೆ. ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು, ಸಂಪ್ರದಾಯದ ಹೊರತಾಗಿ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಒಳ್ಳೆಯ ಆಯ್ಕೆಯಾಗಿದೆ. .

No Ads
No Reviews
No Ads

Popular News

No Post Categories
Sidebar Banner
Sidebar Banner