ದಾಳಿಂಬೆ ಹಣ್ಣುಗಳಲ್ಲಿ ವಿಶಿಷ್ಟವಾದ ಹಣ್ಣು. ಕೆಂಪು ಡೈಮಂಡ್ ರೀತಿಯಲ್ಲಿ ಹಣ್ಣಿನ ಒಳಗೆ ದಾಳಿಂಬೆ ಬೀಜಗಳು ನಳನಳಿಸುತ್ತಿರುತ್ತಾವೆ. ನೋಡಲು ಆಕರ್ಷಣೆಯಾಗಿರುವ ಇದು ಎಲ್ಲ ಹಣ್ಣುಗಳಿಗಿಂತಲೂ 100 ಪಟ್ಟು ಆರೋಗ್ಯಕ್ಕೆ ಒಳ್ಳೆಯದು. ಆಗಾಗ ನಾವು ಈ ದಾಳಿಂಬೆ ತಿನ್ನುತ್ತಿದ್ದರೆ ದೇಹದಲ್ಲಿನ ಸಮಸ್ಯೆಗಳನ್ನು ಮಂಗಮಾಯ ಆಗುತ್ತಾವೆ. ಅಲ್ಲದೇ ಬರುವ ರೋಗಗಳನ್ನು ಇದು ಮೊದಲ ಹಂತದಲ್ಲೇ ತಡೆದು ಸರ್ವನಾಶ ಮಾಡುತ್ತದೆ. ದೇಹಕ್ಕೆ ಯಾವೆಲ್ಲ ರೀತಿಯಲ್ಲಿ ದಾಳಿಂಬೆ ಪ್ರಯೋಜನಾ ಆಗುತ್ತದೆ ಎಂದು ಇಂದು ಇಲ್ಲಿ ತಿಳಿದುಕೊಳ್ಳೋಣ.ದಾಳಿಂಬೆಯಲ್ಲಿ ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶವಿದೆ. ಆದರೆ ಫೈಬರ್ ಅಂಶ, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಹೆಚ್ಚಾಗಿ ಇದ್ದು ಇವು ಆರೋಗ್ಯಕ್ಕೆ ಪುಷ್ಠಿ ಒದಗಿಸುತ್ತಾವೆ. ರಕ್ತ ಹೆಚ್ಚು ಮಾಡುವುದರ ಜೊತೆಗೆ ಹೃದಯ, ರಕ್ತನಾಳಗಳು, ಮೂತ್ರಪಿಂಡದ ಆರೋಗ್ಯವನ್ನು ಉತ್ತಮವಾಗಿ ಇಡುವಲ್ಲಿ ಸಹಕರಿಸುತ್ತದೆ. ಪ್ರತಿಯೊಂದು ಹಣ್ಣು ತನ್ನದೇ ಆದ ವಿಟಮಿನ್‌ಗಳಿಂದ ಸಮೃದ್ಧವಾಗಿದ್ದು, ನಮ್ಮ ಆರೋಗ್ಯ ಕಾಪಾಡುತ್ತಾವೆ. ಅದರಲ್ಲಿ ಈ ದಾಳಿಂಬೆ ಕೂಡ ಒಂದಾಗಿದೆ. ದಾಳಿಂಬೆ ಹಣ್ಣು ಅಂಟಿ ವೈರಲ್, ಟ್ಯೂಮರ್ ಮತ್ತು ಆಕ್ಸಿಡೆಂಟ್ ಲಕ್ಷಣ ಹೊಂದಿದೆ. ಇದರಲ್ಲಿ ವಿಟಮಿನ್ A, ವಿಟಮಿನ್ C ಮತ್ತು ವಿಟಮಿನ್ E ಮತ್ತು ಫೋಲಿಕ್ ಆಮ್ಲಗಳಿವೆ. ದಿನಲೂ ದಾಳಿಂಬೆಯನ್ನು ತಿನ್ನುವುದರಿಂದ ಅಥವಾ ಅದರ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಗೆ ಅತ್ಯುತ್ತಮವಾಗಿ ಸಹಾಯ ಮಾಡುತ್ತದೆ. ರಕ್ತದೊತ್ತಡ, ಮಧುಮೇಹವನ್ನು ಸುಧಾರಿಸುವುದರ ಜೊತೆ ಜೊತೆಗೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಅದು ಸನ್‌ಸ್ಕ್ರೀನ್ ಆಗಿ ಕೆಲಸ ಮಾಡುತ್ತದೆ. ಚರ್ಮವನ್ನು ಒಳಗಿನಿಂದ ರಕ್ಷಿಸಿ ಕಾಂತಿಯುತವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಇದನ್ನು ನಿತ್ಯ ಸೇವನೆ ಮಾಡುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ದಾಳಿಂಬೆ ಹಣ್ಣು ರುಚಿಯಲ್ಲಿ ಮಾತ್ರವಲ್ಲದೆ ಆರೋಗ್ಯ ಪ್ರಯೋಜನಗಳಲ್ಲಿಯೂ ಅದ್ಭುತವಾಗಿದೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಅಡಗಿದ್ದರಿಂದ ಮಕ್ಕಳಿಂದ ವೃದ್ಧರವರೆಗೂ ತಿನ್ನುವುದರಿಂದ ಆರೋಗ್ಯವನ್ನು ಇನ್ನಷ್ಟು ಸುಧಾರಿಸಿಕೊಳ್ಳಬಹುದು. ಉತ್ತಮವಲ್ಲದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತಾವೆ. ದಾಳಿಂಬೆಯಲ್ಲಿನ ಆ್ಯಂಟಿಆಕ್ಸಿಡೆಂಟ್‌ಗಳು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಮೆದುಳಿನ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ದಾಳಿಂಬೆಯಲ್ಲಿರುವ ಮೆಗ್ನೀಷಿಯಂ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿ ಪ್ರತಿ ವೈದ್ಯರು ರೋಗಿಗಳಿಗೆ ದಾಳಿಂಬೆ ತಿನ್ನುವಂತೆ ಸಲಹೆ ನೀಡುತ್ತಿರುತ್ತಾರೆ.
ದಾಳಿಂಬೆ ತಿನ್ನುವುದರಿಂದ ಉಪಯೋಗ
No Ads
Log in to write reviews