‘ಗೋಬಿ ವ್ಯಾಪಾರದಲ್ಲಿ ದಾಖಲೆಯ ಕುಸಿತ! ಕೃತಕ ಬಣ್ಣ ಬಳಸಿ ಮಾಡುವ ಗೋಬಿ ಮಂಚೂರಿ ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ರಾಜ್ಯ ಸರ್ಕಾರ ಬಣ್ಣ ಬ್ಯಾನ್ ಮಾಡಿದೆ. ಬಣ್ಣ ನಿಷೇಧದ ಬಳಿಕ ಗೋಬಿ ಮಂಚೂರಿ ತಿನ್ನಲು ಸಿಲಿಕಾನ್ ಸಿಟಿಯ ಜನ ಹಿಂದೇಟು ಹಾಕುತ್ತಿದ್ದಾರೆ. ಗೋಬಿ ಅಂದ್ರೆ ಗಾಬರಿ ಬಿದ್ದ ಹಿನ್ನೆಲೆಯಲ್ಲಿ ಗೋಬಿ ಮಂಚೂರಿ ವ್ಯಾಪಾರದಲ್ಲಿ ಫುಲ್ ಡೌನ್ ಆಗಿದೆ. ಗೋಬಿ ಕಲರ್ ಬ್ಯಾನ್ ಮಾಡಿದ್ದಕ್ಕೆ ಜನರು ಸಂಪೂರ್ಣ ಸಾಥ್ ಕೊಟ್ಟಿದ್ದಾರೆ. ಬಣ್ಣ ಬ್ಯಾನ್ ಆದ ಮೇಲೆ ರಾಜ್ಯದಲ್ಲಿ ಗೋಬಿ ಮಂಚೂರಿ ವ್ಯಾಪಾರ ಶೇಕಡ 40ರಷ್ಟು ಕುಸಿತ ಕಂಡಿದೆ. ಅಂದ್ರೆ ಬಣ್ಣ ಬ್ಯಾನ್‌ಗೂ ಮುಂಚೆ ಒಂದು ದಿನಕ್ಕೆ ಗೋಬಿ ಮಾರಾಟದಿಂದ 1000 ರೂಪಾಯಿ ಲಾಭ ಬರ್ತಿದ್ರೆ ಈಗ ಗೋಬಿ ವ್ಯಾಪಾರದಿಂದ 400 ರೂಪಾಯಿಗೆ ಕುಸಿದಿದೆ. ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ರೋಡಮೈನ್ ಬಿ ಅನ್ನೋ ಬಣ್ಣ ಬಳಸಲಾಗುತ್ತಾ ಇತ್ತು. ರಾಜ್ಯದಲ್ಲಿ ಸಂಗ್ರಹ ಮಾಡಲಾಗಿದ್ದ 171 ಗೋಬಿ ಮಂಚೂರಿ ಸ್ಯಾಂಪಲ್ ಪೈಕಿ 107ರಲ್ಲಿ ಈ ಕೃತಕ ಬಣ್ಣ ಪತ್ತೆಯಾಗಿತ್ತು. ಕೃತಕ ಬಣ್ಣದಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಪತ್ತೆಯಾಗಿದ್ದರಿಂದ ರಾಜ್ಯದಲ್ಲಿ ಕೃತಕಬಣ್ಣ ಬಳಸಿ ಮಾಡುವ ಗೋಬಿ ಮಂಚೂರಿಯನ್ನ ಬ್ಯಾನ್ ಮಾಡಲಾಗಿದೆ. ಆದರೆ ಬಣ್ಣ ಬಳಸದ ಗೋಬಿ ಮಂಚೂರಿಯ ಮಾರಾಟಕ್ಕೆ ಯಾವುದೇ ಅಡ್ಡಿಯಿಲ್ಲ. ರೋಡಮೈನ್ ಬಿ ಅನ್ನೋ ಬಣ್ಣ ಬ್ಯಾನ್ ಮಾಡಿದ ಹಿನ್ನೆಲೆಯಲ್ಲಿ ಗೋಬಿ ಮಂಚೂರಿ ತಿನ್ನಲು ಜನರ ಹಿಂದೇಟು ಹಾಕಿದ್ದಾರೆ. ಬಣ್ಣ ಬ್ಯಾನ್ ಆದ ಬೆನ್ನಲ್ಲೇ ಗೋಬಿ ಮಂಚೂರಿಯ ವ್ಯಾಪಾರ ಕುಸಿದಿದ್ದು, ಗೋಬಿ ಮಾರಾಟವನ್ನೇ ನಂಬಿ ಜೀವನ ಸಾಗಿಸುತ್ತಿದ್ದ ವ್ಯಾಪಾರಸ್ಥರು ಕಂಗಾಲಾಗಿ ಹೋಗಿದ್ದಾರೆ.
ಗೋಬಿ ವ್ಯಾಪಾರದಲ್ಲಿ ದಾಖಲೆಯ ಕುಸಿತ!
No Ads
Log in to write reviews