ಹುಂಡಿಗಳಿಗೆ ಒಳ್ಳೆಯ ವಿಚಾರಕ್ಕಾಗಿ ಹಣವನ್ನು ಹಾಕುವುದು ಹಿಂದಿನ ಕಾಲದಿಂದಲೂ ಭಾರತದಲ್ಲಿ ನಡೆದುಕೊಂಡು ಬರುತ್ತಿದೆ. ಈಗಲೂ ಎಲ್ಲ ದೇವಾಲಯಗಳಲ್ಲಿ ಭಕ್ತರು ತಮಗಿಷ್ಟು ಅನಿಸಿದಷ್ಟು ಹಣ ಹಾಕುತ್ತಾರೆ. ಈ ಮೇಲಿನ ಸಂಗತಿ ಹೇಳುವುದಕ್ಕೆ ಮೂಲ ಕಾರಣ ಏನೆಂದರೆ ಉತ್ತರ ಕರ್ನಾಟಕದ ಪ್ರಸಿದ್ಧ ದೇವಾಲಯ ಎನಿಸಿರುವ ಘತ್ರಿಗಿ ಭಾಗ್ಯವಂತಿ ದೇವಿಯ ಹುಂಡಿಗೆ, ‘ನಮ್ಮ ಅತ್ತೆಗೆ ಸಾವು ಕೊಡು’ ಎಂದು ಮನವಿ ಮಾಡಿ 20 ರೂಪಾಯಿಯನ್ನು ಹಾಕಲಾಗಿದೆ. ಕಲಬುರಗಿಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದಲ್ಲಿರುವ ಭಾಗ್ಯವಂತಿ ದೇವಿ ದೇವಾಲಯ ಆ ಭಾಗದಲ್ಲಿ ಸಾಕಷ್ಟು ಖ್ಯಾತಿ ಪಡೆದಿದೆ. ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಬಂದು ದರ್ಶನ ಪಡೆದುಕೊಂಡು ಹೋಗುತ್ತಾರೆ. ಆದರೆ ಭಾಗ್ಯವಂತಿ ದೇವಿಯ ಗುಡಿಯಲ್ಲಿರುವ ಕಾಣಿಕೆ ಹುಂಡಿಗೆ ಸಾವಿರಾರು ಜನರು ಹಣ ಹಾಕಿದ್ದಾರೆ. ಇದರಲ್ಲಿ ಒಬ್ಬರು 20 ರೂಪಾಯಿ ನೋಟಿನ ಮೇಲೆ ‘ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು ತಾಯಿ’ ಎಂದು ಬರೆದು ಹುಂಡಿಗೆ ಹಾಕಿದ್ದಾರೆ. ಅತ್ತೆ ಕಾಟ ಕೊಟ್ಟಿದ್ದಕ್ಕೆ ಸೊಸೆ ಈ ರೀತಿ ಬರೆದು ಹಾಕಿರಬಹುದು ಎಂದು ಊಹಿಸಲಾಗಿದೆ. ಭಾಗ್ಯವಂತಿ ದೇವಿಯ ಹುಂಡಿ ಎಣಿಕೆ ಮಾಡುವ ವೇಳೆ ಈ ರೀತಿ ಬರೆದಿರುವುದು ಪತ್ತೆ ಆಗಿದೆ. ಸದ್ಯ ಭಾಗ್ಯವಂತಿ ದೇವಿ ದೇವಾಲಯದ ಹುಂಡಿಯಲ್ಲಿ 60 ಲಕ್ಷ ರೂಪಾಯಿ ನಗದು, 200 ಗ್ರಾಂ ಚಿನ್ನಾಭರಣ ಹಾಗೂ ಒಂದು ಕೆಜಿ ಬೆಳ್ಳಿ ಜಮಾವಾಗಿದೆ.
ಅತ್ತೆ ಕಾಟ ಕೊಟ್ಟಿದ್ದಕ್ಕೆ ದೇವರ ಹುಂಡಿಗೆ ಈ ರೀತಿ ಬರೆದು ಹಾಕಿದ್ಲು ಸೊಸೆ..!

No Ads
Log in to write reviews