No Ads

ನಡರಸ್ತೆಯಲ್ಲಿ ಕಿಸ್ ಮಾಡುತ್ತಾ ಜಾಲಿ ರೈಡ್ ವಿಡಿಯೋ ವೈರಲ್; ಬೈಕ್ ಸವಾರನಿಗೆ ಬಿತ್ತು ಬಾರಿ ದಂಡ!

ಕರ್ನಾಟಕ 2025-03-11 14:01:52 138
post

ಜಯನಗರದ  ಮೂರು ಮಂದಿ ಒಂದೇ ಬೈಕಲ್ಲಿ, ಅದೂ ಹೆಲ್ಮೆಟ್ ಇಲ್ಲದೆ ಬೇಕಾಬಿಟ್ಟಿ ಬೈಕ್ ಚಲಾಯಿಸುತ್ತಾ, ನಡರಸ್ತೆಯಲ್ಲಿ ಕಿಸ್ ಮಾಡುತ್ತಾ ಬೈಕ್ ಚಲಾಯಿಸ್ತಿದ್ರು, ಬುದ್ಧಿ ಹೇಳೋಕೆ ಬಂದವ್ರಿಗೂ ಬೈದು ಜಗಳ ಮಾಡಿದ್ರು.. ಇದಕ್ಕೆ ಪಾಠ ಕಲಿಸೋಕೆ ಮುಂದಾದ ಸಹಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ

ಪಾರ್ಟಿ ಮೂಡ್‌ನಲ್ಲಿ ಹೋಗ್ತಿದ್ದ ಜಾಲಿ ರೈಡ್‌ ಕ್ಷಣದಲ್ಲಿ ಬದಲಾಗಿ ದುಬಾರಿ ದಂಡ ಕಟ್ಟಿದ್ದಾನೆ ಬೈಕ್‌ ಸವಾರ. ಬೆಂಗಳೂರು ರಾಗಿಗುಡ್ಡ ಮೆಟ್ರೋ ನಿಲ್ದಾಣ ಬಳಿ ಬೈಕ್‌ನಲ್ಲಿ ಹೋಗ್ತಿದ್ದ 23 ವರ್ಷದ ಯುವಕ ಹಾಗೂ ಆತನ ಹಿಂದೆ ಕುಳಿತಿದ್ದ ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಯುವಕ ಬೈಕ್ ಓಡಿಸುತ್ತಿದ್ದ.. ಅದೂ ತ್ರಿಬಲ್ ರೈಡಿಂಗ್.. ಹಿಂದೆ ಕುಳಿತಿದ್ದ ಸವಾರರು ಕಿಸ್ಸಿಂಗ್ ಮಾಡುತ್ತಿದ್ದರು. ಅದನ್ನೂ ರಸ್ತೆಯಲ್ಲಿದ್ದ ಇತರ ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ. ಇದನ್ನು ಗಮನಿಸಿದ ಜಯನಗರ ಸಂಚಾರ ಪೊಲೀಸರು ಗಂಭೀರವಾಗಿ ಪರಿಗಣಿಸಿ ದಂಡ ವಿಧಿಸಿದ್ದಾರೆ. ಬೈಕ್ ಸವಾರ ಜೆಸಿ ನಗರದ ನಿವಾಸಿಯಾಗಿದ್ದು, ಆತ ಹೆಲ್ಮೆಟ್ ಧರಿಸಿಲ್ಲ, ಅತಿವೇಗವಾಗಿ, ಅಜಾಗೃತೆಯಿಂದ ಬೈಕ್ ಓಡಿಸುತ್ತಿದ್ದ. ಜೊತೆಗೆ ಮೂರು ಮಂದಿ ಬೈಕ್‌ ನಲ್ಲಿ ಸಂಚರಿಸುವುದು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಆಗಿರೋದ್ರಿಂದ ನಾಲ್ಕು ಸಾವಿರ ದಂಡ ವಿಧಿಸಲಾಗಿದೆ.

ಜಯನಗರ ಸಂಚಾರ ಪೊಲೀಸರ ಮಾಹಿತಿ ಪ್ರಕಾರ, ಯುವಕ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಾನೆ. ವಿಡಿಯೋ ವೈರಲ್ ಆದಾಗ ಮೈಸೂರಿಗೆ ಪರಾರಿಯಾಗಿದ್ದ ಈತ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದ. ಪೊಲೀಸ್ ತಂಡ ಆರ್‌ಟಿಒ ದಾಖಲೆಗಳಲ್ಲಿ ಸಿಕ್ಕ ವಿಳಾಸದ ಆಧಾರದ ಮೇಲೆ ಆತನ ಮನೆಗೆ ಹೋಗಿದ್ದಾರೆ. ಆತನ ತಂದೆ ಭದ್ರತಾ ಸಿಬ್ಬಂದಿಯಾಗಿ ಮತ್ತು ತಾಯಿ ಮನೆಗೆಲಸದವರಾಗಿ ಕೆಲಸ ಮಾಡುತ್ತಾರೆ. ಈತ ಅವರ ಒಬ್ಬನೇ ಮಗ. ಓದು ನಿಲ್ಲಿಸಿದ್ದಾನೆ. ಆತನ ತಾಯಿ ಸಾಲ ಮಾಡಿ ಬೈಕ್ ಖರೀದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಯುವಕನನ್ನು ಸಂಪರ್ಕಿಸಿ ಬೆಂಗಳೂರಿಗೆ ಮರಳಲು ಮನವೊಲಿಸಿದ್ದಾರೆ. ಹಿಂಬದಿಯ ಸೀಟಿನಲ್ಲಿ ಕುಳಿತವರು ತನ್ನ ಸ್ನೇಹಿತರೆಂದು ಪೊಲೀಸರಿಗೆ ತಿಳಿಸಿದ್ದಾನೆ. ಅವರು ಪಾರ್ಟಿಗೆ ಹೋಗಿ ಮನೆಗೆ ಮರಳುತ್ತಿದ್ದಾಗ ಪ್ರಯಾಣಿಕರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

"ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ, ಟ್ರಿಪಲ್ ರೈಡಿಂಗ್, ಅಜಾಗರೂಕ ಚಾಲನೆ ಮತ್ತು ಇತರ ಉಲ್ಲಂಘನೆಗಳಿಗಾಗಿ 4,000 ರೂಪಾಯಿ ದಂಡ ವಿಧಿಸಿ, ಭವಿಷ್ಯದಲ್ಲಿ ಇಂತಹ ಚಟುವಟಿಕೆಗಳಲ್ಲಿ ತೊಡಗಬಾರದೆಂದು ಎಚ್ಚರಿಕೆ ನೀಡಿ ಕಳುಹಿಸಿದ್ದೇವೆ" ಎಂದು ಸಂಚಾರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

 

No Ads
No Reviews
No Ads

Popular News

No Post Categories
Sidebar Banner
Sidebar Banner