No Ads

‘ಒಂದು ವಾರ ಚಿಕನ್ ತಿನ್ನಬೇಡಿ’ ಸರ್ಕಾರದಿಂದ ಖಡಕ್ ಎಚ್ಚರಿಕೆ..?

ಜಿಲ್ಲೆ 2025-02-15 13:44:06 597
post

ಸರ್ಕಾರವೇ ದಯವಿಟ್ಟು ಒಂದು ವಾರ ಚಿಕನ್‌ ತಿನ್ನಬೇಡಿ ಎನ್ನುವ ಮೂಲಕ ಮಾಂಸಾಹಾರ ಪ್ರಿಯರಿಗೆ ಆಘಾತ ನೀಡಿದೆ. ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸಾರ್ವಜನಿಕರಿ ಚಿಕನ್‌ ತಿನ್ನದಂತೆ ನಿರ್ಬಂಧ ಹೇರಲಾಗಿದೆ.

ಪರಿಸ್ಥಿತಿ ಬಿಗಡಾಯಿಸಿರುವುದರಿಂದ ಅಲ್ಲಿನ ಜನರು ಚಿಕನ್‌ಗೆ ಗುಡ್‌ಬೈ ಹೇಳಲೇಬೇಕಿದೆ. ಇದಕ್ಕೆ ಅಸಲಿ ಕಾರಣ ರಾಜ್ಯಗಳಲ್ಲಿ ಇತ್ತೀಚೆಗೆ ಹಕ್ಕಿಜ್ವರ ಹೆಚ್ಚಾಗುತ್ತಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹಕ್ಕಿಜ್ವರದ ಶಂಕೆ ಮೇರೆಗೆ 5 ಲಕ್ಷಕ್ಕೂ ಅಧಿಕ ಸೋಂಕು ಪೀಡಿತ ಕೋಳಿಗಳು ಹಾಗೂ ಮೊಟ್ಟೆಗಳನ್ನು ನಾಶಪಡಿಸಲಾಗಿದೆ. ಹಕ್ಕಿಜ್ವರ ಹೆಚ್ಚಾಗುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಕನಿಷ್ಠ ಇನ್ನೊಂದು ವಾರ ಯಾರೂ ಚಿಕನ್‌ ತಿನ್ನಬೇಡಿ ಎಂದು ಸರ್ಕಾರ ಮನವಿ ಮಾಡಿಕೊಂಡಿದೆ. ಈ ಬಗ್ಗೆ ಎಲ್ಲೆಡೆ ಪ್ರಕಟಣೆಗಳನ್ನು ಹೊರಡಿಸಿ, ಮೈಕ್‌ ಮೂಲಕವೂ ಹಳ್ಳಿ ಹಳ್ಳಿಗಳಲ್ಲಿ ಜನರಿಗೆ ತಿಳಿಸುತ್ತಿದೆ.

ಪಶ್ಚಿಮ ಗೋದಾವರಿ ಜಿಲ್ಲೆಯ ವೇಲ್ಪುರು ಮತ್ತು ಪೂರ್ವ ಗೋದಾವರಿ ಜಿಲ್ಲೆಯ ಕಾನೂರು ಅಗ್ರಹಾರಂ ಎಂಬ ಎರಡು ಸ್ಥಳಗಳಲ್ಲಿ H5N1 ಪತ್ತೆಯಾದ ನಂತರ ಆಂಧ್ರಪ್ರದೇಶದ ಪಶುಸಂಗೋಪನಾ ಅಧಿಕಾರಿಗಳು ಎರಡು ಕೋಳಿ ಫಾರಂಗಳಲ್ಲಿ ಕೋಳಿಗಳನ್ನು ಕೊಲ್ಲಲು ಪ್ರಾರಂಭಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇದರಿಂದ ಚಿಕನ್‌ಗೆ ಬೇಡಿಕೆ ತಗ್ಗಿದೆ. ಕೋಳಿ ಬೆಲೆಯಲ್ಲೂ ತೀವ್ರ ಕುಸಿತಕ್ಕೆ ಕಾರಣವಾಗಿದೆ.
ಐಸಿಎಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ-ಸೆಕ್ಯುರಿಟಿ ಅನಿಮಲ್ ಡಿಸೀಸ್ (ಎನ್‌ಐಎಚ್‌ಎಸ್‌ಎಡಿ) ಇತ್ತೀಚೆಗೆ ಪರೀಕ್ಷೆಗೆ ಕಳುಹಿಸಲಾದ ಮಾದರಿಗಳಿಂದ ವೈರಲ್ ರೋಗವನ್ನು ಪತ್ತೆಹಚ್ಚಿದೆ ಎಂದು ಪಶುಸಂಗೋಪನಾ ಇಲಾಖೆ ನಿರ್ದೇಶಕ ದಾಮೋದರ್ ನಾಯ್ಡು ಹೇಳಿದ್ದಾರೆ.

ಈ ಭೀತಿ ಶುರುವಾದ ಹಿನ್ನೆಲೆ ಕೋಳಿ ಮಾಂಸದ ಬೆಲೆ 250 ರೂಪಾಯಿಯಿಂದ 150 ರೂಪಾಯಿಗೆ ಕುಸಿದಿದ್ದು, ಕೋಳಿ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪಕ್ಕದ ತೆಲಂಗಾಣದಲ್ಲಿಯೂ ಹಕ್ಕಿಜ್ವರದ ಸಾವುಗಳು ಸಂಭವಿಸಿದ್ದು, ಈ ಬಗ್ಗೆ ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ.

ಆಂಧ್ರಪ್ರದೇಶದಲ್ಲಿ ಹಕ್ಕಿಜ್ವರ ಪತ್ತೆಯಾದ ಒಂದು ಕಿಲೋಮೀಟರ್‌ ವ್ಯಾಪ್ತಿಯನ್ನು ರೆಡ್ ಝೋನ್ ಎಂದು ಘೋಷಿಸಲಾಗಿದೆ. ಹಾನಿಗೊಳಗಾದ ಕೋಳಿ ಫಾರಂಗಳಿಗೆ ಪ್ರವೇಶಿಸದಂತೆ ಸಲಹೆ ನೀಡಲಾಗಿದೆ. ಅಲ್ಲದೆ ರೆಡ್ ಝೋನ್‌ಗಳಲ್ಲಿರುವ ಎಲ್ಲ ಕೋಳಿ ಮಾಂಸದ ಅಂಗಡಿಗಳನ್ನು ಮುಚ್ಚಲು ಆದೇಶಿಸಿದೆ. ಕಳೆದ ತಿಂಗಳಿನಿಂದ ಈ ಪ್ರದೇಶಗಳಲ್ಲಿ ಸುಮಾರು ನಾಲ್ಕು ಲಕ್ಷ ಕೋಳಿಗಳು ಸಾವನ್ನಪ್ಪಿವೆ.

 

No Ads
No Reviews
No Ads

Popular News

No Post Categories
Sidebar Banner
Sidebar Banner