ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಆಡೂರು ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿದಿದೆ.
"ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್ ಅನ್ನೋ ದೈವವಾಣಿಯನ್ನು ಗೊರವಯ್ಯ ನುಡಿದಿದ್ದಾರೆ. ಇದರ ಅರ್ಥ ಪ್ರಸಕ್ತ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಸಮೃದ್ಧವಾಗಿ ಬೆಳೆಗಳು ಬರಲಿವೆ ಎಂದು ಗ್ರಾಮಸ್ಥರು ವಿಶ್ಲೇಷಣೆ ಮಾಡಿದ್ದಾರೆ.
12 ಅಡಿ ಎತ್ತರದ ಬಿಲ್ಲೇರಿನ ವರ್ಷದ ದೈವವಾಣಿಯನ್ನು ಹನುಮನಗೌಡ ಗುರೇಗೌಡರ ಗೊರವಯ್ಯ ನುಡಿದಿದ್ದಾರೆ. ಭರತ ಹುಣ್ಣಿಮೆಯಂದು
ಆಡೂರುನಲ್ಲಿ ಮೈಲಾರಲಿಂಗೇಶ್ವರ ಕಾರ್ಣೀಕ ವಿಶೇಷ ಇದಾಗಿದೆ.
ಪರಾಕ್...ಹೇಳುತ್ತಿದ್ದಂತೆ ಜನರಿಂದ ಒಮ್ಮೆಲೆ ಓಹ್ ಅಂತ ಉದ್ಗಾರ. ಒಂದು ಸಾಲು, ನಾಲ್ಕೈದು ಪದಗಳ ಭವಿಷ್ಯ ವಾಣಿಗಾಗಿ ಸಾವಿರಾರು ಜನರು ನಿಶ್ಯಬ್ದವಾಗಿ ನಿಂತು ಕಾದಿರುತ್ತಾರೆ. ಆ ಒಂದು ಸಾಲು ಇಡೀ ವರ್ಷದ ನಾಡಿನ ಮತ್ತು ನಾಡಿನ ಜನರ ಭವಿಷ್ಯವನ್ನು ತಿಳಿಸಿಬಿಡುತ್ತದೆ ಅನ್ನೋದು ಮೈಲಾರಲಿಂಗೇಶ್ವರ ಭಕ್ತರ ನಂಬಿಕೆ.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಆಡೂರು
ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ನುಡಿದಿರುವ ಕಾರ್ಣಿಕ. ಇದು ಕಾರ್ಣಿಕಗಳ ಪೈಕಿ 2025 ರ ಮೊದಲ ಭವಿಷ್ಯವಾಣಿ ಅನ್ನಬಹುದು. ಭರತ ಹುಣ್ಣಿಮೆ ದಿನದ ಪ್ರಯುಕ್ತ ಬುಧವಾರ ಫೆಬ್ರವರಿ 12 ರಂದು ಆಡೂರಿನಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕ ಹೇಳಲಾಗಿದೆ. ಸಂಪ್ರದಾಯದಂತೆ ಗೊರವಯ್ಯ ಉದ್ದದ ಗಳ ಅಥವಾ ಕೋಲನ್ನು ಏರುತ್ತಾ, ಪರಾಕ್ ಎನ್ನುತ್ತಿದ್ದಂತೆ ಜನರು ಪೂರ್ತಿ ಮೌನ ಆಗುತ್ತಾರೆ. ಆಗ ಗೊರವಯ್ಯ ಕಾರ್ಣಿಕ ನುಡಿತಾರೆ.
ಅಂದಹಾಗೇ ಮೈಲಾರದ ಮೈಲಾರಲಿಂಗೇಶ್ವರ ಜಾತ್ರೆ ಮತ್ತು ಕಾರ್ಣಿಕ ಫೆಬ್ರವರಿ 14ರಂದು ನಡೆಯಲಿದೆ.
Log in to write reviews