ಬಳ್ಳಾರಿ: ಇತಿಹಾಸದ ಪುಟಗಳನ್ನು ತಿರುಗಿ ನೋಡಿದಾಗ ದೇಶಕ್ಕೆ ಕಾಂಗ್ರೆಸ್ ಪಕ್ಷವು ನೀಡಿದ ಕೊಡುಗೆ ಅಪಾರ. ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು, ಶ್ರೀಮತಿ ಇಂದಿರಾಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್, ಪಿ.ವಿ . ನರಸಿಂಹರಾವ್ ಅವರ ಅಧಿಕಾರವದಿಯಲ್ಲಿ ಜಾರಿ ಮಾಡಿದ ಯೋಜನೆಗಳು ಇಂದಿಗೂ ಕೋಟ್ಯಂತರ ಜನರ ಬಾಳಿಗೆ ಬೆಳಕಾಗಿವೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇ ತುಕಾರಾಂ ಹೇಳಿದರು. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಲಬೂರಿನಲ್ಲಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ವಿಧವಾ ವೇತನ, ಅಂಗವಿಕಲರ ಮಸಾಶನ, ಸಂಧ್ಯಾ ಸುರಕ್ಷಾ, ಹಸಿರು ಕ್ರಾಂತಿ, ಬ್ಯಾಂಕುಗಳ ರಾಷ್ಟ್ರೀಕರಣ, ಮೀಸಲಾತಿ, ಪಂಚಾಯತ್ ರಾಜ್ ವ್ಯವಸ್ಥೆ, ಆಹಾರ ಭದ್ರತಾ ಯೋಜನೆ, ಮಾಹಿತಿ ಹಕ್ಕು ಕಾಯ್ದೆ ಕಾಂಗ್ರೆಸ್ ಕೊಡುಗೆ ಎಂದರು. ರಾಜ್ಯ ಸರ್ಕಾರದ ಅನುಷ್ಟಾನ ಗೊಳಿಸಿದ ಗೃಹಲಕ್ಷ್ಮಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹಜೋತಿ ಯೋಜನೆ, ನಾರಿಶಕ್ತಿ , ಕ್ಷೀರಭಾಗ್ಯ ಇನ್ನೂ ಮುಂತಾದ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಹ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಸ್ತದ ಗುರ್ತಿಗೆ ಮತ ನೀಡಿ ಎಂದು ಮನವಿ ಮಾಡಿದರು. ದೇಶ ಕಾಯಲು ಬಿಜೆಪಿ ನಾಲಾಯಕ್ಕು ದೇಶ ಆಳಲು ಬಿಜೆಪಿಗೆ ಯಾವುದೇ ಅರ್ಹತೆ ಇಲ್ಲ. ಅವರು ಅಧಿಕಾರದಲ್ಲಿರಲು ನಾಲಾಯಕ್ಕು. ಬಿಜೆಪಿ ಬರೇ ಸುಳ್ಳು ಹೇಳುತ್ತಲೇ ಬಂದಿದೆ. ಇದು ಬಹಳ ಜವಾಬ್ದಾರಿಯುತ ಚುನಾವಣೆ. ಬಡವರ ಪರ ಇರುವ ಪಕ್ಷ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು. ಸಂದರ್ಭ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾ ಅಧ್ಯಕ್ಷರಾದ ಕುರಿ ಶಿವಮೂರ್ತಿಯವರು, ಕೆ.ಪಿ.ಸಿ.ಸಿ ವಕ್ತಾರರಾದ ಪತ್ರೆಶ್ ಹಿರೇಮಠ್, ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದ್ವಾರಕೇಶ್ ನವರು,ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ ಮುಕಂದ ಕೊಟ್ರೇಶ್ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ದೊಡ್ಡರಾಮಣ್ಣ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರಯ್ಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಸಂತ ಕುಮಾರ್,ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಸಾರ್ವಜನಿಕ ಉಪಸ್ಥಿತರಿದ್ದರು.
ಕಾಂಗ್ರೆಸ್ ಯೋಜನೆಗಳು ಕೋಟ್ಯಂತರ ಜನರ ಬಾಳಿಗೆ ಬೆಳಕಾಗಿವೆ: ಇ ತುಕಾರಾಂ
No Ads
Log in to write reviews