No Ads

ಸೆಲೆಬ್ರಿಟಿಗಳಲ್ಲೇ ಡೈವೋರ್ಸ್ ಜಾಸ್ತಿನಾ? ಮಾಡರ್ನ್ ಸಂಬಂಧಗಳು ಹಳ್ಳ ಹಿಡಿಯೋದ್ಯಾಕೆ?

ಕರ್ನಾಟಕ 2024-06-08 14:10:11 459
post

ಬಿಗ್ ಬಾಸ್ ಖ್ಯಾತಿಯ ಮ್ಯೂಸಿಕ್ ಕಂಪೋಸರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡೈವೋರ್ಸ್ ಪ್ರಕರಣ ಸಾಕಷ್ಟು ಆಶ್ಚರ್ಯ ಮತ್ತು ಅನುಮಾನಗಳನ್ನ ಹುಟ್ಟು ಹಾಕಿರುವ ಬೆನ್ನಲ್ಲೇ ಇವತ್ತಿನ  ಆಧುನಿಕ ದಿನದ ಸಂಬಂಧಗಳ ಬಗ್ಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತ ಇವೆ. ಎಲ್ಲಕ್ಕಿಂತ ಮೊದಲು ಒಂದು ವಿಷ್ಯ ಇಲ್ಲಿ ಸ್ಪಷ್ಟಪಡಿಸಬೇಕು ಅಂದ್ರೆ, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡೈವೋರ್ಸ್ ಮಾಡಿಕೊಂಡಿದ್ದು ಯಾಕಿಷ್ಟು ದೊಡ್ಡ ಸುದ್ದಿ ಆಗತ್ತೆ ಅಂದ್ರೆ ಅದಕ್ಕೆ ಪ್ರಮುಖ ಕಾರಣ ಅವರಿಬ್ಬರು ಸೆಲೆಬ್ರಿಟಿಸ್  ಅಂತ ಅಷ್ಟೇ. ಜನಗಳು ಬಹಳ ಈಸಿಯಾಗಿ...   ಈ ಸೆಲೆಬ್ರಿಟಿಗಳ ಯೋಗ್ಯತೆನೇ ಇಷ್ಟು,  ಈ ಆಕ್ಟರ್ ಗಳ ಲೈಫ್ ಅಂದ್ರೆ ಹೀಗೇನೇ ಅವರಿಗೆ ಒಂದು ಸಂಬಂಧನ ಸರಿಯಾಗಿ ಉಳಿಸಿಕೊಳ್ಳೋಕ್ಕೆ ಬರಲ್ಲ ಅಂತೆಲ್ಲ ಕಾಮೆಂಟ್ ಮಾಡೋಕೆ ಶುರು ಮಾಡಿಬಿಡ್ತಾರೆ. ಈ ರೀತಿ ಕಾಮೆಂಟ್ ಮಾಡುವ ಜನಕ್ಕೆ ಹೇಳೋದು ಒಂದೇ, ಒಂದು ಮೂಲದ ಪ್ರಕಾರ ಡೈವೋರ್ಸ್ ಪ್ರಕರಣಗಳು ಬರೀ ಆಕ್ಟಿಂಗ್ ಕ್ಷೇತ್ರದಲ್ಲಿ, ಅಥವಾ ಪಬ್ಲಿಕ್ ಫಿಗರ್ ಆಗಿ ಗುರುತಿಸಿಕೊಂಡಿರುವ ಜನಗಲ್ಲಿ ಆಗುವುದಕ್ಕಿಂತ ಹೆಚ್ಚಾಗಿ ಎಲ್ಲ ರೀತಿಯ paparazzi ಅಥವಾ limelight ಇಂದ ದೂರ ಇರುವ ಸಾಮಾನ್ಯ ಜನರಲ್ಲೆ ಹೆಚ್ಚಾಗಿ ಆಗತ್ತೆ ಅನ್ನೋದು. ಈ ವಿಷಯ ನಿಮ್ಮ ಗಮನಕ್ಕೆ ಇರಲಿ.   ಆದ್ರೆ ಅದು ಬೆಳಕಿಗೆ ಬರಲ್ಲ, ಸೆಲೆಬ್ರಿಟಿಗಳದ್ದಾದ್ರೆ ಈಸಿಯಾಗಿ ಬೆಳಕಿಗ ಬರತ್ತೆ, ಟೀಕಾಕರರ ಬಾಯಿಗೆ ಅವರು ಸಾಫ್ಟ್ ಟರ್ಗೇಟ್ಸ್  ಆಗಿಬಿಡ್ತಾರೆ ಅಷ್ಟೇ. ಇದೇ ಫ್ಯಾಕ್ಟ್. ಸೋ, ಒಬ್ಬರ ಪರ್ಸನಲ್ ಲೈಫ್ ಬಗ್ಗೆ ಕಾಮೆಂಟ್ ಮಾಡುವ ಮೊದಲು ಪ್ರಾಕ್ಟಿಕಲ್ ಆಗಿ ಎಥಿಕಲ್ ಕನ್ಸರ್ನ್ಸ್ ಇಟ್ಕೊಂಡು ಕಾಮೆಂಟ್ ಮಾಡಿ. ನೀವು ಮಾಡುವ ಕಾಮೆಂಟ್ ನಿಮ್ಮ ವ್ಯಕ್ತಿತ್ವ ಎಂಥದ್ದು ಅನ್ನೋದನ್ನ ಹೇಳತ್ತೆ ಅನ್ನೋದು ನಿಮಗೆ ನೆನಪಿರಲಿ.   ಇನ್ನುಈಗ ಮಾಡರ್ನ್ ಡೇ ರಿಲೇಷನ್ಸ್ ಬಗ್ಗೆ ಮಾತಾಡೋದಾದ್ರೆ ಇದ್ರಲ್ಲಿ ಬೇರೆ ಬೇರೆ ರೀತಿಯ ಮಾರ್ಪಾಡುಗಳು ಈಗಾಗ್ಲೇ ಆಗಿಬಿಟ್ಟಿದೆ.   ಮೆಟ್ರೋಪಾಲಿಟನ್ ಸಿಟಿಗಳಲ್ಲಿ ವಾಸಿಸುವ ಬಹುತೇಕ ಯುವಜನರಲ್ಲಿ ಮದುವೆ, commitment ಇದೆಲ್ಲ ಯಾವುದು ಬೇಡ ಅಂತ ಹೆದರಿ ದೂರ ಓಡೋರೇ ಹೆಚ್ಚಾಗಿ ಸಿಗ್ತಾರೆ. ಮದುವೆ ಅನ್ನೋದು ಒಂದು ರೀತಿ ಸ್ವಾತಂತ್ಯ್ರ ಹರಣದ ಮೊದಲ ಹೆಜ್ಜೆ ಅನ್ನೋ ಥಾಟ್ ಕೂಡ ಯುವಜನರಲ್ಲಿ ಬರ್ತಾ ಇದೆ. ಕ್ರಮೇಣ ಮದುವೆ ಅನ್ನೋ concept outdate ಆಗುವ ಲಕ್ಷಣಗಳು ಈಗಾಗಲೇ ಕಾಣುತ್ತಾ ಇದೆ. ತಾಲ್ಲೂಕು, ಹಳ್ಳಿಗಳು ಅಥವಾ ಇವತ್ತಿನ ಫಾಸ್ಟ್ ಫಾರ್ವರ್ಡ್ ಪ್ರಪಂಚದ ಸೋಂಕು ಅಥವಾ ಪ್ರಭಾವ ಇಲ್ಲದ ಪ್ರದೇಶಗಳಲ್ಲಿ ಮಾತ್ರ ಮದುವೆ, ಮಕ್ಕಳು, ಮುಂಜಿ, ನೆಂಟರು, ಇಷ್ಟರು ಇದೆಲ್ಲ ಇನ್ನೂ ಉಳಿದುಕೊಂಡಿವೆ.   ಬಟ್ ಅಲ್ಲೂ ಕೂಡ ಯುವಕರುಗಳಲ್ಲಿ commitment ಅಂದ್ರೆ ಒಂದು ರೀತಿ ಗೊಂದಲ ಇದೆ. ಒಂದು ಟೈಂ ಅಲ್ಲಿ ಮದುವೆ ಎಲ್ಲ ಬೇಡ ಲಿವಿಂಗ್ ಸಂಬಂಧ ಬೆಸ್ಟ್ ಅನ್ನುವವರ ಸಂಖ್ಯೆ ಹೆಚ್ಚಿತ್ತು. ಈಗ ಸಧ್ಯಕ್ಕೆ ಯಾವುದು ಬೇಡ ಸಿಂಗಲ್ ಆಗಿ ಇರೋದೇ ಬೆಟರ್ ಅನ್ನೋ ಭಾವನೆ ಯುವಜನರಲ್ಲಿ ಹೆಚ್ಚಾಗ್ತ ಇದೆ.   ಇವತ್ತಿನ ಕಾಲೇಜ್ ಗೋಯಿಂಗ್ ಬಾಯ್ಸ್ ಅಂಡ್ ಗರ್ಲ್ಸ್ ಗಳಲ್ಲಿ ದೈಹಿಕ ಅಗತ್ಯಗಳ ಪೂರೈಕೆ ಅಥವಾ ಒಂದು ಟೆಂಪರರಿ ಅಟ್ರಾಕ್ಷನ್ ಅಥವಾ ಟೆಂಪರರಿ ಕಂಫರ್ಟ್ ಗೆ ಅಟ್ರಾಕ್ಟ್ ಆಗಿ ಸಂಬಂಧಗಳು ಸೀಮಿತ ಅವಧಿಗೆ restrict ಆಗ್ತಾ ಇರುವ ಪ್ರಕರಣಗಳು ಬಹಳಷ್ಟು ಬೆಳಕಿಗೆ ಬರ್ತಾ ಇವೆ. ಸಂಬಂಧಗಳು ಇವತ್ತು ಟೆಂಪರರಿ ಆಗ್ತಾ ಇವೆ. ofcourse ಇದ್ರಲ್ಲಿ exceptions ಇದೆ.. ಎಲ್ಲ ಟೀನೇಜ್ ಮಕ್ಕಳು, ಅಥವಾ ಕಾಲೇಜ್ ಮಕ್ಕಳು ಹೀಗೆ ಇರ್ತಾರೆ ಅಂಥ ಅಲ್ಲ. ಬಟ್ ಲೈಫ್ ಲಾಂಗ್ ಒಂದೇ ಪಾರ್ಟ್ನರ್ ಗೆ ಸೀಮಿತವಾಗುವ committed relationship ಬಗ್ಗೆ ಯುವಜನತೆ ಈಗ ಅಷ್ಟಾಗಿ ಇಂಟರೆಸ್ಟ್ ತೋರಿಸ್ತಾ ಇಲ್ಲ ಅನ್ನೋದು ಕೂಡ ಒಂದು ಆಘಾತಕಾರಿ ಬೆಳವಣಿಗೆ ಅಂತ ಹೇಳಬಹುದು .ಅದಕ್ಕೆ ಬಹಳಷ್ಟು ಕಾರಣ ಇರಬಹುದು, ಅವರ ಮನೆಗಳಲ್ಲಿನ ವಾತಾವರಣ, ಅವರು ಬೆಳೆದು ಬಂದ ರೀತಿ, ತಂದೆ ತಾಯಿಯರ ನಡುವೆ ಸಾಮರಸ್ಯ ಇಲ್ಲದೇ ಇರೋದು, ಅಥವಾ, ಜೊತೆಗಿರುವ ಫ್ರೆಂಡ್ಸ್ ಗಳಲ್ಲಿ ಆಗುವ ಬ್ರೇಕ್ ಅಪ್ಸ್, ಹುಕ್ ಅಪ್ಸ್, ಶಾರ್ಟ್ ಟರ್ಮ್ ಲವ್... ಹೀಗೆ ಲಾಂಗ್ ಲಾಸ್ಟಿಂಗ್ ಸಂಬಂಧಗಳ ಮೇಲೆ ನಂಬಿಕೆ ಕಮ್ಮಿ ಆಗಲಿಕ್ಕೆ ನಾನಾ ಕಾರಣ ಇವೆ.   ಸೋ ಹಾಗಾಗಿ ಐದೆಲ್ಲದರ ಔಟ್ ಕಮ್ ಈ ರೀತಿ ಡೈವೋರ್ಸ್ ಗಳಿಗೆ ನಾಂದಿ ಆಗುತ್ತಾ ಇದ್ಯಾ ಅನ್ನೋ ಅನುಮಾನ ಕೂಡ ಕಾಡೋದಕ್ಕೆ ಶುರು ಆಗಿದೆ.   - ಸುಜಯ್ ರಾಜ್, ಫಿಲ್ಮ್ ಬ್ಯುರೋ, ನ್ಯಾಷನಲ್ ಟಿವಿ 

No Ads
No Reviews
No Ads

Popular News

No Post Categories
Sidebar Banner
Sidebar Banner