No Ads

ಪತ್ನಿಗೆ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಪೊಲೀಸ್ ಠಾಣೆಗೆ ಹೋದ ಭೂಪ!

India 2025-04-05 15:27:33 243
post

ಪತಿಯೇ ತನ್ನ ಪತ್ನಿಗೆ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮೃತ ಪತ್ನಿಯನ್ನು ಸಾಫ್ಟ್‌ವೇರ್ ಎಂಜಿನಿಯರ್‌ ಅಸ್ಮಾ ಖಾನ್‌ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶ ನೋಯ್ಡಾದ ಸೆಕ್ಟರ್ 15ರಲ್ಲಿ  ಈ ಭೀಕರ ಘಟನೆ ನಡೆದಿದೆ.

ಅಸ್ಮಾ ಖಾನ್ ಪತಿ ನೂರುಲ್ಲಾ ಹೈದರ್ ನಿರುದ್ಯೋಗಿಯಾಗಿದ್ದ. ಜೊತೆಗೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡಿದ್ದ. ಇದೇ ವಿಚಾರಕ್ಕೆ ಪತಿ-ಪತ್ನಿ ಮಧ್ಯೆ ಸದಾ ಜಗಳ ನಡೆಯುತ್ತಿತ್ತು.

ಜಗಳ ವಿಕೋಪಕ್ಕೆ ಹೋಗಿ ಪತಿ ನೂರುಲ್ಲಾ ಹೈದರ್, ಸುತ್ತಿಗೆಯಿಂದ ಪತ್ನಿ ಅಸ್ಮಾ ಖಾನ್‌ಗೆ ಹೊಡೆದು ಕೊಲೆಗೈದಿದ್ದಾನೆ. ನಂತರ ಸೆಕ್ಟರ್ 15ರ ಪೊಲೀಸ್ ಠಾಣೆಗೆ ಹೋಗಿ ನೂರುಲ್ಲಾ ಹೈದರ್ ಶರಣಾಗಿದ್ದಾರೆ.

ನೂರುಲ್ಲಾ ಹೈದರ್ ಹಾಗೂ ಅಸ್ಮಾ ಖಾನ್‌ ದಂಪತಿಗೆ ಎಂಜಿನಿಯರಿಂಗ್ ಓದುತ್ತಿರುವ ಮಗ, 8ನೇ ತರಗತಿ ಓದುತ್ತಿರುವ ಮಗಳು ಇದ್ದಾರೆ. ಇಷ್ಟಾದರೂ ಇಬ್ಬರ ಮಧ್ಯೆ ನಿರಂತರ ಜಗಳ ನಡೆಯುತ್ತಿತ್ತು. ಸಂಬಂಧಿಕರು ಪತಿ- ಪತ್ನಿ ಇಬ್ಬರ ಮಧ್ಯೆ ರಾಜೀ ಸಂಧಾನ ಮಾಡಿ ಜೊತೆಯಾಗಿರುವಂತೆ ಬುದ್ಧಿವಾದ ಹೇಳಿದ್ದರು. ಸಂಬಂಧಿಕರು ಮನೆಯಿಂದ ಹೋದ ಬಳಿಕ ನೂರುಲ್ಲಾ ಹೈದರ್‌ ಪತ್ನಿಯನ್ನು ಹತ್ಯೆಗೈದು ಪೊಲೀಸರಿಗೆ ಶರಣಾಗಿದ್ದಾನೆ.

No Ads
No Reviews
No Ads

Popular News

No Post Categories
Sidebar Banner
Sidebar Banner