No Ads

ಅಮ್ಮ ಹಾಳು ಬಾವಿಗೆ ಬೀಳು ಎಂದರೆ ಬೀಳೋಕೂ ರೆಡಿನೇ ದರ್ಶನ್

ಮನರಂಜನೆ 2024-04-03 14:50:20 39
post

ಮಂಡ್ಯ ಲೋಕಸಭೆ ಚುನಾವಣೆ ಸಂಬಂಧ ಸಂಸದೆ ಸುಮಲತಾ ಅಂಬರೀಶ್ ಅವರು ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ನಟ ದರ್ಶನ್ ಭಾಗಿಯಾಗಿ ಮಾತನಾಡಿದರು. 5 ವರ್ಷದ ಹಿಂದೆ ಪ್ರಚಾರ ಮಾಡುವಾಗ ಜನ ನಮಗೆ ಪ್ರೀತಿ ಕೊಟ್ಟಿದ್ರು. ನಾನು ಎಲ್ಲೆಲ್ಲಿ ಹೋಗಿದ್ದೆ, ಅಲ್ಲೆಲ್ಲ ಎಳೆನೀರು ಕೊಟ್ಟು ಪ್ರೀತಿ ತೋರಿಸಿದ್ರಿ. ಎಲ್ಲಾ ರೈತರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಜಿಲ್ಲೆಯ ಎಲ್ಲಾ ತಾಯಿಯಂದಿರಗೂ ನಾನು ಧನ್ಯವಾದ ಹೇಳ್ತೇನೆ. ಯಮ ಕೂಡ ನನ್ನನ್ನು ಬಂದು ಕರೆದರೆ ಇರಪ್ಪ, ನಮ್ಮಮ್ಮನ ಒಂದೇ ಒಂದು ಕೆಲಸ ಇದೆ. ಮುಗಿಸಿಕೊಂಡು ಬರುತ್ತೇನೆ ಎಂದು ಹೇಳ್ತೇನೆ.  ಯಾಕೆಂದರೆ ಆ ಮನೆಗೂ, ನಮಗೂ ಅಷ್ಟೊಂದು ಬಾಂಧವ್ಯ ಇದೆ. ಕಳೆದ ಚುನಾವಣೆ ವೇಳೆ ಬಲಗೈ ಮುರಿದಿತ್ತು, ಈಗ ಎಡಗೈ ಪೆಟ್ಟಾಗಿದೆ. ನಿಜ ಹೇಳಬೇಕು ಎಂದರೆ ಇವತ್ತು ಕೈ ಆಪರೇಷನ್ ಇತ್ತು. ಆದರೆ ಅಮ್ಮನಿಗೆ ಡೇಟ್ ಕೊಟ್ಟಿದ್ದೀನಿ ಎಂದು ಕ್ಯಾನ್ಸಲ್ ಮಾಡಿಸಿಕೊಂಡೆ. ಇವತ್ತಿನ ಈ ಕಾರ್ಯಕ್ರಮ ಮುಗಿಸಿಕೊಂಡು ಹೋಗಿ, ರಾತ್ರಿ ಆಸ್ಪತ್ರೆಗೆ ಅಡ್ಮಿಟ್ ಆಗ್ತೇನೆ. ನಾಳೆ ಬೆಳಗ್ಗೆ ಆಪರೇಷನ್ ಮಾಡಿಸಿಕೊಳ್ತೇನೆ ಎಂದರು. ರಾಜಕೀಯವಾಗಿ ನಾನು ಏನೂ ಮಾತನಾಡಲ್ಲ. ಆದರೆ ಒಂದೇ ಒಂದು ಮಾತು ಹೇಳ್ತೇನೆ. ಮನೆ ಮಕ್ಕಳು ಮಕ್ಕಳ ರೀತಿಯಲ್ಲೇ ಇರಬೇಕು. ಇವತ್ತು ತಾಯಿ ಅನ್ಕೊಂಡು ನಾಳೆ, ಅವರಿಗೂ ನಮಗೂ ಸಂಬಂಧ ಇಲ್ಲ ಎಂದು ಹೇಳೋದಲ್ಲ. ಸಾಯೋವರೆಗೂ ತಾಯಿ ತಾಯಿನೇ. ಅಮ್ಮ ಏನೇ ಹೇಳಿದ್ದರೂ ಮಾಡ್ತೀನಿ. ಹಾಳು ಬಾವಿಗೆ ಅವರು ಬೀಳು ಎಂದರೂ ಬೀಳೋಕೆ ರೆಡಿನೇ ನಾನು. ಯಾಕೆಂದ್ರೆ ಆ ಮನೆಗೂ, ನಮಗೂ ಅಷ್ಟೊಂದು ಪ್ರೀತಿ ಕೊಟ್ಟಿದೆ ಎಂದರು.

No Ads
No Reviews
No Ads

Popular News

No Post Categories
Sidebar Banner
Sidebar Banner