No Ads

ಬೆಂಗಳೂರಲ್ಲಿ ಕರಾಳ ಕಾಲರಾ ರೋಗ ಪತ್ತೆ ಎಚ್ಚರ.. ಎಚ್ಚರ.

ಕರ್ನಾಟಕ 2024-04-05 16:13:23 48
post

ನಗರದಲ್ಲಿ ಮಹಿಳೆಯೊಬ್ಬರಲ್ಲಿ ಕಾಲರಾ ಪತ್ತೆಯಾಗಿದ್ದು, ಆತಂಕದ ವಾತಾವರಣ ನಿರ್ಮಾಣ ಆಗಿದೆ. ತೀವ್ರ ವಾಂತಿ ಭೇದಿ ಹಿನ್ನೆಲೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿದಾಗ ಕಾಲರಾ ರೋಗ ಇರೋದು ದೃಢಪಟ್ಟಿದೆ.ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬಿಬಿಎಂಪಿಯ ಆರೋಗ್ಯ ಇಲಾಖೆ ನಗರದಲ್ಲಿ ಅಲರ್ಟ್ ಆಗಿದೆ. ಕಾಲರಾ ಹರಡದಂತೆ ಪ್ರತೀ ವಾರ್ಡ್ ಮಟ್ಟದಲ್ಲೂ ಅಲರ್ಟ್ ಮಾಡಿ, ಮುಂಜಾಗೃತ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯು ವೈದ್ಯರಿಗೆ ಸಮಸ್ಯೆ ಹೇಳುವ ಸಂದರ್ಭದಲ್ಲಿ ಕಾಲರಾ ಲಕ್ಷಣದ ಬಗ್ಗೆ ಮಾಹಿತಿ ನೀಡಿದ್ದಳು. ಆರಂಭಿಕ ಹಂತದ ಪರೀಕ್ಷೆಗಳಲ್ಲಿ ಕಾಲರಾ ಇರುವ ಬಗ್ಗೆ ಪಾಸಿಟೀವ್ ವರದಿ ಬಂದಿದೆ. ಕೊನೆಗೆ ಪ್ರಯೋಗಾಲಯದ ಪರೀಕ್ಷೆಯಲ್ಲಿ ಮಲ ಮಾದರಿಯು ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ.ಕೊನೆಗೆ ಮಹಿಳೆ ಪ್ರಯಾಣದ ಬಗ್ಗೆ ಮಾಹಿತಿ ಕಲೆ‌ ಹಾಕಲಾಗಿದೆ. ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಿ, ಎಷ್ಟು ಜನರನ್ನು ಭೇಟಿ ಮಾಡಿದ್ದಳು ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮಹಿಳೆಯು ವಾಸ ಸ್ಥಳದಿಂದ ಸುತ್ತಮುತ್ತಲಿನ 165 ಮನೆಗಳಿಗೆ ಭೇಟಿ ನೀಡಿರುವ ಅಧಿಕಾರಿಗಳು, ರೋಗ ಹರಡುವ ವಿಧಾನಗಳು, ಶುದ್ಧ ನೀರಿನ ಬಳಕೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. 165 ಮನೆಗಳಲ್ಲಿ ಕಾಲರಾರೋಗದ ಲಕ್ಷಣಗಳು ಕಂಡು ಬಂದಿಲ್ಲ. ಕಲುಷಿತ ನೀರು ಕುಡಿದು ಮಹಿಳೆಗೆ ಕಾಲರಾ ಬಂದಿರುವ ಶಂಕೆ ಇದೆ. ಸೋಂಕು ಶಂಕಿತ ಪ್ರದೇಶದಿಂದ 10 ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನೆ ಮಾಡಲಾಗಿದೆ.ನಗರದ ಎಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ವೈದ್ಯಾಧಿಕಾರಿಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ. ಹೋಟೆಲ್‌ಗಳು/ರೆಸ್ಟೋರೆಂಟ್‌ಗಳು/ಕೆಫೆಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರನ್ನು ವಿತರಿಸಲು ಸಲಹೆ ನೀಡಿದೆ. ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಯವಾಗಿ IHIP ತಂತ್ರಾಶದಲ್ಲಿ ವರದಿ ಮಾಡುವಂತೆ ಸೂಚಿಸಲಾಗಿದೆ. ರಸ್ತೆ ಬದಿ ಕಟ್ ಮಾಡಿಟ್ಟ ಫ್ರೂಟ್ ತಿನ್ನಬಾರದು. ಬಿಸಿಲಿನಲ್ಲಿ ರಸ್ತೆ ಬದಿ, ಹೆಚ್ಚು ಧೂಳು ಇರುವ ಕಡೆ ಆಹಾರ ತಿನ್ನಬಾರದು. ನೀರನ್ನ ಹೆಚ್ಚಾಗಿ ಬಿಸಿ ಮಾಡಿ ಕುಡಿಯೋದು ಸೂಕ್ತ ಎಂದು ತಿಳಿಸಿದ್ದಾರೆ. ಇದು ಗಂಭೀರ ಸ್ವರೂಪದ ಬ್ಯಾಕ್ಟೀರಿಯಲ್ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಕೊಳಕು ನೀರಿನಿಂದ ಕಾಯಿಲೆ ಬರುತ್ತದೆ.

No Ads
No Reviews
No Ads

Popular News

No Post Categories
Sidebar Banner
Sidebar Banner