ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಬಿಜೆಪಿ ಪಕ್ಷದ ಹಿರಿಯ ನಾಯಕರ ವಿರುದ್ಧ ಫೋಟೋ ಪೋಸ್ಟ್ ಮಾಡಿದ ಆರೋಪದಲ್ಲಿ FIR ದಾಖಲಿಸಲಾಗಿದೆ. 153(a) : ವ್ಯಕ್ತಿಯ ವೈಯಕ್ತಿವಾಗಿ ಚಾರಿತ್ರ್ಯವಧೆ ಮಾಡುವುದು 504 : ದುರುದ್ದೇಶಪೂರ್ವಕವಾಗಿ ನಿಂದನೆ ಮಾಡುವುದು 506: ಪರೋಕ್ಷ ಅಥವಾ ಪ್ರತ್ಯಕ್ಷ ಜೀವ ಬೆದರಿಕೆ ಒಡ್ಡುವುದು 464: ಸುಳ್ಳು ಪೋಸ್ಟ್ ಕ್ರಿಯೆಟ್ ಮಾಡಿ ಅಪಪ್ರಚಾರ ಆರೋಪ ಅಡಿ ಕೇಸ್ ದಾಖಲು! ಕರ್ನಾಟಕ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬಿ.ಎಸ್ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರ ಕೈಗೆ ಸ್ಲೇಟ್ ಕೊಟ್ಟ ಫೋಟೋಗಳನ್ನ ಪೋಸ್ಟ್ ಮಾಡಲಾಗಿತ್ತು. ಈ ಫೋಟೋ ಪೋಸ್ಟ್‌ಗೆ ಸಂಬಂಧಪಟ್ಟಂತೆ ಯೋಗೇಂದ್ರ ಹೊಡಾಘಟ್ಟರವರು ಪಿಸಿಆರ್ ದಾಖಲು ಮಾಡಿದ್ರು. 42ನೇ ಎಸಿಎಂಎಂ ಜನಪ್ರತಿನಿಧಿಗಳ ನ್ಯಾಯಾಲಯ ಡಿಕೆಶಿ & ಬಿಆರ್ ನಾಯ್ಡು ವಿರುದ್ದ ಕೇಸ್‌ಗೆ ಆದೇಶಿಸಿತ್ತು. ಕೋರ್ಟ್ ಆದೇಶದಂತೆ IPC 153(A), 504, 506 & 464 ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಡಿಸಿಎಂ ಡಿ.ಕೆ ಶಿವುಕುಮಾರ್ ವಿರುದ್ಧ ನೀಡಿದ ದೂರಿನಲ್ಲಿ ಬಿಜೆಪಿ ನಾಯಕರ ಕೈಗೆ ಸ್ಲೇಟ್ ಕೊಟ್ಟು ಸುಳ್ಳು ಬರಹದ ಪೋಸ್ಟ್ ಮಾಡಲಾಗಿದೆ. ಬಿಜೆಪಿ ಎಂಎಲ್ಎ, ಸಂಸದರು ಸೇರಿ ಅನೇಕ ನಾಯಕರ ವಿರುದ್ಧ ಪೋಸ್ಟ್ ಮಾಡಲಾಗಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಡಿಕೆ ವಿರುದ್ಧ ಕೇಸ್ ದಾಖಲಾಗಿದೆ.
ಬಿಜೆಪಿ ನಾಯಕರ ಕೈಗೆ ಸ್ಲೇಟ್ ಕೊಟ್ಟ ಫೋಟೋಗಳು ಪೋಸ್ಟ್
No Ads
Log in to write reviews