ಬೆಂಗಳೂರು, ಡಿ.23 : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಮ್ಮ ಪ್ರೇಯಸಿಯನ್ನು ವಿನಿಮಯಕ್ಕೆ ಯತ್ನಿಸಿ ಇಬ್ಬರು ಆರೋಪಿಗಳು ಜೈಲುÀ ಸೇರಿದ್ದಾರೆ. ತಮ್ಮ ಪ್ರೇಯಸಿಯನ್ನೇ ಒಬ್ಬರಿಗೊಬ್ಬರು ಅದಲು ಬದಲು ಮಾಡಿಕೊಳ್ಳುವ ದೊಡ್ಡ ಜಾಲವೊಂದನ್ನು ಬೆಂಗಳೂರು ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರಕರಣದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತಾನು ಪ್ರೀತಿಸುತ್ತಿದ್ದ ಗೆಳತಿಯನ್ನು ಪಾರ್ಟಿ ಮಾಡೋಣ ಬಾ ಅಂತಾ ಕರೆಸಿಕೊಂಡು ತನ್ನ ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರ ಎಸಗಲಾಗಿದೆ. ಪ್ರಕರಣದಲ್ಲಿ ಹರೀಶ್ ಹಾಗೂ ಹೇಮಂತ್ ಎಂಬ ಆರೋಪಿಗಳನ್ನು ಸಿಸಿಬಿ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಪಾರ್ಟಿ ವೇಳೆ ಸಹಕರಿಸದಿದ್ದ ಯುವತಿಯ ಮೇಲೆ ಈ ಇನ್ನರು ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ತನ್ನ ಪ್ರಿಯತಮನೇ ಪರ ಪುರುಷನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ದೂರಿನನ್ವಯ ಕೂಡಲೇ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರು ಕರಾಳ ದಂಧೆ ನಡೆಸುತ್ತಿದ್ದ ಕಾಮುಕರನ್ನು ಜೈಲಿಗಟ್ಟಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದೆ. ಖಾಸಗಿ ಪಾರ್ಟಿಗಳ ಹೆಸರಿನಲ್ಲಿ ಹರೀಶ್ ಮತ್ತು ಹೇಮಂತ್ ಈ ಪ್ರೇಮಿಗಳ ವಿನಿಮಯ ಆಟ ನಡೆಸುತ್ತಿರುವುದು ಪತ್ತೆಯಾಗಿದೆ. ಮಹಿಳೆಯರನ್ನು ಬಲವಂತವಾಗಿ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ನಡೆಸುತ್ತಿರುವುದು ಕಂಡು ಬಂದಿದೆ. ಇಂತಹ ನೀಚ ಕುಕೃತ್ಯ ನಡೆಸಲು ಆರೋಪಿಗಳು ಪ್ರತ್ಯೇಕ ವಾಟ್ಸಪ್ ಗ್ರೂಪ್ ಅನ್ನು ಕೂಡ ಮಾಡಿಕೊಂಡಿದ್ದರು. ಇದರಲ್ಲಿ ಪರಿಚಯಸ್ಥರನ್ನು ಸೇರಿಸಿಕೊಂಡು ಅವರನ್ನೂ ತಮ್ಮ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು ಎಂಬುದು ಖಾಕಿ ವಿಚಾರಣೆ ವೇಳೆ ತಿಳಿದುಬಂದಿದೆ.
ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ದಂಧೆ..! ಬೆಚ್ಚಿಬಿದ್ದ ರಾಜಧಾನಿ..!
No Ads
Log in to write reviews