ಯುವ’ಗೆ ಭರ್ಜರಿ ರೆಸ್ಪಾನ್ಸ್ ಕಳೆದ ಶುಕ್ರವಾರ ತೆರೆಕಂಡ ಯುವ ಸಿನಿಮಾ ಭಾರಿ ಪೈಪೋಟಿಯ ನಡುವೆ ವಿಜಯಪಥದಲ್ಲಿ ದಾಪುಗಾಲು ಇಡುತ್ತಿದೆ. ಇದನ್ನ ನವಗ್ರಹಗಳ ಕಾಟ ಅಥವಾ ಪರೀಕ್ಷೆ ಎಂದೆನ್ನ ಬಹುದು. ಅದು ಹೇಗೆ? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ. ಇವತ್ತು ಕನ್ನಡ ಸಿನಿಮಾಗಳ ಸ್ಥಿತಿ ಗತಿ ಥಿಯೇಟರ್ನೊಳಗೆ ಅಷ್ಟ ಕಷ್ಟೆ. ಪ್ರೇಕ್ಷಕರ ಕೃಪೆ ಬಲು ಕಡಿಮೆಯಾಗಿದೆ ಕನ್ನಡ ಸಿನಿಮಾಗಳಿಗೆ. ಏನಾದ್ರೂ ಒಂದು ಸಿನಿಮಾ ಗೆಲಬೇಕೆಂದ್ರೆ ದೊಡ್ಡ ಹೋರಾಟ ಮಾಡಬೇಕು, ಇಲ್ಲಾ ಪವಾಡವೇ ಆಗಬೇಕು!. ಯುವ ರಾಜ್ ಕುಮಾರ್ ನಟನೆಯ ಮೊದಲನೇ ಸಿನಿಮಾ ‘ಯುವ’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಾ ಇದೆ. ‘ಯುವ’ ಸಿನಿಮಾವನ್ನ ಮನೆ ಮಂದಿ ಸಮೇತ ಹೆಚ್ಚೆಚ್ಚು ಕುಟುಂಬಗಳು ನೋಡಿ ಮೆಚ್ಚುತ್ತಿದ್ದಾರೆ. ಮೊದಲನೇ ದಿನವೇ ಕಲೆಕ್ಷನ್ ವಿಚಾರದಲ್ಲಿ ಕಮಾಲ್ ಮಾಡಿದ ಯುವ ಸಿನಿಮಾ 275ಕ್ಕೂ ಹೆಚ್ಚು ಶೋಗಳನ್ನ ಪಡೆದು 2 ಕೋಟಿ 72 ಲಕ್ಷ ವಹಿವಾಟು ಮಾಡಿತ್ತು. ಎರಡನೇ ದಿನ 1 ಕೋಟಿ 31 ಲಕ್ಷ ವಹಿವಾಟು ಮಾಡಿದೆಯಂತೆ. ಇನ್ನೂ ಮೂರನೇ ದಿನ ಅಂದ್ರೆ ಕಳೆದ ಭಾನುವಾರದಿನದಂದು ಪ್ರೇಕ್ಷಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಂದಾಜು 2 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುತ್ತಿದೆ ಗಾಂಧಿನಗರದ ಲೆಕ್ಕಾಚಾರ. ಒಬ್ಬ ಹೊಸ ಹೀರೋಗೆ ಇವತ್ತಿನ ಪರಿಸ್ಥಿತಿಯಲ್ಲಿ ಇಷ್ಟು ಕಲೆಕ್ಷನ್ ಆಗಿರೋದು ಮೆಚ್ಚುವ ಸಂಗತಿ. ಇನ್ನು ನವಗ್ರಹಗಳ ಕಾಟ ಅಂತ ಬಣ್ಣಿಸಿದ್ವಲ್ಲ ಅದು ಹೇಗೆ ಅನ್ನೋದನ್ನ ಬಿಡಿಸಿ ಬಣ್ಣಿಸುತ್ತೇವೆ ನೋಡಿ. ಇಷ್ಟಲ್ಲ ಪೈಪೋಟಿ ಸಮಸ್ಯೆಗಳ ಸಂದರ್ಭದಲ್ಲೂ ಯುವ ಸಿನಿಮಾ ಕಲೆಕ್ಷನ್ ಫರ್ಫಾರ್ಮೆನ್ಸ್ ಉತ್ತಮವಾಗಿದೆ. ಈ ಜೋಶ್ನಲ್ಲೇ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದೆ. ನಟ ಯುವರಾಜ್ ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಥಿಯೇಟರ್ ವಿಸಿಟ್ ಮಾಡಿ ಪ್ರೇಕ್ಷಕರ ರೆಸ್ಪಾನ್ಸ್ ಅನ್ನ ನೇರವಾಗಿ ಪಡೆಯುತ್ತಿದ್ದಾರೆ. ಇಂದು ರಾಮನಗರ , ಚೆನ್ನಪಟ್ನ , ಮಂಡ್ಯ , ಮೈಸೂರು ಹಾಗೂ ಹಾಸನ ಜಿಲ್ಲೆಯ ಪ್ರಧಾನ ಚಿತ್ರಮಂದಿಗಳಿಗೆ ಯುವ ತಂಡ ಭೇಟಿ ನೀಡಲಿದೆ. ನಾಳೆ ಬೆಳಗಾವಿ, ಗದಗ ಹಾಗೂ ಹುಬ್ಬಳಿಯ ಚಿತ್ರಮಂದಿಗಳಲ್ಲಿಗೆ ಭೇಟಿ ನೀಡಲಿದ್ದಾರೆ. ನಾಡಿದ್ದು ದಾವಣಗೆರೆ , ಚಿತ್ರದುರ್ಗ , ಶೀರ , ಹಾಗೂ ತುಮಕೂರು ನಗರಗಳಿಗೆ ಭೇಟಿ ನೀಡುವ ಯೋಜನೆಯಲ್ಲಿ ಚಿತ್ರತಂಡವಿದೆ. ಯುವ ತಂಡ ಹೋದಲ್ಲಿ ಬಂದಲ್ಲಿ ಪ್ರೇಕ್ಷಕ ಮಹಾಪ್ರಭು ಮೆಚ್ಚುಗೆ ಮಾತುಗಳನ್ನ ಆಡುತ್ತಿರೋದು ಚಿತ್ರತಂಡಕ್ಕೆ ಇನ್ನಷ್ಟು ಉತ್ಸಾಹ ಹೆಚ್ಚಾಗುವಂತೆ ಮಾಡುತ್ತಿದೆ.
ಯುವ’ಗೆ ಭರ್ಜರಿ ರೆಸ್ಪಾನ್ಸ್
No Ads
Log in to write reviews