ವಿಚ್ಚೇದನದ ಬಳಿಕ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಪ್ರತೀ ಬಾರಿ ಅವರು ವೀಡಿಯೋಗಳನ್ನು ಹಂಚಿಕೊಂಡಾಗಲೆಲ್ಲಾ ಕಾಮೆಂಟ್ ಬಾಕ್ಸ್ ಫುಲ್ ಆಗಿರುತ್ತದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಿವ್ವಿ ಇದೀಗ ಕಾಮೆಂಟ್‌ಗಳಿಗೆ ಉತ್ತರ ಕೊಟ್ಟಿದ್ದಾರೆ.
ಸುಮಾರು ದಿನಗಳ ಬಳಿಕ ನಿವೇದಿತಾ ಗೌಡ ತಮಗೆ ಬಂದ ಕಾಮೆಂಟ್‌ಗಳಿಗೆ ರಿಯಾಕ್ಟ ಮಾಡಿದ್ದಾರೆ. ಈವರೆಗೂ ಕಾಮೆಂಟ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದ ನಿವ್ವಿ ಇದೀಗ ತಮಗೆ ಕೇಳಲಾದ ಕೆಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ತಮ್ಮ ಹೊಸ ಲೈಫ್ ಪಾರ್ಟ್ನರ್ ಬಗ್ಗೆಯೂ ಹೇಳಿದ್ದಾರೆ.
ಸಾಮಾನ್ಯವಾಗಿ ಸಿನಿ ತಾರೆಯರಿಗೆ ಕೆಟ್ಟದಾಗಿ ಕಾಮೆಂಟ್ ಬಂದರೆ ಕೋಪ ಮಾಡಿಕೊಳ್ಳುವುದೇ ಹೆಚ್ಚು. ಆದರೆ ನಿವೇದಿತಾ ಮಾತ್ರ ತುಂಬಾ ಕೂಲ್ ಆಗಿ ಉತ್ತರ ಕೊಟ್ಟಿದ್ದಾರೆ. ನಿವೇದಿತಾ ಈ ಕೆಟ್ಟದಾದ ಕಾಮೆಂಟ್‌ಗೆ ಕೋಪ ಮಾಡಿಕೊಂಡಿರುವಂತೆ ಕಾಣಿಸುವುದೇ ಇಲ್ಲ. ಜೊತೆಗೆ ತುಂಬಾ ನಗಾಡಿಕೊಂಡೇ ಕಾಮೆಂಟ್‌ಗಳನ್ನು ಎಂಜಾಯ್ ಮಾಡಿದ್ದಾರೆ.
ನಿವೇದಿತಾ ಗೌಡ ಅವರ ನೃತ್ಯದ ವಿಡಿಯೋವೊಂದಕ್ಕೆ ಕಾಮೆಂಟ್ ಮಾಡಿದ ಕೆಲವರು, 'ಬಾರ್ ಡ್ಯಾನ್ಸರ್ ಕಣೆ ನೀನು' ಎಂದಿದ್ದಾರೆ. ಇದಕ್ಕೆ ತುಂಬಾ ಕೂಲ್ ಆಗಿ ನಗಾಡಿಕೊಂಡು ಉತ್ತರ ಕೊಟ್ಟಿದ್ದಾರೆ ನಿವೇದಿತಾ. 'ಅವರೇಜ್ ಬಾರ್ ಡ್ಯಾನ್ಸರ್ ನೀನು' ಎಂದು ಹೇಳಿದ್ದಕ್ಕೆ ನಿವೇದಿತಾ ಸ್ನೇಹಿತೆ ಶ್ರೀವಾಣಿ ಅವರು 'ನಿವೇದಿತಾ ಅವರೇಜ್ ಡ್ಯಾನ್ಸರ್ ಅಲ್ಲ ಅತ್ಯುತ್ತಮ ಬಾರ್ ಡ್ಯಾನ್ಸರ್' ಎಂದು ಉತ್ತರಿಸಿದ್ದಾರೆ. ಇದಕ್ಕೆ ನಿವೇದಿತಾ ನಗಾಡಿದ್ದಾರೆ.
ಮತ್ತೊಬ್ಬರು 'ನಿಮಗೆ ಈ ರೀತಿ ಡ್ಯಾನ್ಸ್ ಮಾಡಲು ನಾಚಿಕೆ ಆಗಲ್ವಾ' ಎಂದು ಕೇಳಿದ್ದಾರೆ. ಆಗ ನಿವೇದಿತಾ 'ಇಲ್ಲ... ಯಾಕೆ?' ಎಂದು ಮರುಪ್ರಶ್ನೆಯನ್ನು ಹಾಕಿದ್ದಾರೆ. ನಂತರ ಮತ್ತೊಂದು ಕಾಮೆಂಟ್ ಓದಿದ ನಿವೇದಿತಾ ಗೌಡ, 'ನನಗೆ ನೀನು ಬೇಕು, ನಿನ್ನಂತಹ ಸಂಗಾತಿಯ ಅವಶ್ಯಕತೆ ನನಗೆ ಇದೆ' ಎಂದವರಿಗೆ ನನ್ನ ಲೈಫ್ ಪಾರ್ಟ್ನರ್ ಇವಳೇ ಎಂದು ಶ್ರೀವಾಣಿಯನ್ನು ತೋರಿಸಿದ್ದಾರೆ. ನಿವೇದಿತಾ ಹಾಗೂ ಆಕೆಯ ಸ್ನೇಹಿತೆ ಶ್ರೀವಾಣಿ ಮಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಇದೀಗ ನಿವೇದಿತಾ ವಿದೇಶ ಪ್ರಯಾಣ ಮಾಡಿಕೊಂಡು ಬಾರ್ ಕ್ಲಬ್ ಪಬ್ ಅಂತ ಮಜಾ ಮಾಡಿಕೊಂಡು ವಿಡಿಯೋ ಶೇರ್ ಮಾಡುತ್ತಾ ಖುಷಿಯಾಗಿದ್ದಾರೆ.
ಆದರೀ ವೀಡಿಯೋಗಳು ಕೆಲ ಅಭಿಮಾನಿಗಳಿಗೆ ಇಷ್ಟವಾಗುತ್ತಿಲ್ಲ. ನಿವೇದಿತಾ ತುಂಬಾ ಕೆಟ್ಟದಾಗಿ ಉಡುಪು ಧರಿಸುತ್ತಾ, ಕೆಟ್ಟದಾಗಿರುವ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೇ ಚಂದನ್ ನಿವೇದಿತಾಳೊಂದಿಗೆ ವಿಚ್ಚೇದನ ಪಡೆಯಲು ಇದೇ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.
ಬಾರ್ ಡ್ಯಾನ್ಸರ್ ಕಣೆ ನೀನು ಎಂದ ಫ್ಯಾನ್ಸ್; ಕೆಟ್ಟ ಕಾಮೆಂಟ್ಗೆ ನಿವೇದಿತಾ ರಿಯಾಕ್ಟ್..?

No Ads
Log in to write reviews