No Ads

ಅಯ್ಯೋ.. ಇದೇನಿದು ಬಾಂಬೆ ಬ್ಲಡ್​ ಗ್ರೂಪ್! ಈ ಅಪರೂಪದ ರಕ್ತದ ಪ್ರಕಾರ ಯಾರಲ್ಲಿ ಕಂಡು ಬರುತ್ತೆ

ವಿದೇಶ 2024-03-21 16:35:58 253
post

ಇದೇನಪ್ಪಾ ಬಾಂಬೆ ಬ್ಲಡ್​ ಗ್ರೂಪ್​!. ಸಾಮಾನ್ಯವಾಗಿ ​, A+, A-, B+, B-, O+, O-, AB+, AB- ಬ್ಲಡ್​ ಗ್ರೂಪ್​ ಬಗ್ಗೆ ಕೇಳಿದ್ದೇವೆ. ಆದರೆ ಹೊಸದೊಂದು ಬ್ಲಡ್​ ಗ್ರೂಪ್​ ಕೇಳಿಬಂದಿದೆ. ಅಂದುವೇ ಬಾಂಬೆ ಬ್ಲಡ್​ ಗ್ರೂಪ್​. ಅಂದಹಾಗೆಯೇ ಬಾಂಬೆ ಅಂದ್ರೆ ಮುಂಬೈ ಬ್ಲಡ್​​ ಗ್ರೂಪ್​? ಏನಿದು?. ಇಂಥಾ ಅಪರೂಪದ ಬ್ಲಡ್​ ಗ್ರೂಪ್​ ಯಾರಲ್ಲಿ ಕಾಣಿಸುತ್ತೆ?. ಬಹಳ ಅಪರೂಪದ ಈ ಬ್ಲಡ್​ ಗ್ರೂಪ್​ ಬಗ್ಗೆ ಮಾಹಿತಿ ಇಲ್ಲಿದೆ. ಬಾಂಬೆ ರಕ್ತದ ಗ್ರೂಪ್​​ ಇದನ್ನು ‘ಹೆಚ್​ಹೆಚ್’ ಎಂದು ಕರೆಯುತ್ತಾರೆ. ಇದು ಅಪರೂಪದ ರಕ್ತದ ಪ್ರಕಾರ. 1952ರಲ್ಲಿ ಇದು ಬೆಳಕಿಗೆ ಬಂತು. ಬ್ರಡ್​ ಗ್ರೂಪ್​ ರೆಫೆರೆನ್ಸ್​ ಸೆಂಟರ್​ನ ಡಾ.ವೈಎಮ್​​​ ಭೆಂಡೆ ಈ ರಕ್ತದ ಪ್ರಕಾರವನ್ನು ಬಾಂಬೆಯನ್ನು ಕಂಡು ಹಿಡಿದರು. ಸದ್ಯ ಬಾಂಬೆ ಬ್ಲಡ್​​ ಗ್ರೂಪ್​ ಕೆಲವೇ ಕೆಲವು ಮಂದಿಯಲ್ಲಿ ಕಂಡುಬರುತ್ತದೆ. ಈ ರಕ್ತದ ಫಿನೋಟೈಪ್​​ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಇರಾನ್​​ನಲ್ಲಿ ಕಂಡುಬಂದಿದೆ. ಅಚ್ಚರಿಯ ಸಂಗತಿ ಎಂದರೆ 10 ಸಾವಿರ ಭಾರತೀಯರ ಪೈಕಿ ಒಬ್ಬರಲ್ಲಿ ಈ ಅಪರೂಪದ ಬಾಂಬೆ ಬ್ಲಡ್​ ಕಾಣಿಸುತ್ತದೆ. ಭಾರತದಲ್ಲಿ ಬಾಂಬೆ ರಕ್ತದ ಗ್ರೂಪ್​ ಹೊಂದಿರುವವರು ಇದ್ದಾರೆ. ಮಾಹಿತಿ ಪ್ರಕಾರ ಸುಮಾರು 450 ಜನರು ಅಪರೂಪದ ​ಬಾಂಬೆ ರಕ್ತದ ಗುಂಪು ಹೊಂದಿದ್ದಾರೆ ಎಂದು ತಿಳಿದುಬಂದಿದೆ.  

No Ads
No Reviews
No Ads

Popular News

No Post Categories
Sidebar Banner
Sidebar Banner