ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಟೂರ್ನಿ ಶುರುವಾಗಿ ಎರಡು ವಾರಗಳು ಆಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಾನು ಆಡಿದ 4 ಪಂದ್ಯಗಳಲ್ಲಿ ಒಂದು ಮ್ಯಾಚ್ ಮಾತ್ರ ಗೆದ್ದಿದ್ದು, ಮೂರು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಪ್ಲೇ ಆಫ್ಗೆ ಹೋಗಲು ಆರ್ಸಿಬಿಗೆ ಅವಕಾಶ ಇದ್ಯಾ? ಅನ್ನೋ ಚರ್ಚೆ ಜೋರಾಗಿದೆ.ಹೌದು, ಎಮ್.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ ಸೋತಿತ್ತು. ಇದಾದ ಬೆನ್ನಲ್ಲೇ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಬಳಿಕ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸೋತಿದ್ದ ಆರ್ಸಿಬಿ ನಿನ್ನೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮಂಡಿಯೂರಿದೆ. ಆದ್ದರಿಂದ ಆರ್ಸಿಬಿ ಪ್ಲೇ ಆಫ್ಗೆ ಹೋಗಲು ಇನ್ನೆಷ್ಟು ಪಂದ್ಯಗಳು ಗೆಲ್ಲಬೇಕು? ನಿಜವಾಗಲೂ ಅವಕಾಶ ಇದ್ಯಾ? ಅನ್ನೋ ಸಹಜವಾಗಿ ಹುಟ್ಟಿಕೊಂಡಿದೆ.ಇನ್ನು, ಈ ಐಪಿಎಲ್ ಸೀಸನ್ನಲ್ಲಿ ಒಟ್ಟು 72 ಪಂದ್ಯಗಳು ಇದೆ. ಅದರಲ್ಲಿ ಪ್ರತೀ ಟೀಮ್ 14 ಪಂದ್ಯಗಳು ಆಡಲಿವೆ. ಆರ್ಸಿಬಿ ಇನ್ನೂ 10 ಪಂದ್ಯಗಳನ್ನು ಆಡಲಿದ್ದು, ಈ ಪೈಕಿ 7 ಮ್ಯಾಚ್ ಗೆಲ್ಲಲೇಬೇಕಿದೆ. 7 ಪಂದ್ಯ ಗೆದ್ದು ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನದಲ್ಲಿ ಬರಬೇಕಿದೆ. ಆಗ ಮಾತ್ರ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ನಾಯಕತ್ವದ ಆರ್ಸಿಬಿ ಪ್ಲೇ ಆಫ್ಗೆ ಹೋಗಲು ಚಾನ್ಸ್ ಇರಲಿದೆ. ಇಲ್ಲದೆ ಹೋದರೆ ಈ ಬಾರಿಯೂ ಮನೆಗೆ ಮರಳಬೇಕಿರುತ್ತೆ.
ಬ್ಯಾಕ್ ಟು ಬ್ಯಾಕ್ ಹೀನಾಯ ಸೋಲು; ಪ್ಲೇ ಆಫ್ಗೆ ಹೋಗಲು ಆರ್ಸಿಬಿಗೆ ಅವಕಾಶ ಇದ್ಯಾ
No Ads
Log in to write reviews