No Ads

ಸಿದ್ದರಾಮಯ್ಯನ ಕೊಂದ್ರೆ ಹಿಂದೂಗಳಿಗೆ ನೆಮ್ಮದಿ: ಪೋಸ್ಟ್ ಹಾಕಿದ್ದ ಹೋಂ ಗಾರ್ಡ್ ಬಂಧನ, ಹೆಚ್ಚಾದ ಪ್ರತೀಕಾರದ ಸಂದೇಶಗಳು

ಕರ್ನಾಟಕ 2025-05-05 16:09:33 765
post

ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ (Suhas Shetty Murder Case) ಸಂಬಂಧಿಸಿದಂತೆ ಈಗಾಗಲೇ ಮಂಗಳೂರು ಪೊಲೀಸರು (Mangaluru Police) 8 ಜನರನ್ನು ಬಂಧಿಸಿದ್ದು, ತನಿಖೆ ತನಿಖೆ ನಡೆಸಿದ್ದಾರೆ. ಇದರ ಮಧ್ಯ ಸುಹಾಸ್ ಶೆಟ್ಟಿ ಕೊಲೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀಕಾರದ ಬೆದರಿಕೆಗಳು ಹರಿದಾಡುತ್ತಿವೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೋಂ ಗಾರ್ಡ್​ ಅವಹೇಳಕನಕಾರಿ ಕಮೆಂಟ್ ಮಾಡಿದ್ದಾನೆ. ಹೌದು…ಸಿಎಂ ಸಿದ್ದರಾಮಯ್ಯನನ್ನು ಕೊಂದ್ರೆ ಹಿಂದೂಗಳಿಗೆ ನೆಮ್ಮದಿ ಎಂದು ಕಾಮೆಂಟ್ ಹಾಕಿದ್ದ ಉಡುಪಿಯ ಕಾರ್ಕಳದ ಹೋಂ ಗಾರ್ಡ್ ಸಂಪತ್ ಸಾಲಿಯಾನ್​ ಬಂಧನವಾಗಿದೆ.

ಬೆಂಗಳೂರಿನ ಹೋಂ ಗಾರ್ಡ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂಪತ್ ಸಾಲಿಯಾನ್​  ಎನ್ನುವಾತ ಸಿಎಂ ಸಿದ್ದರಾಮಯ್ಯನನ್ನು ಕೊಂದ್ರೆ ಹಿಂದೂಗಳಿಗೆ ನೆಮ್ಮದಿ ಎಂದು ಸಂಪತ್ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಿದ್ದಾನೆ. ಈ ಸಂಬಂಧ ಸದ್ಯ ಕಾರ್ಕಳ ಪೊಲೀಸರು ಹೋಂ ಗಾರ್ಡ್ ಸಂಪತ್​ನನ್ನು ಬಂಧಿಸಿದ್ದಾರೆ.

ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಏಟಿಗೆ ಎದುರೇಟು, ಪ್ರತೀಕಾರದ ಸಂದೇಶಗಳು ಹರಿದಾಡುತ್ತಿವೆ.  ವಿಹೆಚ್​ಪಿ ಮತ್ತು ಬಜರಂಗದಳ ಮುಖಂಡರಿಗೆ ಜೀವ ಬೆದರಿಕೆ ಹಾಕಲಾಗಿದೆ. ಮುಂದಿನ ಟಾರ್ಗೆಟ್ ವಿಶ್ವ ಹಿಂದೂ ಪರಿಷತ್​ ಶರಣ್​ ಪಂಪ್​ವೆಲ್​ ಮತ್ತು ಬಜರಂಗದಳ ಮುಖಂಡ ಭರತ್​ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಲಾಗಿದೆ.

2018ರಲ್ಲಿ ಮಂಗಳೂರಿನ ಕೊಟ್ಟಾರ ಚೌಕಿ ಬಳಿ ನಡೆದಿದ್ದ ಬಷೀರ್ ಹತ್ಯೆ ಆರೋಪಿ ಶ್ರೀಜಿತ್​ಗೆ ಮತ್ತೆ ಕೊಲೆ ಬೆದರಿಕೆ ಹಾಕಲಾಗಿದೆ. ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರತೀಕಾರಕ್ಕೆ ಬಷೀರ್ ಕೊಲೆಯಾಗಿತ್ತು. ಬಷೀರ್ ಕೊಲೆ ಪ್ರಕರಣದ ಆರೋಪಿ ಶ್ರೀಜಿತ್ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಯಾಗಿದ್ದಾರೆ. ನೆಕ್ಸ್ಟ್​​ ಟಾರ್ಗೆಟ್ ಈ ಶ್ರೀಜಿತ್ ಅಂತ ‘Killers_target’ ಎಂಬ ಫೇಸಬುಕ್​ ಪೇಜ್​ನಿಂದ ಈ ಹಿಂದೆ ಪೋಸ್ಟ್ ಮಾಡಲಾಗಿತ್ತು. ರವಿವಾರ ಮತ್ತೆ ‘Abu_Sifiyan678′ ಪೇಜ್​ನಿಂದ ಶ್ರೀಜಿತ್​ಗೆ ‘ಎಲ್ಲಿದೀಯಾ ನೀನು, ನೆಕ್ಸ್ಟ್ ನೀನೆ’ ಅಂತ ಮಲಯಾಳಂನಲ್ಲಿ ಕೊಲೆ ಬೆದರಿಕೆ ಮೆಸೇಜ್ ಕಳುಹಿಸಿದ್ದಾರೆ.

“ಸುಹಾಸ್ ಶೆಟ್ಟಿಯನ್ನು ಕೊಂದವರು, ಕೊಂದವರ ಮನೆಯವರು, ಅಲ್ಲಿ ಯಾರು ಸಿಗುತ್ತಾರೆ ಅವರನ್ನು ಕೊಚ್ಚಿ ಕೊಲ್ಲುತ್ತೇವೆ” ಎಂದು ​ ಧನುಷ್.ಸಿ ಎಂಬುವರು ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದ ಫೇಸ್​​ಬುಕ್ ಫೋಸ್ಟ್​ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ‌ ತಣ್ಣೀರುಪಂಥ ನಿವಾಸಿ ಧನುಷ್.ಸಿ ಪುಂಜಾಲಕಟ್ಟೆ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಕೋಮುದ್ವೇಷ ಹರಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂಥ ಪ್ರಚೋದನಾತ್ಮಕ ವಿಡಿಯೋವನ್ನು ಪ್ರಸಾರಮಾಡಿದ ಹಿನ್ನೆಲೆಯಲ್ಲಿ ಬಿಎನ್​ಎಸ್​ 196(1)(A), 353(1)(C)ರ ಅಡಿ ಪ್ರಕರಣ ದಾಖಲಾಗಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner