No Ads

ಫೇಲ್ ಆದವರಿಗೂ ಗುಡ್ ನ್ಯೂಸ್; ಶಿಕ್ಷಣ ಇಲಾಖೆಯ ಮಹತ್ವದ ಹೆಜ್ಜೆ!

ಕರ್ನಾಟಕ 2025-04-08 13:52:27 196
post

ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ (Second PUC result) ಹೊರಬಿದ್ದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. ಕಲಾ ವಿಭಾಗದಲ್ಲಿ ಸಂಜನಾ ಬಾಯಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾರಿ ಶೇಕಡಾ 73.4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೆಎಸ್ಇಎಬಿ ಕರ್ನಾಟಕ ಮಂಡಳಿಯ ಪಿಯುಸಿಯ ಪರೀಕ್ಷಾ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ನಲ್ಲಿ (Website) ಬಿಡುಗಡೆ ಮಾಡಿದೆ. ಇದೇ ವೇಳೆ ಫೇಲ್ ಆದವರಿಗೂ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಗುಡ್ನ್ಯೂಸ್ ಕೊಟ್ಟಿದ್ದಾರೆ

ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. 93.90 ಶೇಕಾಡ ಫಲಿತಾಂಶ ಪಡೆದು ಉಡುಪಿ ಮೊದಲ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆಯು ಶೇ.48.45 ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ. ಕಲಾ ವಿಭಾಗ ಸಂಜನಾ ಬಾಯಿ ಮೊದಲ ರ್ಯಾಂಕ್ ಪಡೆದಿದ್ದಾರೆ. 600ಕ್ಕೆ ಸಂಜನಾ ಬಾಯ್ 597 ಅಂಕ ಪಡೆದಿದ್ದಾರೆ. ಸಂಜನಾ ಬಳ್ಳಾರಿ ಮೂಲದವರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಕಾಮತ್ ಮೊದಲ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ದೀಪಶ್ರೀ ಗೆ ಮೊದಲ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡದ ಕೆನಾರ ಪಿಯು ಕಾಲೇಜು‌ ವಿದ್ಯಾರ್ಥಿನಿಯಾಗಿದ್ದಾರೆ. 600ಕ್ಕೆ ‌ 599 ಅಂಕಗಳನ್ನು ಪಡೆದಿದ್ದಾರೆ.

ಫೇಲ್ ಆದವರಿಗೂ ಗುಡ್ನ್ಯೂಸ್​!

ಯಾರ್ಯಾರು ಪರೀಕ್ಷೆ ಪಾಸ್ ಆಗಿದ್ದಾರೆ ಅಂತ ಲಿಸ್ಟ್ ಹಾಕಿದ್ದೇವೆ. ಫೈಲ್ ಅಂತ ಈಗಲೇ ಹೇಳಲು ಆಗಲ್ಲ. 2 ಅವಕಾಶ ನೀಡಲಾಗುತ್ತೆ.  ಎರಡನೇ & ಮೂರನೇ ಎಕ್ಸಾಂ ಡೇಟ್ ಈಗಲೇ ಅನೌನ್ಸ್ ಮಾಡಿದ್ದೇವೆ. ಯಾಕಂದ್ರೆ ಈಗಿನಿಂದಲೇ ಸಿದ್ಧರಾಗಲಿ ಅನ್ನೋ ಉದ್ದೇಶದಿಂದ ಅನೌನ್ಸ್ ಮಾಡಿದ್ದೇವೆ ಎಂದ್ರು.

ಪರೀಕ್ಷಾ ಶುಲ್ಕ ಕಟ್ಟುವಂತಿಲ್ಲ!

ಈ ಸಲ ಮಾತ್ರ ಎರಡನೇ ಎಕ್ಸಾಂ ಮತ್ತು ಮೂರನೇ ಎಕ್ಸಾಂಗೆ ಪರೀಕ್ಷಾ ಶುಲ್ಕ ಇರೋದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಇದು ಶಿಕ್ಷಣ ಇಲಾಖೆಯ ಮಹತ್ವದ ಹೆಜ್ಜೆ ಆಗಿದೆ.  ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಜೆ ಸ್ಪೆಷಲ್ ಕ್ಲಾಸ್ ಮಾಡಲು ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದ್ರು.

ಯಾರು ತೇರ್ಗಡೆ ಹೊಂದಿಲ್ಲ ಅಂತಹವರಿಗೆ ಇನ್ನು ಎರಡು ಅವಕಾಶ ಇದೆ. ಈ ನಿರ್ಧಾರಗಳಿಗೆ ಮುಖ್ಯ ಮಂತ್ರಿಗಳು ಕೂಡ ಪೂರ್ಣ ಸಹಕಾರ ಕೊಟ್ಟಿದ್ದಾರೆ. ಯಾವ ರೀತಿ ಇಂಪ್ರೂವ್ ಮಾಡಬೇಕು ಅಂತ ಇಲಾಖೆಗೆ ಮನವಿ ಮಾಡಿದ್ದೇನೆ ಎಂದ್ರು.

ಬಾರಿಗೂ ಹುಡುಗಿರೇ ಫಸ್ಟ್

68.20 ಬಾಲಕರು ಶೇಕಡಾವಾರು ಉತ್ತೀರ್ಣ

77.88 ಬಾಲಕಿಯರು ಶೇಕಡಾವಾರು ಉತ್ತೀರ್ಣ

ಕಲಾ:- 53.29 ಪರ್ಸೆಂಟ್

ವಾಣಿಜ್ಯ :- 76.07 ಪರ್ಸೆಂಟ್

ವಿಜ್ಞಾನ :- 82.54 ಪರ್ಸೆಂಟ್

 ಪಿಯುಸಿ ಫಲಿತಾಂಶ ಔಟ್

ವಿದ್ಯಾರ್ಥಿಗಳು ಮತ್ತು ಪೋಷಕರು ಕೆಎಸ್ಇಎಬಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಮತ್ತು ಅಂಕಪಟ್ಟಿಯನ್ನು ಪರಿಶೀಲಿಸಬಹುದು. www.karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದೆ.

ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಮಾರ್ಚ್ 21 ರಂದು ಆನ್ಸರ್ ಕೀ  ಬಿಡುಗಡೆ ಮಾಡಲಾಗಿತ್ತು. ಪತ್ರಿಕಾಗೋಷ್ಠಿ ಮೂಲಕ ಕೆಎಸ್​​ಸಿಎಬಿ ಫಲಿತಾಂಶ ಪ್ರಕಟಿಸಿದೆ. ಆನ್​ಲೈನ್ ಮೂಲಕವೂ ಫಲಿತಾಂಶ ನೋಡಬಹುದು. ಅಂಕಪಟ್ಟಿ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ.

ಮಾರ್ಚ್ 1ರಿಂದ 20ರವರೆಗೆ ನಡೆದ ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಒಟ್ಟು 1171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

 

No Ads
No Reviews
No Ads

Popular News

No Post Categories
Sidebar Banner
Sidebar Banner