No Ads

ಮನೆಗೆ ಬೀಗಹಾಕಿ ಊರಿಗೆ ಬಂದ್ವಲ್ಲಾ ಅಂತ ಚಿಂತೆ ಬೇಡ, ಮನೆ ವಿಳಾಸ ಕೊಡಿ ಹೊಯ್ಸಳ ಸಿಬ್ಬಂದಿ ಕಾವಲು ಕಾಯುತ್ತೆ

ಜಿಲ್ಲೆ 2025-02-04 14:13:24 427
post

ದಿನದಿಂದ ದಿನಕ್ಕೆ ಮನೆಗಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತೆಡೆಗಟ್ಟಲು ಬೆಂಗಳೂರು ಪೊಲೀಸರು  ನೂತನ ಮಾರ್ಗವನ್ನು ಕಂಡುಕೊಂಡಿದ್ದಾರೆ. ಹೌದು, ಒಂದು ದಿನಕ್ಕಿಂತ ಹೆಚ್ಚು ದಿನಗಳ ಕಾಲ ಪ್ರವಾಸ ಅಥವಾ ಊರಿಗೆ ಹೋಗುವವರ ಮನೆಯ ಕಾವಲಿಗೆ ಪೊಲೀಸರು ಇರುತ್ತಾರೆ. ಆದರೆ, ನೀವು ಒಂದು ದಿನಕ್ಕಿಂತ ಹೆಚ್ಚು ದಿನಗಳ ಕಾಲ ಪ್ರವಾಸಕ್ಕೆ ಅಥವಾ ಊರಿಗೆ ಹೋಗುವ ವಿಚಾರವನ್ನು ಸ್ಥಳೀಯ ಪೊಲೀಸ್​ ಠಾಣೆಗೆ ತಿಳಿಸಿರಬೇಕು. ಆಗ ಪೊಲೀಸರು ಈ ವಿಚಾರವನ್ನು ರಾತ್ರಿ ಗಸ್ತು ತಿರುಗುವ ಹೊಯ್ಸಳಕ್ಕೆ ಮಾಹಿತಿ ನೀಡುತ್ತಾರೆ.

ಹೊಯ್ಸಳ ಸಿಬ್ಬಂದಿ ನಿಮ್ಮ ಮನೆಯನ್ನು ಕಾವಲು ಕಾಯುತ್ತಿರುತ್ತಾರೆ. ಸದ್ಯ ಈ ವ್ಯವಸ್ಥೆ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಮಾತ್ರ ಕಾರ್ಯರೂಪಕ್ಕೆ ಬಂದಿದ್ದು, ಮುಂದಿನ ದಿನಗಳ ಎಲ್ಲ ವಿಭಾಗದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ.

ಒಂದು ದಿನಕ್ಕಿಂತ ಹೆಚ್ಚು ದಿನಗಳ ಕಾಲ ಪ್ರವಾಸ ಅಥವಾ ಊರಿಗೆ ಹೋಗುವ ಮುನ್ನ, ದಕ್ಷಿಣ ವಿಭಾಗದ ಪೊಲೀಸ್ ಕಂಟ್ರೋಲ್​ ರೂಮ್​ ಸಂಖ್ಯೆ 080-22943111 ಅಥವಾ 9480801500ಗೆ ಕರೆ ಮಾಡಿ ನಿಮ್ಮ ಮನೆಯ ವಿಳಾಸ, ಫೋಟೋ ಮತ್ತು ನಿಮ್ಮ ದೂರವಾಣಿ ಸಂಖ್ಯೆಯನ್ನು ನೀಡಬೇಕು. ಈ ಮಾಹಿತಿಯನ್ನು ಪೊಲೀಸರು ದಾಖಲಿಸಿಕೊಳ್ಳುತ್ತಾರೆ.

ಕಂಟ್ರೋಲ್​ ರೂಮ್​ ಸಿಬ್ಬಂದಿ ಈ ಮಾಹಿತಿಯನ್ನು ಸ್ಥಳೀಯ ಪೊಲೀಸ್​ ಠಾಣೆಗೆ ನೀಡುವ ಜೊತೆಗೆ ಮನೆಯ ಮೇಲೆ ಗಮನವಿರಲಿ ಎಂದು ಎಚ್ಚರಿಸುತ್ತಾರೆ. ದಕ್ಷಿಣ ವಿಭಾಗದ ಅಡಿಯಲ್ಲಿ ಒಟ್ಟು 18 ಪೊಲೀಸ್​ ಠಾಣೆಗಳು ಬರುತ್ತವೆ. ಈ ಉಪಕ್ರಮಕ್ಕೆ ‘Locked House Checking System’ ಎಂದು ಹೆಸರಿಡಲಾಗಿದೆ. ಆಯಾ ಪೊಲೀಸ್​ ಠಾಣೆ ಅಧಿಕಾರಿಗಳು ಖಾಲಿ ಇರುವ ಮನೆಗಳ ಪಟ್ಟಿ ಸಿದ್ದಪಡಿಸಿಕೊಳ್ಳುತ್ತಾರೆ. ಬಳಿಕ, ಈ ಪಟ್ಟಿಯನ್ನು ರಾತ್ರಿ ಗಸ್ತು ತಿರುಗುವ ಹೊಯ್ಸಳ ಸಿಬ್ಬಂದಿಗೆ ನೀಡುತ್ತಾರೆ. ಹೊಯ್ಸಳ ಸಿಬ್ಬಂದಿ ನಿಮ್ಮ ಮನೆಗೆ ಕಾವಲಾಗಿರುತ್ತಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner