ಶಿರಸಿಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಶುಭಲಕ್ಷ್ಮೀ, ಕುಮಾರ್ ಕಲ್ಯಾಣ ಸಂಭ್ರಮದಿಂದ ಜರುಗಿದೆ.
ನಟಿ ಶುಭಲಕ್ಷ್ಮೀ ಅವರು ಅರೇಂಜ್ ಮ್ಯಾರೇಜ್ ಆಗಿದ್ದು, ಮನೆಯವರ ಪ್ರೀತಿ, ಆಶೀರ್ವಾದದೊಂದಿಗೆ ಕುಮಾರ್ ಅವರನ್ನು ಕೈ ಹಿಡಿದಿದ್ದಾರೆ. ಶುಭಲಕ್ಷ್ಮೀ ಅವರ ಪತಿ ಕುಮಾರ್ ಅವರು ಸಾಫ್ಟ್‌ವೇರ್ ಎಂಜಿನಿಯರಿಂಗ್ ಆಗಿ ಕೆಲಸ ಮಾಡುತ್ತಿದ್ದಾರೆ.
ಶುಭಲಕ್ಷ್ಮೀ ಅವರು ಕಾಮಿಡಿ ಕಿಲಾಡಿಗಳು ಸೀಸನ್ 4 ರನ್ನರ್ ಅಪ್ ಆಗಿದ್ದರು. ಮಜಾ ಭಾರತ, ಕಾಮಿಡಿ ಕಿಲಾಡಿಗಳ ಮೂಲಕ ಹಾಸ್ಯ ನಟಿ ಶುಭಲಕ್ಷ್ಮೀ ಅವರು ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಇತ್ತೀಚೆಗೆ ಶುಭಲಕ್ಷ್ಮಿ ಆವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮದುವೆ ಬಗ್ಗೆ ಸಂತಸ ಹಂಚಿಕೊಂಡಿದ್ದರು. ಹೆಣ್ಣು ನೋಡುವ ಶಾಸ್ತ್ರದ ಫೋಟೋಗಳನ್ನು ಶೇರ್ ಮಾಡೋ ಮೂಲಕ ತಾವು ಕೈ ಹಿಡಿಯೋ ವರನ ಪರಿಚಯಿಸಿದ್ದರು. ಈ ಮದುವೆ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಕೂಡ ಶುಭಲಕ್ಷ್ಮೀ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸುತ್ತಿದ್ದಾರೆ.
Log in to write reviews