ತಮ್ಮ ಮುದ್ದಿನ ಮಗಳು ಪರಿ ಹಾಗೂ ಗಂಡ ಡಾರ್ಲಿಂಗ್ ಕೃಷ್ಣನ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡಿದ್ದು, ಪರಿಯ ಕ್ಯೂಟ್ ನಗುವಿಗೆ ಅಭಿಮಾನಿಗಳು ಮನಸೋತಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಗಳು ಹಾಗೂ ಗಂಡನ ಮುದ್ದಾದ ಫೋಟೊ ಶೇರ್ ಮಾಡಿದ್ದು, ಮಗಳಿಗೆ ಐದು ತಿಂಗಳು ತುಂಬಿದ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.
ಮಿಲನಾ ನಾಗರಾಜ್ ತಮ್ಮ ಇನ್’ಸ್ಟಾಗ್ರಾಂ ನಲ್ಲಿ ಪತಿ ಡಾರ್ಲಿಂಗ್ ಕೃಷ್ಣ (Darling Krishna)ಹಾಗೂ ಮಗಳು ಪರಿಯ ಮೂರು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೊಗಳಲ್ಲಿ ಕೃಷ್ಣ, ಮುದ್ದಾಗಿ ನಗುತ್ತಿರುವ ಮಗಳನ್ನು ಎತ್ತಿಕೊಂಡಿದ್ದು, ತುಂಬಾನೆ ಕ್ಯೂಟ್ ಆಗಿದೆ.
ಈ ಫೋಟೊಗಳ ಜೊತೆಗೆ ಮಿಲನಾ ನಾಗರಾಜ್ ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. My world, wrapped up in one picture ಅಂದರೆ ನನ್ನ ಪ್ರಪಂಚ, ಒಂದೇ ಫೋಟೊದಲ್ಲಿ ಇಬ್ಬರನ್ನು ಬಂಧಿಸಿಡಲಾಗಿದೆ ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.
ಇದರ ಜೊತೆಗೆ ಮಿಲನಾ ಮಗುವಿನ ಕುರಿತಾದ ಮತ್ತೊಂದಿಷ್ಟು ಭಾವನೆಗಳನ್ನು ವ್ಯಕ್ತಪಡಿಸಿದ್ದು, ಅವಳು ಮಾಡುವ ಎಲ್ಲಾ ಸಣ್ಣ ಸಣ್ಣ ಎಕ್ಸ್’ಪ್ರೆಶನ್, ನಮ್ಮ ಹೃದಯವನ್ನೇ ಕರಗಿಸುತ್ತದೆ. ನಮ್ಮ ಮುದ್ದಾಟ, ಮುದ್ದು ನಗು, ಅಂತ್ಯವಿರದ ಪ್ರೀತಿಗೆ ಐದು ತಿಂಗಳುಗಳು. ಲವ್ ಯೂ ಪರಿ ಎಂದು ಬರೆದುಕೊಂಡಿದ್ದಾರೆ.
ಈ ಮುದ್ದಾದ ಫೋಟೊ ಸಖತ್ ಆಗಿ ವೈರಲ್ ಆಗುತ್ತಿದ್ದು, ಈ ಫೋಟೊಗೆ ನಟ-ನಟಿಯರಾದ ಅಮೃತಾ ಅಯ್ಯಂಗಾರ್ (Amrutha Ayyangar), ಅದ್ವಿತಿ ಶೆಟ್ಟಿ, ಹಿತಾ ಚಂದ್ರಶೇಖರ್, ಪೃಥ್ವಿ ಅಂಬಾರ್ ಸೇರಿ ಹಲವು ಪ್ರೀತಿಯ ಸುರಿಮಳೆ ಸುರಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಬೇಗ ದೃಷ್ಟಿ ತೆಗೆಯಿರಿ ಎಂದು ಹೇಳಿದ್ದಾರೆ.
ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನಾ ನಾಗರಾಜ್ ಕಳೆದ ವರ್ಷ ಸೆಪ್ಟೆಂಬರ್ 5 ರಂದು ಹೆಣ್ಣು ಮಗುವಿನ ಪೋಷಕರಾಗಿ ಭರ್ತಿ ಪಡೆದಿದರು. ಇದೀಗ ಜನವರಿ 5ಕ್ಕೆ ಮಗಳು ಪರಿಗೆ 5 ತಿಂಗಳು ತುಂಬಿದ ಸಂಭ್ರಮದಲ್ಲಿ ಫೋಟೊಗಳನ್ನು ಶೇರ್ ಮಾಡಿ ಸಂಭ್ರಮಿಸಿದ್ದಾರೆ.
Log in to write reviews