ತೃತೀಯಲಿಂಗಿಗಗಳು ಸಾಮಾನ್ಯರಂತೆ ಎಲ್ಲದರಲ್ಲೂ ಅವಕಾಶ ಇದೆ. ಆದರೆ ಈ ಬಗ್ಗೆ ಕೇಳುವ ಹಕ್ಕು ಅವರಲ್ಲಿ ಇಲ್ಲ. ಇದಕ್ಕೆ ಮುಖ್ಯ ಕಾರಣ ಹಿಂಜರಿಕೆ, ವಿದ್ಯಾಭ್ಯಾಸದ ಕೊರತೆ ಆಗಿದೆ. ತೃತೀಯಲಿಂಗಿಗಳು ಸಮಾಜದಲ್ಲಿ ಎಲ್ಲರಿಗೂ ಮಾದರಿ ಆಗುವಂತೆ ಈಗೀಗ ಬದುಕುತ್ತಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ತೆಲಂಗಾಣ ಸರ್ಕಾರ ತೆಗೆದುಕೊಂಡ ಒಂದು ನಿರ್ಧಾರಕ್ಕೆ ಅವರ ಬದುಕಲ್ಲಿ ಹೊಸ ಬೆಳಕು ಬಂದಂತೆ ಆಗಿದೆ. ಟ್ರಾಫಿಕ್ಗಳಲ್ಲಿ ಭಿಕ್ಷೆ ಬೇಡುತ್ತಿದ್ದ ತೃತೀಯಲಿಂಗಿಗಗಳನ್ನು ಹೈದರಾಬಾದ್ ಪೊಲೀಸರು ಕರೆದುಕೊಂಡು ಹೋಗಿ ಒಂದು ತಿಂಗಳು ಕಾಲ ಟ್ರೈನಿಂಗ್ ಕೊಟ್ಟಿದ್ದಾರೆ. ಟ್ರಾಫಿಕ್ನಲ್ಲಿ ಹೇಗೆಲ್ಲಾ ಇರಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ನಿಮಗೂ ಉತ್ತಮ ರೀತಿಯಲ್ಲಿ ಬದುಕಲು ಅವಕಾಶ ಇದೆ ಎಂದು ಧೈರ್ಯ ಹೇಳಿದ್ದು ಸರ್ಕಾರ ಟ್ರಾಫಿಕ್ ಇಲಾಖೆಯಲ್ಲಿ ಅವರಿಗೆ ಉದ್ಯೋಗ ನೀಡಿದೆ. ಉದ್ಯೋಗ ಪಡೆದಂತ ತೃತೀಯಲಿಂಗಿಗಗಳ ಮನೆಗಳಲ್ಲಿ ಭಾರೀ ಸಂತಸ ವ್ಯಕ್ತವಾಗಿದೆ. ಕೆಲಸ ಮುಗಿಸಿಕೊಂಡು ಮನೆಗೆ ಬಂದ ತೃತೀಯಲಿಂಗಿಯನ್ನ ಮನೆಯಲ್ಲಿದ್ದವರು ತಬ್ಬಿಕೊಂಡು ಖುಷಿಪಟ್ಟಿದ್ದಾರೆ. ಉದ್ಯೋಗ ಪಡೆದಕ್ಕಾಗಿ ಹೂವಿನ ಹಾರ ಹಾಕಿ ಕೇಕ್ ಅನ್ನು ಕಟ್ ಮಾಡಿ ಸೆಲೆಬ್ರೆಷನ್ ಮಾಡಿದ್ದಾರೆ. ಸಿಹಿ ತಿನಿಸಿ ಆನಂದಪಟ್ಟಿದ್ದಾರೆ. ಉದ್ಯೋಗ ಪಡೆದವರಿಗೆ ಸೆಲ್ಯೂಟ್ ಮಾಡಿ ಹೆಮ್ಮೆ ಪಟ್ಟಿದ್ದಾರೆ.
ಭಿಕ್ಷೆ ಬೇಡುತ್ತಿದ್ದ ತೃತೀಯಲಿಂಗಿಗಳಿಗೆ ಉದ್ಯೋಗ ಕೊಟ್ಟ ಸರ್ಕಾರ
No Ads
Log in to write reviews