No Ads

ಬೂಮ್..ಬೂಮ್..ಬುಮ್ರಾ ಸ್ಟ್ರೋಕ್ ಪಾಕ್ ಬಗ್ಗುಬಡಿದು ಬೀಗಿದ ಭಾರತ

ಕ್ರೀಡೆ 2024-06-10 14:27:28 240
post

ಎಲ್ಲಾ ಕೈತಪ್ಪಿಹೋಯ್ತು ಅಂದುಕೊಳ್ಳುವಷ್ಟರಲ್ಲಿ    ವಾಟ್ ಆ ಕಮ್ ಬ್ಯಾಕ್? ನಿನ್ನೆ ಮ್ಯಾಚ್ ನ ಎಲ್ಲ ಕ್ರೆಡಿಟ್ಸ್ ಬೌಲರ್ ಗಳಿಗೆ ಹೋಗಬೇಕು ಇನ್ಕ್ಲೂಡಿಂಗ್ ಪಾಕಿಸ್ತಾನ್ ಬೌಲರ್ಸ್ ಗೆ. ಯಾಕಂದ್ರೆ 119 ರನ್ ಗಳಿಗೆ ನಮ್ಮನ್ನ ರೆಸ್ಟ್ರಿಕ್ಟ್ ಮಾಡೋದ್ರಲ್ಲಿ ಪಿಚ್ ನ ಪಾತ್ರ ಎಷ್ಟಿತ್ತೋ ಅಷ್ಟೇ ಪಾಕ್ ಬೌಲರ್ ಗಳ ಪಾತ್ರ ಕೂಡ ಇತ್ತು.   ಬಟ್ ಬೂಮ್ರಾ ಸ್ಪೆಲ್ ಗೆ ಒಂದು ಹ್ಯಾಟ್ಸ್ ಆಫ್ ಹೇಳಲೇಬೇಕು. ಒಂದು ಹಂತದಲ್ಲಿ 11.5 ಓವರ್ ಗೆ ಪಾಕಿಸ್ತಾನ ಸ್ಕೋರ್ 2 ವಿಕೆಟ್ ನಷ್ಟಕ್ಕೆ 71 ರನ್ ಆಗಿದ್ದಾಗ ಇಂಡಿಯಾ ವಿನ್ ಆಗೋ ಚಾನ್ಸ್ ಇಲ್ವೇ ಅಲ್ಲ ಅಂತ ಅನ್ಸಿತ್ತು. ಬಟ್ ನಮ್ಮ ಬೌಲರ್ ಗಳು ಕೈ ಬಿಡಲಿಲ್ಲ ಇಬ್ಬರು ಓಪನರ್ ಗಳ ಜೊತೆಗೆ ಇನ್ನೊಂದು ಬಾಟಮ್ ಆರ್ಡರ್ ವಿಕೆಟ್ ತೆಗೆದ ಬೂಮ್ರಾ ನಿನ್ನೆ ಮ್ಯಾಚ್ ನ ರಿಯಲ್ ಹೀರೋ.   ಹಾರ್ದಿಕ್ ಪಾಂಡ್ಯ ಕೂಡ ಬೇಕಾಗಿರೋ ಟೈಂ ಅಲ್ಲಿ 2 ಒಳ್ಳೆ ವಿಕೆಟ್ ತೆಗೆದ್ರು, ಅರ್ಶದೀಪ್, ಮೊಹಮ್ಮದ್ ಸಿರಾಜ್ ಎಲ್ಲರ ಸ್ಪೆಲ್ ಸೂಪರ್ ಆಗಿತ್ತು. ಲಾಸ್ಟ್ ಓವರ್ ಬೌಲ್ ಮಾಡಿದ ಅರ್ಶದೀಪ್ ಗೂ ಕೂಡ ಈ ಗೆಲುವಿನ ಕ್ರೆಡಿಟ್ ಸ್ವಲ್ಪ ಮಟ್ಟಿಗೆ ಕೋಡ್ಬೇಕಾಗತ್ತೆ. ಲಾಸ್ಟ್ ಓವರ್ ಅಲ್ಲಿ 18 ರನ್ ಬೇಕಿತ್ತು, ಎನ್ ಬೇಕಾದ್ರೂ ಆಗಬಹುದಿತ್ತು.  ಕೊನೆಯ ಓವರ್ ನ ಮೊದಲನೇ ಬಾಲ್ ಗೆ ಒಂದು ವಿಕೆಟ್ ತೆಗೆದ್ರು ಫೈನಲಿ ಆರು ರನ್ ಗಳಿಂದ ಭಾರತ ಪಾಕಿಸ್ತಾನವನ್ನು ಸೋಲಿಸಿ ಗೆದ್ದು ಬೀಗಿತು.   ಬ್ಯಾಟಿಂಗ್ ಅಂತ ಬಂದ್ರೆ ವಿರಾಟ್ ಕೊಹ್ಲಿ ಎರಡನೇ ಬಾರಿ ವಿಫಲರಾದರು, ಪಂತ್ ಇದ್ದಿದ್ರಿಂದ atleast 119 ರನ್ ಬರೋಕೆ ಸಾಧ್ಯ ಆಯ್ತು. 42 ರನ್ ಹೊಡೆದ ಪಂತ್  ಆರು ಫೋರ್ ಹೊಡೆದಿದ್ರೂ, ಅಕ್ಸಾರ್ ಪಟೇಲ್ ಅವರ 20ರನ್ ಆಟ ನಿನ್ನೆ ಬಹಳ ಇಂಪಾರ್ಟೆಂಟ್ ಆಗಿತ್ತು.. ಇನ್ನು ಉಳಿದವರೆಲ್ಲ ಸಿಂಗಲ್ ಡಿಜಿಟ್ ಗೆ ಔಟ್ ಆದ್ರೂ. ಬಟ್ ನಮ್ ಬೌಲರ್ ಗಳು ಕೈ ಕೊಡಲಿಲ್ಲ.   ಬಹಳ ಸಮಯೋಚಿತವಾಗಿ ಅಡಿ ಪಂದ್ಯವನ್ನ ಗೆಲ್ಲಿಸಿಕೊಟ್ಟರು. ಸೋ, ನೆಕ್ಟ್ ಇಂಡಿಯಾ vs USA ಮ್ಯಾಚ್ ಇದೆ.. ಎರಡೂ  ತಂಡಗಳು ಎರಡು ಮ್ಯಾಚ್ ಗೆದ್ದಿದ್ದಾರೆ. ಈ ಮ್ಯಾಚ್ ಬಗ್ಗೆ ಈಗ excitement ಜಾಸ್ತಿ ಆಗಿದೆ.   ಇನ್ನು ಇದೆಲ್ಲದರ ಮಧ್ಯೆ ದುಬೆ ಆಟವನ್ನ ಖಂಡಿಸುವ ಭರದಲ್ಲಿ CSK ಕೋಟ ದ ಆಟಗಾರ, ಡಮ್ಮಿ ಇವನು ಅಂತೆಲ್ಲ ಸಿಕ್ಕಾಪಟ್ಟೆ ದುಬೆ ಟ್ರೊಲ್ಲಿಂಗ್ ಸೋಶಿಯಲ್ ಮೀಡಿಯಾದಲ್ಲಿ ಶುರು ಆಗಿದೆ. ಹಾಂಗೆ ನೋಡಿದ್ರೆ ಕೊಹ್ಲಿ ಕೂಡ ಎರಡು ಮ್ಯಾಚ್ ಅಲ್ಲಿ ಏನು ಅಡಿಲ್ಲ ಹಾಗಂತ ಅವರನ್ನ ಡಮ್ಮಿ ಅನ್ನೋ ಕ್ಕಗತ್ತ? ಇಂಟರ್ನ್ಯಾಷನಲ್ ಮ್ಯಾಚ್ ನ ನೀವು ಐಪಿಎಲ್ ಮ್ಯಾಚ್ ಗೆ ಕಂಫೇರ್ ಮಾಡೋದೇ ತಪ್ಪು.   ಅಂತಿಮವಾಗಿ ಇಂಡಿಯನ್ ಟೀಮ್ ಗೆ ಆಡುವವರೆಲ್ಲಾ ನಮ್ಮ ಭಾರತದ ಆಟಗಾರರು ಅಷ್ಟೇ ಅಲ್ಲಿ CSK, RCB ಅದೆಲ್ಲ ಬರಲ್ಲ. ಇನ್ಫಾಕ್ಟ್ ಈ ರೀತಿ IPL ಅನ್ನೋ ಪಂದ್ಯಾವಳಿ  ಮಾಡಿ ಬೇರೆ ಬೇರೆ ತಂಡ ಕಟ್ಟಿ ನಮ್ಮ ನಮ್ಮಲ್ಲೇ ತಂದಿಟ್ಟು ತಮಾಷೆ ನೋಡ್ತಾ ಇರೋರೆಲ್ಲಾ ಸಕತ್ತಾಗಿ ದುಡ್ಡು ಮಾಡ್ತಾ ಇರೋ ವಿಷ್ಯ ನಿಮಗೆ ಗೊತ್ತಾ? ಅವರುಗಳ ಹುನ್ನಾರ ಏನು ಅಂತ ನಿಮಗೆ ಗೊತ್ತಾ? ಅದರ ಬಗ್ಗೆ ಹೇಳ್ತ ಹೋದ್ರೆ IPl ಅಷ್ಟು ಕ್ರಿಂಜ್ ಪಂದ್ಯಾವಳಿ ಯಾವ್ದು ಇಲ್ಲ ಬಿಡಿ ಅದರ ಬಗ್ಗೆ ಒಂದು ಪ್ರತ್ಯೇಕ  ವರದಿ ಮಾಡ್ಬೆಕಾಗತ್ತೆ.   ಸದ್ಯಕ್ಕೆ ವರ್ಲ್ಡ್ ಕಪ್ ಅಲ್ಲಿ ಇಂಡಿಯಾ ಎರಡು ಮ್ಯಾಚ್ ಗೆದ್ದಿದೆ next ಏನಿದ್ರೂ ನಮ್ಮ ಚಿತ್ತ ಇಂಡಿಯಾ USA match ನತ್ತ ಅಷ್ಟೇ   ಸುಜಯ್ ರಾಜ್. ನ್ಯಾಷನಲ್ ಟಿವಿ 

No Ads
No Reviews
No Ads

Popular News

No Post Categories
Sidebar Banner
Sidebar Banner