ಹಲವು ತಪ್ಪುಗಳನ್ನು ಮಾಡಿದ ಆರೋಪ ಹೊಂದಿದ್ದ ಚೈತ್ರಾ ತಪ್ಪು ಮಾಡಿದರೂ ಅದನ್ನು ಮನ್ನಿಸಿ ಒಳಕ್ಕೆ ಕರೆದುಕೊಂಡಿದ್ದು ಬಿಗ್ ಬಾಸ್. ರಿಯಾಲಿಟಿ ಶೋಗೆ ಬಂದ ಬಳಿಕ ಅವರನ್ನು ನೋಡುವ ರೀತಿ ಬದಲಾಗಿದೆ. ಅವರಿಗೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಚೈತ್ರಾ ಅವರು 100 ದಿನಗಳಿಗೂ ಅಧಿಕ ಕಾಲ ಇದ್ದು ಎಲಿಮಿನೇಟ್ ಆದರು. ಅವರು ಹೊರ ಹೋಗುತ್ತಾರೆ ಎನ್ನುವುದು ಬಹುತೇಕ ಖಚಿತ ಆಗಿತ್ತು. ಅಂತಿಮವಾಗಿ ಧನರಾಜ್ ಹಾಗೂ ಚೈತ್ರಾ ಇದ್ದರು. ಈ ವೇಳೆ ಚೈತ್ರಾ ಕುಂದಾಪುರ ಅವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆದರು. ಬಿಗ್ ಬಾಸ್ನಿಂದ ಎಲಿಮಿನೇಟ್ ಆಗಿ ಬಂದ ಚೈತ್ರಾಗೆ ತಮ್ಮ ಜರ್ನಿಯ ವಿಡಿಯೋ ತೋರಿಸಲಾಯಿತು. ಆಗ ಚೈತ್ರಾ ಕಣ್ಣೀರು ಹಾಕಿದರು. ‘ಯಾಕೆ ಅಳೋದು’ ಎಂದು ಸುದೀಪ್ ಚೈತ್ರಾ ಅವರ ಕಣ್ಣೀರು ಒರಿಸಿದರು. ‘ಉತ್ತಮವಾಗಿ ಆಟ ಆಡಿದ್ದೀರಿ. ಎಷ್ಟು ಬಾರಿ ಕಳಪೆ ತೆಗೆದುಕೊಂಡ್ರಿ ಅನ್ನೋದು ಮುಖ್ಯವಲ್ಲ. ವಿಡಿಯೋ ಕೊನೆಗೊಂಡಿದ್ದು ಉತ್ತಮದೊಟ್ಟಿಗೆ’ ಎಂದಿದ್ದಾರೆ ಸುದೀಪ್. ಕಳೆದ ವಾರ ಅವರಿಗೆ ಉತ್ತಮ ಬಂದಿತ್ತು. ಅದೇ ವಾರವೇ ಚೈತ್ರಾ ಅವರು ಎಲಿಮಿನೇಟ್ ಆಗಿದ್ದಾರೆ. ಈ ಬಗ್ಗೆ ಅವರಿಗೆ ಖುಷಿಯೂ ಇದೆ. ಇನ್ನು ಸುದೀಪ್ ಅವರು ಚೈತ್ರಾ ಅವರ ಕಣ್ಣೀರು ಒರೆಸಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸುದೀಪ್ ಅವರನ್ನು ಶ್ಲಾಘಿಸಿದ್ದಾರೆ. ‘ಸುದೀಪ್ ಅವರು ಸ್ಪರ್ಧಿಗಳಿಗೆ ಅಣ್ಣನ ಸ್ಥಾನ ನೀಡಿದ್ದಾರೆ’ ಎಂದು ಅನೇಕರು ಹೇಳಿದ್ದಾರೆ.
ಚೈತ್ರಾ ಕಣ್ಣೊರಿಸಿ ‘ಯಾಕೆ ಅಳೋದು’ ಎಂದ ಸುದೀಪ್; ಕಿಚ್ಚನ ನಡೆಗೆ ಬಾರಿ ಮೆಚ್ಚುಗೆ
No Ads
Log in to write reviews