ಬೆಳಗಾವಿಯ ಚಳಿಗಾಲದ ಅಧಿವೇಶನ ಸದ್ದು ಇಡೀ ರಾಜ್ಯವನ್ನೆ ತಿರುಗಿ ನೋಡುವಂತೆ ಮಾಡಿದೆ. ಪರಿಷತ್ ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಅವ್ಯಾಚ್ಯ ಶಬ್ದವನ್ನ ಸಿಟಿ ರವಿ ಬಳಕೆ ಮಾಡಿದ್ರು ಅನ್ನೋ ಆರೋಪ ಸದ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ದೊಡ್ಡ ಫೈಟ್ ಶುರುವಾಗಿದೆ.. ಆರೋಪ ಪ್ರತ್ಯಾರೋಪದಲ್ಲೆ ಇದ್ದ ಫೈಟ್ ಇಗ ಆಣೆ ಪ್ರಮಾಣಕ್ಕು ಕಾಲಿಟ್ಟು, ರಾಜಭವನದ ಅಂಗಳಕ್ಕೆ ತಲುಪಿದೆ. ಬೆಳಗಾವಿಯ ಚಳಿಗಾಲದ ಕೊನೆ ದಿನದಲ್ಲಿ ಎಮ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಿಟಿ ರವಿ ಅವ್ಯಾಚ್ಯ ಶಬ್ದ ಬಳಕೆ ಮಾಡಿದ್ದಾರೆಂದು ಆರೋಪ ಆ ನಂತರ ನಡೆದ ಹೈಡ್ರಾಮ, ಸಿಟಿ ರವಿ ಬಂಧನ ಇವೆಲ್ಲವು ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ನಡುವೆ ಸಚಿವೆ ಲಕ್ಷ್ಮೀ ಹೆಬಾಳ್ಕರ್ ವಿರುದ್ದ ಕಿಡಿ ಕಾರಿರೋ ರಾಜ್ಯ ಬಿಜೆಪಿ, ಸಿ.ಟಿ ರವಿ ಪರ ಭರ್ಜರಿ ಬ್ಯಾಟ್ ಮಾಡಲು ಸಿದ್ದತೆ ನಡೆಸಿದೆ.. ಮತ್ತೊಂದು ಕಡೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಅಂತಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಕೂಡ ಹಾಕಿದಾರೆ. ರಾಜ್ಯ ರಾಜಕೀಯದಲ್ಲಿ ಮತ್ತೆ ಆಣೆ ಪ್ರಮಾಣ ಶುರುವಾಗುತ್ತಾ ಎಂಬ ಚರ್ಚೆ ಶುರುವಾಗಿದೆ. ಆದರೆ, ಪರಿಷತ್‌ನಲ್ಲಿ ನಡೆದ ಪ್ರಕರÀಣಕ್ಕೆ ಯಾವುದೇ ಸಾಕ್ಷಿ ಇಲ್ಲಾ, ಹಾಗೂ ಪೊಲೀಸರ ನಡೆಯ ಬಗ್ಗೆ ಸಭಾಪತಿ ಬಸವರಾಜ್ ಹೊರಟ್ಟಿ ಅಸಮಧಾನ ಹೊರಹಾಕಿದ್ದಾರೆ ಈ ಬಗ್ಗೆ ಮೂರ್ನಾಲ್ಕು ದಿನಗಳಲ್ಲಿ ಪ್ರಮುಖ ಮೂರು ಅಸ್ತ್ರಗಳನ ಪ್ರಯೋಗ ಮಾಡಲು ಬಿಜೆಪಿ ತೆರೆಮರೆಯ ಸಿದ್ದತೆ ನಡೆಸಿದೆ.. ರಾಜ್ಯಪಾಲರನ್ನ ಭೇಟಿಯಾಗಿ ಪೊಲೀಸರ ನಿಗೂಢ ವರ್ತನೆ ಬಗ್ಗೆ ವಿಸ್ತೃತ ದೂರು ನೀಡಲು ಬಿಜೆಪಿ ನಿರ್ಧಾರ ಮಾಡಿದ್ದು ಇಂದು ರಾಜ್ಯಪಾಲರನ್ನ ಬೇಟಿ ಮಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಮಾಜಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಘಟನೆಯ ಸಂಪೂರ್ಣ ವಿವರವನ್ನ ರಾಜ್ಯಪಾಲರಿಗೆ ನೀಡಿದ್ದಾರೆ.. ಈ ಪ್ರಕರಣವನ್ನ ಸಿಐಡಿ ತನಿಖೆಗೆ ಕೊಡಲು ಸರ್ಕಾರ ಮುಂದಾಗ್ತಿದ್ದAತೆ, ಸರ್ಕಾರದ ನಿರ್ಧಾರದ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿದೆ.. ಇದಕ್ಕೆ ನಾವೇನು ಕಮ್ಮಿ ಇಲ್ಲಾ ಅನ್ನೋ ಹಾಗೆ ಪೊಲೀಸರ ನಡವಳಿಕೆ ಹಾಗೂ ಲಾ ಅಂಡ್ ಆರ್ಡರ್ ಫೇಲ್ಯೂರ್ ಬಗ್ಗೆ ಕೇಂದ್ರ ಗೃಹ ಇಲಾಖೆಗೂ ದೂರು ನೀಡಲು ಚಿಂತನೆ ನಡೆದಿದೆ.. ಜೊತೆಗೆ ಮಾನವ ಹಕ್ಕುಗಳ ಆಯೋಗಕ್ಕು ದೂರು ನೀಡಿ ಕಾನೂನಾತ್ಮಕ ಹೋರಾಟ ನಡೆಸೋದಕ್ಕೆ ಸಿಟಿ ರವಿಗೆ ಸಂಪೂರ್ಣ ಬೆನ್ನೆಲುಬಾಗಿ ಬಿಜೆಪಿ ನಿಂತಿದೆ. ಎರಡು ಮೂರು ದಿನಗಳಲ್ಲಿ ಬಿಜೆಪಿ ನಾಯಕರಿಂದ ಅಂತಿಮ ಚರ್ಚೆ ನಡೆಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ಸಹ ನಿರ್ಧಾರ
ಬೆಳಗಾವಿಯ ಕದನ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು..!
No Ads
Log in to write reviews