ಸ್ಯಾಂಡಲ್ವುಡ್ ನಟ ಚಾಕೋಲೇಟ್ ಬಾಯ್ ಅಂತಲೇ ಫೇಮಸ್ ಆಗಿರೋ ನಟ ದಿಗಂತ್ ನಟನೆಯ ಮಾರಿಗೋಲ್ಡ್ ಸಿನಿಮಾ ಇಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಟ್ರೇಲರ್ ಮೂಲಕವೇ ಎಲ್ಲರ ಗಮನ ಸೆಳೆದಿದ್ದ ಮಾರಿಗೋಲ್ಡ್ ಸಿನಿಮಾ ರಿಲೀಸ್ಗೂ ಮುನ್ನ ಸೆಲೆಬ್ರಿಟಿ ಶೋ ಏರ್ಪಡಿಸಲಾಗಿತ್ತು. ಈ ಸೆಲೆಬ್ರಿಟಿ ಶೋನಲ್ಲಿ ಬಿಗ್ಬಾಸ್ 10ರ ಸ್ಪರ್ಧಿಗಳು ಬಂದಿದ್ದರು. ನೀತು, ಸ್ನೇಹಿತ್ ಗೌಡ, ಌಪರ್ ಈಶಾನಿ, ಡ್ರೋನ್ ಪ್ರತಾಪ್, ಸಿರಿ ಬಂದಿದ್ದರು. ಸಂಗೀತಾ ಶೃಂಗೇರಿ ಅವರು ಬಿಗ್ಬಾಸ್ ಮೂಲಕ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಇದೀಗ ಬಿಗ್ಬಾಸ್ ಮುಕ್ತಾಯದ ಬೆನ್ನಲ್ಲೇ ಸಂಗೀತಾ ಶೃಂಗೇರಿ ನಟನೆಯ ಮಾರಿಗೋಲ್ಡ್ ಸಿನಿಮಾ ಇಂದು ಬಿಡುಗಡೆಯಾಗಿದೆ. ಸದ್ಯ ಈ ಮಾರಿಗೋಲ್ಡ್ ಸಿನಿಮಾದ ಸೆಲೆಬ್ರಿಟಿ ಶೋನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅದರಲ್ಲೂ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳದ ಡ್ರೋನ್ ಪ್ರತಾಪ್ ಅವರು ಪ್ರೀತಿಯ ದೀದಿಯ ಸಿನಿಮಾ ನೋಡಲು ಬಂದಿದ್ದರು. ಇನ್ನು ಬಿಗ್ಬಾಸ್ ಸ್ಪರ್ಧಿಗಳನ್ನು ಮತ್ತೆ ಕಣ್ತುಂಬಿಕೊಂಡ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ರಘುವರ್ಧನ್ ಶರವಣ ಅವರು ಮಾರಿಗೋಲ್ಡ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಾಘವೇಂದ್ರ ನಾಯಕ್ ಅವರು ಮಾರಿಗೋಲ್ಡ್ ನಿರ್ದೇಶನ ಮಾಡಿದ್ದಾರೆ. ಈ ಮಾರಿಗೋಲ್ಡ್ ಸಿನಿಮಾದಲ್ಲಿ ನಟ ದಿಗಂತ್, ಬಿಗ್ಬಾಸ್ ಬೆಡಗಿ ಸಂಗೀತಾ ಶೃಂಗೇರಿ, ಸಂಪತ್ ಮೈತ್ರಿ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ವಜ್ರಂಗ ಶೆಟ್ಟಿ ಮುಂತಾದವರು ಸ್ಟಾರ್ ಬಳಗ ಇದೆ.
ಡ್ರೋನ್ ಪ್ರತಾಪ್; ಸಂಗೀತಾ ದೀದಿ ಜೊತೆ ದಿಢೀರ್ ಪ್ರತ್ಯಕ್ಷ
No Ads
Log in to write reviews