ಧಾರವಾಡ: ಒಡೆದು ಆಳುವ ಪಕ್ಷ ನಮ್ಮದಲ್ಲ, ಎಲ್ಲರೊಂದಿಗೂ ಬೆರೆತು ಬಾಳುವ ಪಕ್ಷ ಕಾಂಗ್ರೆಸ್. ನಾವೆಲ್ಲ ಒಂದೇ ಎಂಬುದು ನಮ್ಮ ಪಕ್ಷದ ಸಿದ್ಧಾಂತ ಎಂದು ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಹೇಳಿದರು. ನಿಗದಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಧಾರವಾಡ ಲೋಕಸಭಾ ವ್ಯಾಪ್ತಿಯ ಕಲಘಟಗಿ ವಿಧಾನಸಭಾ ಕ್ಷೇತ್ರದ ನಿಗದಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮುಖಂಡರ ಹಾಗೂ ಕಾರ್ಯಕರ್ತರ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಸಹಿಷ್ಣುತೆ, ಸಮಗ್ರತೆ, ಸಹಬಾಳ್ವೆ ಎಲ್ಲವೂ ನಮ್ಮ ಜನಗಳ ಮಧ್ಯೆ ಇದ್ದಾಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸುತ್ತದೆ. ಆದರೆ ಬಿಜೆಪಿ ಸಮಾಜದಲ್ಲಿ ಅಶಾಂತಿ, ಅಸಹಿಷ್ಣುತೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಹುನ್ನಾರ ನಡೆಸುತ್ತಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ಆಶೀರ್ವದಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾರ್ಮಿಕ ಸಚಿವರು ಮತ್ತು ಧಾರವಾಡ ಉಸ್ತುವಾರಿಗಳಾದ ಸಂತೋಷ ಲಾಡ್, ಸುರೇಶಗೌಡ ಕರಿಗೌಡ್ರ, ಮಲ್ಲನಗೌಡ ಪಾಟೀಲ, ಮೆಹರೋಜ್ ಖಾನ್, ಅಲಿ ಗೊರವನಕೊಳ್ಳ, ಅಶೋಕ ದೌಡಳ್ಳಿ, ಗ್ರಾಮ ಪಂಚಾಯತ ಮಾಜಿ ಹಾಗೂ ಹಾಲಿ ಅಧ್ಯಕ್ಷರು ಮತ್ತು ಸದಸ್ಯರು, ಪಕ್ಷದ ಮುಖಂಡರು ಅಭಿಮಾನಿಗಳು, ಹಿರಿಯರು, ಮಹಿಳೆಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಲಘಟಗಿ ವಿಧಾನಸಭಾ ಕ್ಷೇತ್ರದ ನಿಗದಿಯಲ್ಲಿ ವಿನೋದ ಅಸೂಟಿ ಭರ್ಜರಿ ಚುನಾವಣಾ ಪ್ರಚಾರ
No Ads
Log in to write reviews