ಬೆಂಗಳೂರಿನಲ್ಲಿ ಇವತ್ತು ಬಿಸಿಲಿನ ತಾಪಕ್ಕಿಂತ ಕ್ರಿಕೆಟ್ನ ಫೀವರ್ ಜಾಸ್ತಿ ಇರುತ್ತೆ. ಇವತ್ತು ಸಿಲಿಕಾನ್ ಸಿಟಿಯಲ್ಲಿ ಆರ್ಸಿಬಿ, ಡೆಲ್ಲಿ ಬ್ಯಾಟಲ್ ನಡೀತಿದೆ. ಸೋಲಿಲ್ಲದ ಸರದಾರ ಡೆಲ್ಲಿ vs ಹೋಮ್ಗ್ರೌಂಡ್ನಲ್ಲಿ ಗೆಲುವಿನ ಹುಡುಕಾಟದಲ್ಲಿರೋ ಆರ್ಸಿಬಿ ನಡುವಿನ ಕಾಳಗ ಹಲವು ಕಾರಣಗಳಿಂದ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ.
ಬೆಂಗಳೂರಿನ ದತ್ತು ಪುತ್ರ ವಿರಾಟ್ ಕೊಹ್ಲಿ ಹಾಗೂ ಮನೆ ಮಗ ಕೆ.ಎಲ್.ರಾಹುಲ್ ಇಂದಿನ ಕದನದ ಸೆಂಟರ್ ಆಫ್ ಅಟ್ರಾಕ್ಷನ್. ದೆಹಲಿ ಮೂಲದ ವಿರಾಟ್, ಆರ್ಸಿಬಿಯ ತಂಡದ ಮೇನ್ ಫಿಲ್ಲರ್ ಆಗಿದ್ರೆ ಕರ್ನಾಟಕದ ಹೆಮ್ಮೆ ಕೆ.ಎಲ್.ರಾಹುಲ್ ಡೆಲ್ಲಿಯ ಬೆನ್ನೆಲುಬಾಗಿದ್ದಾರೆ. ಸಾಲಿಡ್ ಟಚ್ನಲ್ಲಿರುವ ಸ್ನೇಹಿತರ ಸವಾಲ್, ಪಂದ್ಯಕ್ಕೆ ಮತ್ತಷ್ಟು ಹೈಪ್ ನೀಡಿದೆ.
ಕದನ ಜಸ್ಟ್ ಆರ್ಸಿಬಿ ಹಾಗೂ ಡೆಲ್ಲಿ ಕಾಳಗ ಮಾತ್ರವಲ್ಲ. ಆರ್ಸಿಬಿ ವರ್ಸಸ್ ಮಾಜಿ ಆರ್ಸಿಬಿಯನ್ಸ್ ನಡುವಿನ ಮಹಾ ಕಾಳಗ. ಕೆ.ಎಲ್.ರಾಹುಲ್, ಫಾಫ್ ಡುಪ್ಲೆಸಿ, ವೇಗಿ ಮಿಚೆಲ್ ಸ್ಟಾರ್ಕ್ ಇವರೆಲ್ಲರೂ ಆರ್ಸಿಬಿಯ ಮಾಜಿ ಪ್ಲೇಯರ್ಗಳೇ. ಡೆಲ್ಲಿ ತಂಡದ ಬಲವಾಗಿರೋ ಇವ್ರಿಗೆ, ಚಿನ್ನಸ್ವಾಮಿ ಮೈದಾನದ ಪಿಚ್ ಹಾಗೂ ಇಲ್ಲಿನ ಪ್ಲೇಯಿಂಗ್ ಕಂಡಿಷನ್ಸ್ ಬಗ್ಗೆ ಚೆನ್ನಾಗಿ ಅರಿವಿದೆ. ಈ ತ್ರಿಮೂರ್ತಿಗಳ ಆಟಕ್ಕೆ ಕಡಿವಾಣ ಹಾಕಲು ಚಕ್ರವ್ಯೂಹ ರಚಿಸಬೇಕಿದೆ.
ಟೂರ್ನಿಯಲ್ಲಿ ಆರ್ಸಿಬಿ ಸಾಲಿಡ್ ಸ್ಟಾರ್ಟ್ ಸಿಕ್ಕಿದೆ ನಿಜ. 4ರ ಪೈಕಿ ಮೂರರಲ್ಲಿ ಗೆದ್ದಿರುವ ಆರ್ಸಿಬಿ, ತವರಿನಲ್ಲಿ ಮುಖಭಂಗ ಅನುಭವಿಸಿದೆ. ಇಂದು ಹೋಮ್ಗ್ರೌಂಡ್ನಲ್ಲಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದೆ. ಆರ್ಸಿಬಿ ಗೆಲ್ಲಬೇಕಾದ್ರೆ ಕಳೆದ ಎರಡು ಪಂದ್ಯಗಳಿಂದ ವೈಫಲ್ಯ ಅನುಭವಿಸ್ತಿರುವ ಫಿಲ್ ಸಾಲ್ಟ್, ಪವರ್ ಪ್ಲೇನಲ್ಲೇ ಪವರ್ ತೋರಿಸಬೇಕಿದೆ.
ಬೆಂಗಳೂರಿನಲ್ಲಿ ಆರ್ಸಿಬಿ ಗೆಲ್ಲಬೇಕಾದ್ರೆ ವಾಂಖೆಡೆಯಲ್ಲಿ ಮುಂಬೈ ವಿರುದ್ಧ ಗೆಲುವಿಗೆ ಪಠಿಸಿದ್ದ ಮಂತ್ರವನ್ನೇ ಆರ್ಸಿಬಿ ಜಪಿಸಬೇಕಿದೆ. ಮುಂಬೈ ಎದುರು ಹೇಗೆ ಸಂಘಟಿತ ಆಟವಾಡಿತ್ತೋ ಅದೇ ರೀತಿ ಹೋರಾಡಬೇಕಿದೆ. ಮುಖ್ಯವಾಗಿ ಬೌಲರ್ಗಳಿಗೆ ಹೆಚ್ಚು ಸಹಾಯ ಸಿಗದ ಚಿನ್ನಸ್ವಾಮಿ ಗ್ರೌಂಡ್ನಲ್ಲಿ ಬ್ಯಾಟರ್ಗಳು ಅಬ್ಬರಿಸಬೇಕಿದೆ. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ ಅದೇ ಆಟ ಮುಂದುವರೆಸಬೇಕು. ಇವ್ರ ಜೊತೆ ಲಿಯಾಮ್ ಲಿವಿಂಗ್ ಸ್ಟೋನ್ ಕೂಡ ಸಿಡಿಯಬೇಕಿದೆ.
ಬೌಲಿಂಗ್ಗೆ ವಿಭಾಗದಲ್ಲಿ ಜೋಶ್ ಹೇಜಲ್ವುಡ್ಗೆ ಭುವನೇಶ್ವರ್ ಕುಮಾರ್, ಯಶ್ ದಯಾಳ್ ಉತ್ತಮ ಸಾಥ್ ನೀಡಬೇಕಿದೆ. ಮಾರಕ ಬೌಲಿಂಗ್ ಮೂಲಕ ಎದುರಾಳಿ ಪಡೆಯನ್ನು ಕಟ್ಟಿ ಹಾಕಬೇಕಿದೆ. ಸ್ಪಿನ್ನರ್ಗಳಾದ ಸುಯಶ್ ಶರ್ಮಾ, ಕೃನಾಲ್ ಪಾಂಡ್ಯರ ರೋಲ್ ಕೂಡ ಮೋಸ್ಟ್ ಕ್ರೂಶಿಯಲ್ ಆಗಿರಲಿದೆ. ಮಿಡಲ್ ಓವರ್ಗಳಲ್ಲಿ ರನ್ಗೆ ಕಡಿವಾಣ ಹಾಕಿ ವಿಕೆಟ್ ಬೇಟೆಯಾಡಬೇಕಿದೆ.
ಡೆಲ್ಲಿ ತಂಡಕ್ಕೆ ಜೇಕ್ ಫ್ರೇಸರ್ ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಟ್ರಿಸ್ಟನ್ ಸ್ಟಬ್, ಅಶುತೋಷ್ ಶರ್ಮಾರಂಥ ಪವರ್ ಹಿಟ್ಟರ್ಗಳ ಬಲವಿದೆ. ಬೌಲಿಂಗ್ನಲ್ಲಿ ಚೈನಾಮನ್ ಕುಲ್ದೀಪ್ ಮುಕೇಶ್ ಕುಮಾರ್, ಮೋಹಿತ್ ಶರ್ಮಾರಂಥ ಚಾಣಾಕ್ಷ ಬೌಲರ್ಗಳಿದ್ದಾರೆ. ಹೀಗಾಗಿ ಡೆಲ್ಲಿಗೆ ಡಿಚ್ಚಿ ನೀಡಬೇಕಾದ್ರೆ ಆರ್ಸಿಬಿ ಸ್ಪೆಷಲ್ ಪ್ಲಾನ್ ರೂಪಿಸಿಯೇ ಕಣಕ್ಕಿಳಿಯಬೇಕಿದೆ.
Log in to write reviews