No Ads

ಕೇಕ್ ತಯಾರಿಸಲು ತಂದ ಎಸೆನ್ಸ್ ; ಕಿಕ್'ಗಾಗಿ ಸೇವಿಸಿದ್ದ ಮೂವರು ಕೈದಿಗಳು ಸಾವು.!

ಕರ್ನಾಟಕ 2025-01-08 12:58:13 157
post

ಮೈಸೂರು: ಮೈಸೂರು ಜೈಲಿನಲ್ಲಿ ಎಸೆನ್ಸ್ ಸೇವಿಸಿದ್ದ ಮತ್ತೊಬ್ಬ ಕೈದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 3 ಕ್ಕೇರಿಕೆಯಾಗಿದೆ.

ಮೈಸೂರು ಜೈಲಿನಲ್ಲಿ ಎಸೆನ್ಸ್ ಸೇವಿಸಿ ಅಸ್ವಸ್ಥಗೊಂಡಿದ್ದ ಮತ್ತೊಬ್ಬ ಕೈದಿ ರಮೇಶ್ ಮೃತಪಟ್ಟಿದ್ದಾರೆ.

ಚಾಮರಾಜನಗರದ ಖೈದಿ ನಾಗರಾಜ್, ಸಾತಗನಹಳ್ಳಿಯ ಖೈದಿ ಮಾದೇಶ್, ಖೈದಿ ರಮೇಶ್ ಮೃತಪಟ್ಟಿದ್ದಾರೆ. ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದ್ದಾರೆ.

ಹೊಸ ವರ್ಷದ ದಿನ ಕೇಕ್ ತಯಾರಿಸಲು ಎಸೆನ್ಸ್ ತರಿಸಲಾಗಿದ್ದು, ಜೈಲಿನ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕೇಕ್ ತಯಾರಿಸಲು ಇಟ್ಟಿದ್ದ ಎಸೆನ್ಸ್ ಕುಡಿದಿದ್ದರು. ಡಿಸೆಂಬರ್ 28ರಂದು ಕಿಕ್ ಗಾಗಿ ಎಸೆನ್ಸ್ ಸೇವಿಸಿದ್ದರು.ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಜೈಲಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿನ್ನೆ ಮೈಸೂರಿನ ಸಾತಗಳ್ಳಿಯ ಮಾದೇಶ್ ಮೃತಪಟ್ಟಿದ್ದರು. ಇಂದು ನಾಗರಾಜ್ ಹಾಗೂ ರಮೇಶ್ ಸಾವನ್ನಪ್ಪಿದ್ದಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner