No Ads

'ಕಾಟೇರ'ನ ಬಿಟ್ಟು ಮದುವೆಗೆ ಎಲ್ಲರನ್ನೂ ಕರೆದ ಡಾಲಿ, ‘ಡಿಬಾಸ್’ ನ ಕೈಬಿಟ್ಟಿದ್ದಕ್ಕೆ ಧನಂಜಯ್ ಕೊಟ್ಟ ಕ್ಲ್ಯಾರಿಟಿ

ಮನರಂಜನೆ 2025-02-07 14:49:50 9092
post

ದರ್ಶನ್ ಫ್ಯಾನ್ಸ್‌ಗೆ ಒಂದು ಸಣ್ಣ ಬೇಸರ ಇದೆ. ಡಾಲಿ ಧನಂಜಯ್ ಎಲ್ಲರನ್ನೂ ಮದುವೆಗೆ ಕರೆದಿದ್ದಾರೆ. ದರ್ಶನ್‌ (Darshan) ಅವರನ್ನ ಯಾಕೆ ಕರೆದಿಲ್ಲ ಅನ್ನೋದೇ ಇವರ ಪ್ರಶ್ನೆ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಟ್ರೋಲ್ ಆಗುತ್ತಿದೆ. ದರ್ಶನ್ 'ರೀಚ್' ಆಗದೇ ಇರೋವಷ್ಟು ದೂರ ಇದ್ದಾರಾ? ಮನೆಗೆ ಹೋಗಿ ಮದುವೆಗೆ ಆಹ್ವಾನಿಸಬಹುದಿತ್ತಲ್ಲ? ಈ ರೀತಿಯ ಪ್ರಶ್ನೆಗಳೂ ಬರ್ತಿವೆ. ಆ ಪ್ರಶ್ನೆ ಬರೋ ಮೊದಲೇ ಡಾಲಿ ಧನಂಜಯ್ ಒಂದಷ್ಟು ಕ್ಲಾರಿಟಿ ಕೊಟ್ಟಿದ್ದಾರೆ.

ಡಾಲಿ ಧನಂಜಯ್ ಇನ್‌ಲ್ಯಾಂಡ್ ಲೆಟರ್ ಮಾಡಿಸಿದ್ದಾರೆ. ಇದು ಇವರದ್ದೇ ಐಡಿಯಾ ಆಗಿದೆ. ಈ ಮೂಲಕ ಡಾಲಿ ಧನಂಜಯ್ ಎಲ್ಲರಿಗೂ ಆಹ್ವಾನಿಸುತ್ತಿದ್ದಾರೆ. ಇದನ್ನ ಕೊಟ್ಟು ನನ್ನ ಮದುವೆಗೆ ಬನ್ನಿ ಅಂತಲೇ ಕೇಳಿಕೊಂಡಿದ್ದಾರೆ. ರಾಜಕರಾಣಿಗಳು, ಸಿನಿಮಾ ಸ್ಟಾರ್‌ಗಳು, ಸಿನಿಮಾ ಸ್ನೇಹಿತರು, ಆಪ್ತರು ಹೀಗೆ ಸಾಕಷ್ಟು ಜನಕ್ಕೆ ಡಾಲಿ ಧನಂಜಯ್ ಮದುವೆ ಆಮಂತ್ರಣ ಕೊಟ್ಟಿದ್ದಾರೆ.

ಆದರೆ, ದಾಸ ದರ್ಶನ್ ಅವರನ್ನ ಆಹ್ವಾನ ಮಾಡಿಲ್ಲ. ಅದಕ್ಕೆ ಕಾರಣ ಏನೂ ಅನ್ನೋದನ್ನ ಕೂಡ ಹೇಳಿಕೊಂಡಿದ್ದಾರೆ. ನಿಜ, ಮೊನ್ನೆ ಒಂದು ಪ್ರೆಸ್ ಮೀಟ್ ಮಾಡಿದ್ದರು. ಈ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದರು. " ದರ್ಶನ್ ಅವರನ್ನ ರೀಚ್ ಅಗೋಕೆ ಆಗ್ಲೇ ಇಲ್ಲ. ಅವರಿಗೂ ಮದುವೆ ಆಮಂತ್ರಣ ಕೊಡಬೇಕು ಅಂತ ಇತ್ತು. ಆದರೆ, ಅದು ಸಾಧ್ಯವಾಗ್ಲಿಲ್ಲ. ಹಾಗಾಗಿಯೇ ಈ ವೇದಿಕೆ ಮೂಲಕ ಅವರನ್ನ ಆಹ್ವಾನಿಸುತ್ತೇನೆ" ಅಂತಲೂ ಹೇಳಿದ್ದರು.

ಡಾಲಿ ಧನಂಜಯ್ ಹೇಳಿದ ಮಾತು ಎಲ್ಲರಿಗೂ ಇಷ್ಟ ಆಗಿಲ್ಲ ಅನಿಸುತ್ತದೆ. ದರ್ಶನ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ದರ್ಶನ್ ಅವರನ್ನ 'ಅಣ್ಣ' ಅಂತ ಹೋಗಿ ಮಾತನಾಡಿಸಿದ್ದಿರಿ. ಆದರೆ, ಈಗ ಏನಾಗಿದೆ. ರೀಚ್ ಆಗದೇ ಇರೋಷ್ಟು ದೂರ ಇದ್ದಾರಾ? ಈ ಎಲ್ಲ ಪ್ರಶ್ನೆಗಳನ್ನು ದರ್ಶನ್ ಫ್ಯಾನ್ಸ್ ಕೇಳಿದ್ದಾರೆ.

ಇದಕ್ಕೆ ಡಾಲಿ ಧನಂಜಯ್ ಏನೂ ತಲೆಕೆಡಸಿಕೊಂಡಿಲ್ಲ. ಬದಲಾಗಿ, ಮಾಧ್ಯಮದ ಮೂಲಕವೇ ಪ್ರೆಸ್ ಮೀಟ್ ಅಲ್ಲಿಯೇ ದರ್ಶನ್‌ ಅವರನ್ನ ಆಹ್ವಾನಿಸಿದ್ದಾರೆ. ಮದುವೆಗೆ ಬನ್ನಿ ಅಂತಲೂ ಹೇಳಿದ್ದಾರೆ. ಆದರೂ ಟ್ರೋಲರ್‌ಗಳು ಒಳ್ಳೆ ಕಂಟೆಂಟ್ ಅಂತ ಟ್ರೋಲ್ ಮಾಡ್ತಾನೇ ಇದ್ದಾರೆ. ಡಾಲಿ ಧನಂಜಯ್ ಮಾತನಾಡಿರೋ ವಿಡಿಯೋ ಇಟ್ಟುಕೊಂಡು ಟ್ರೋಲ್ ಮಾಡ್ತಾನೇ ಇದ್ದಾರೆ ನೋಡಿ.

No Ads
No Reviews
No Ads

Popular News

No Post Categories
Sidebar Banner
Sidebar Banner