ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಅಚ್ಚರಿಯ ಸಂಗತಿ ಎಂದರೆ ಥಿಯೇಟರ್‌ಗಳ ಆದಾಯ ಹೆಚ್ಚಳವಾಗಿದೆ. ಮಾಧ್ಯಮ ಮತ್ತು ಮನರಂಜನಾ ಸಮೀಕ್ಷಾ ಸಂಸ್ಥೆಯಾದ ಫಿಕ್ಕಿ - ಇವೈ ವರದಿಯಿಂದ ಈ ವಿಚಾರ ಬಹಿರಂಗವಾಗಿದೆ. 2023ರಲ್ಲಿ ಪ್ರೇಕ್ಷಕರ ಸಂಖ್ಯೆ ಶೇಕಡಾ 9ರಷ್ಟು ಕುಸಿತ ಕಂಡಿದ್ದರೆ, ಬಾಕ್ಸಾಫೀಸ್ ಕಲೆಕ್ಷನ್ ಸಿಂಗಲ್ ಸ್ಕ್ರೀನ್‌ನಲ್ಲಿ ಶೇಕಡಾ 15.3ರಷ್ಟು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇಕಡಾ 13.6ರಷ್ಟು ಏರಿಕೆಯಾಗಿದೆ. ಕೊರೊನಾ ನಂತರ ಗಮನಾರ್ಹವಾಗಿ ಬದಲಾದ ಕ್ಷೇತ್ರಗಳಲ್ಲಿ ಮನರಂಜನಾ ಕ್ಷೇತ್ರ, ಅದರಲ್ಲಿಯೂ ಸಿನಿಮಾ ರಂಗ ಪ್ರಮುಖವಾದುದು. ಕೊರೊನಾ ಸಮಯದಲ್ಲಿ ಚಿತ್ರಪ್ರೇಮಿಗಳೆಲ್ಲರೂ ಅನಿವಾರ್ಯವಾಗಿ ಒಟಿಟಿ ಪ್ಲ್ಯಾಟ್‌ಫಾರ್ಮ್ ಕಡೆ ವಾಲಿದರು. ಕೊರೊನಾ ನಂತರವೂ ಇದೇ ಟ್ರೆಂಡ್ ಮುಂದುವರಿದಿದೆ. ಅಚ್ಚರಿ ಎಂದರೆ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾದರೂ, ಥಿಯೇಟರ್‌ಗಳ ಆದಾಯ ಹೆಚ್ಚಳವಾಗಿದೆ! ಮಾಧ್ಯಮ ಮತ್ತು ಮನರಂಜನಾ ಸಮೀಕ್ಷಾ ಸಂಸ್ಥೆಯಾದ ಫಿಕ್ಕಿ - ಇವೈ ವರದಿಯಿಂದ ಈ ಸಂಗತಿ ಬಹಿರಂಗವಾಗಿದೆ. 2022ಕ್ಕೆ ಹೋಲಿಸಿದರೆ ಪ್ರೇಕ್ಷಕರ ಸಂಖ್ಯೆಗೆ 2023ರಲ್ಲಿ ಪ್ರೇಕ್ಷಕರ ಸಂಖ್ಯೆ ಶೇ. 9ರಷ್ಟು ಕುಸಿತ ಕಂಡಿದೆ. ಇದೇ ಅವಧಿಯುಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಸಿಂಗಲ್ ಸ್ಕ್ರೀನ್‌ನಲ್ಲಿ ಶೇ. 15.3 ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇ. 13.6ರಷ್ಟು ಏರಿಕೆಯಾಗಿದೆ. ಸಿನಿಮಾ ನೋಡುವ ವಿಷಯದಲ್ಲಿ ಪ್ರೇಕ್ಷಕರು ಜಾಣರಾಗುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದು ಕೇವಲ ಚಿತ್ರ ವೀಕ್ಷಣೆ ಅಲ್ಲ, ತಿಂಡಿ ಸೇವನೆ ಮತ್ತು ಪ್ರಯಾಣ ವೆಚ್ಚವೂ ಒಳಗೊಳ್ಳುತ್ತದೆ. ಒಂದು ಬಾರಿ ಸಿನಿಮಾ ನೋಡಿಕೊಂಡು ಬರುವ ಖರ್ಚಿನಲ್ಲಿ ಒಂದು ವರ್ಷದ ಅವಧಿಗೆ ಒಟಿಟಿಯ ಚಂದಾದಾರಿಕೆಯನ್ನೇ ಪಡೆದುಕೊಳ್ಳಬಹುದು ಎನ್ನುವುದು ಹಲವರ ಲೆಕ್ಕಾಚಾರ. ಒಟಿಟಿ ವೇದಿಕೆಗಳು ಜನರನ್ನು ಸೆಳೆಯಲು ವಿವಿಧ ಚಂದಾದಾರಿಕೆ ಪ್ಲ್ಯಾನ್‌ಗಳ ಆಫರ್‌ಗಳನ್ನು ಒದಗಿಸುತ್ತಿವೆ.
ಸಿನಿಮಾ ನೋಡುವವರ ಸಂಖ್ಯೆ ಕುಸಿತ ,ಆದರೆ ಥಿಯೇಟರ್ ಆದಾಯ ಮಾತ್ರ ಏರಿಕೆ
No Ads
Log in to write reviews