No Ads

ಫ್ರಿಜ್​​​​​ ನಲ್ಲಿಟ್ಟ ಕಲ್ಲಂಗಡಿ ತುಂಬಾ ಅಪಾಯಕಾರಿ

ಕರ್ನಾಟಕ 2024-03-20 12:40:26 53
post

ಸಾಮಾನ್ಯವಾಗಿ ಕೆಲವರು ಮಾರುಕಟ್ಟೆಯಿಂದ ಹಣ್ಣುಗಳನ್ನು ಖರೀದಿಸಿ ಮನೆಗೆ ತಂದ ನಂತರ ಫ್ರಿಜ್ ನಲ್ಲಿಡುತ್ತಾರೆ. ಆದರೆ ಹಣ್ಣುಗಳನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿಡುವ ಅಭ್ಯಾಸವಿದ್ದರೆ ತಕ್ಷಣ ಅದನ್ನು ಬಿಟ್ಟುಬಿಡಿ. ಅದರಲ್ಲೂ ಕಲ್ಲಂಗಡಿ ಹಣ್ಣನ್ನು ತಪ್ಪಿಯೂ ಫ್ರಿಡ್ಜ್ ನಲ್ಲಿ ಇಡಬಾರದು. ಕಲ್ಲಂಗಡಿ ಹಣ್ಣನ್ನು ರೆಫ್ರಿಜರೇಟರ್‌ನಲ್ಲಿ ಇಡುವುದಕ್ಕಿಂತ ಕೋಣೆಯ ಉಷ್ಣಾಂಶದಲ್ಲಿ ಇಡುವುದು ಉತ್ತಮ ಎಂದು ಸಂಶೋಧನೆ ತೋರಿಸುತ್ತದೆ. ಬೇಸಿಗೆ ಕಾಲ ಶುರುವಾಗಿದೆ. ಬಿಸಿಲು ಧಗೆಗೆ ಧರೆ ಉರಿಯುತ್ತಿದೆ. ಬೆಳಿಗ್ ಬೆಳಗ್ಗೆಯೇ ಬಿಸಿಲು (summer) ಶುರುವಾಗುತ್ತದೆ. ಮನೆಯಿಂದ ಹೊರಗೆ ಕಾಲಿಟ್ಟಾಗ ವಿಪರೀತ ಬೆವರಿಳಿಯುವುದು ಸಹಜವಾಗಿದೆ. ಹೊರಗೆ ಹೋದ ಮೇಲೆ ಬಟ್ಟೆಯೆಲ್ಲಾ ಬೆವರಿನಿಂದ ಒದ್ದೆಯಾಗುತ್ತಿದೆ. ಇದರಿಂದ ನಮ್ಮ ದೇಹದಲ್ಲಿ ಪೋಷಕಾಂಶಗಳ ನಷ್ಟ ಉಂಟಾಗುತ್ತದೆ. ಆದರೆ ಇದನ್ನು ಬ್ಯಾಲೆನ್ಸ್ ಮಾಡಲು ಹಲವರು ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು (watermelon) ಹೆಚ್ಚು ತಿನ್ನುತ್ತಾರೆ. ಕಲ್ಲಂಗಡಿಯಲ್ಲಿ ಲೈಕೋಪೀನ್, ಆಂಟಿಆಕ್ಸಿಡೆಂಟ್ ಅಂಶಗಳು, ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿವೆ (health). ಅಲ್ಲದೆ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಈ ಹಣ್ಣು ತುಂಬಾ ಉಪಯುಕ್ತವಾಗಿದೆ. ಇದರಲ್ಲಿ ಕ್ಯಾಲೋರಿ ತುಂಬಾ ಕಡಿಮೆ ಇರುವುದರಿಂದ ಈ ಹಣ್ಣನ್ನು ಸೇವಿಸುವುದರಿಂದ ನಮ್ಮ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ. ಈ ಹಣ್ಣು ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ನಮ್ಮ ದೇಹವನ್ನು ತಂಪಾಗಿಡುತ್ತದೆ. 92ರಷ್ಟು ನೀರು ಕೂಡ ಇದರಲ್ಲಿದೆ. ಹಾಗಾಗಿ ಇದು ನಮ್ಮ ದೇಹಕ್ಕೆ ಹೆಚ್ಚಿನ ನೀರಿನಂಶವನ್ನು ಒದಗಿಸುತ್ತದೆ. ತಾಜಾ ಕಲ್ಲಂಗಡಿ ಸಿಟ್ರುಲಿನ್ ಅನ್ನು ಹೊಂದಿರುತ್ತದೆ, ಇದು ಅಗತ್ಯವಾದ ಅಮೈನೋ ಆಮ್ಲವಾಗಿದೆ. ಈ ಸಿಟ್ರುಲಿನ್ ನೈಟ್ರಿಕ್ ಆಕ್ಸೈಡ್ 6 ಅನ್ನು ಉತ್ಪಾದಿಸುತ್ತದೆ. ಪರಿಣಾಮವಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಕಲ್ಲಂಗಡಿ ಕಡಿಮೆ ಕ್ಯಾಲೋರಿ ಹೊಂದಿದೆ. ಪರಿಣಾಮವಾಗಿ, ಕಲ್ಲಂಗಡಿ ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಡಯೆಟ್ ಮಾಡುವವರಿಗೂ ಕಲ್ಲಂಗಡಿ ತುಂಬಾ ಒಳ್ಳೆಯದು. ಆದರೆ ಕೆಲವರು ಕಲ್ಲಂಗಡಿ ಹಣ್ಣನ್ನು ರೆಫ್ರಿಜರೇಟರ್ ನಲ್ಲಿಟ್ಟು ತಿನ್ನುತ್ತಾರೆ. ಯಾವುದೇ ಬಿಸಿಲಿನಲ್ಲಿ ಕಲ್ಲಂಗಡಿ ತುಂಬಾ ತಂಪಾಗಿರುತ್ತದೆ. ತಿನ್ನಲು ರುಚಿಕರ. ಆದರೆ ಕತ್ತರಿಸಿದ ಕಲ್ಲಂಗಡಿಯನ್ನು ಫ್ರಿಡ್ಜ್ ನಲ್ಲಿಟ್ಟರೆ ಫುಡ್ ಪಾಯ್ಸನ್ ಆಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಕತ್ತರಿಸಿದ ಕಲ್ಲಂಗಡಿ ಮೇಲೆ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.

No Ads
No Reviews
No Ads

Popular News

No Post Categories
Sidebar Banner
Sidebar Banner