ಬಿಸಿಸಿಐ ಜೂನ್ 1 ರಿಂದ USA ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ T20 ವಿಶ್ವಕಪ್ ಗೆ ಭಾರತದ ತಂಡವನ್ನ ಪ್ರಕಟಿಸಿದೆ. ಸ್ಕ್ವಾಡ್ ನೋಡುವಾಗ ಇಲ್ಲಿ ಒಂದು ವಿಷ್ಯ ಅಂತೂ ಕ್ಲಿಯರ್ ಆಗಿ ಅರ್ಥ ಆಗ್ತಾ ಇದೆ. ಮೇಲುನೋಟಕ್ಕೆ ಪಟ್ಟಿಯಲ್ಲಿ ಇರುವಂತಹ ಬಹುತೇಕ ಆಟಗಾರರ ಆಯ್ಕೆ ಅವರ ಐಪಿಎಲ್ ಪರ್ಫಾರ್ಮೆನ್ಸ್ ಮೇಲೆ ಅಷ್ಟಾಗಿ ಡಿಪೆಂಡ್ ಆಗಿಲ್ಲ, ಬದಲಾಗಿ ಆಟಗಾರರ ಇಂಟರ್ನ್ಯಾಷನಲ್ ಮ್ಯಾಚ್ ಪರ್ಫಾರ್ಮೆನ್ಸ್ ಗಳನ್ನ ಗಮನದಲ್ಲಿ ಇಟ್ಟುಕೊಂಡು ಸೆಲೆಕ್ಟ್ ಮಾಡಲಾಗಿದೆ ಅಂತ ಅನ್ನಿಸ್ತಾ ಇದೆ. ಆದರೆ ಈ ಟೀಮ್ ಗೆ ವರ್ಲ್ಡ್ ಕಪ್ ಗೆಲ್ಲೋ ಚಾನ್ಸ್ ಇದ್ಯಾ ಅಂತ ಕೇಳಿದ್ರೆ ಇದು ಚರ್ಚಾಸ್ಪದವಾಗಿದೆ ಅನ್ನಬಹುದು. ಈ ಸ್ಕ್ವಾಡ್ ನಲ್ಲಿರುವ ವಿರಾಟ್ ಕೊಹ್ಲಿ, ಚಾಹಲ್, ಶಿವಂ ದುಬೆ, ಬಮ್ರಾಹ್ ಐಪಿಎಲ್ ಅಲ್ಲೂ ಒಳ್ಳೆ ಪರ್ಫಾಮ್ ಮಾಡ್ತಾ ಇದ್ದಾರೆ, ಇದನ್ನ ಹೊರತುಪಡಿಸಿ ಈ ಸ್ಕ್ವಾಡ್ ನ ಪ್ರಮುಖ ಹೈಲೈಟ್ಸ್ ಏನು ಅಂತ ನೋಡೋದಾದ್ರೆ ಕೊಹ್ಲಿ ಮತ್ತೆ ರೋಹಿತ್ ಶರ್ಮಾ ಮತ್ತೆ ಒಟ್ಟಾಗಿ ಆಡ್ತಾ ಇರೋದು,ಕೊನೆಗೂ ಸೆಲೆಕ್ಟರ್ಸ್ ಗಳಿಂದ ನೆಗ್ಲೆಕ್ಟ್ ಆಗ್ತಾ ಇದ್ದ ಚಾಹಲ್ ವಾಪಸ್ ಬಂದಿರೋದು, ಆಕ್ಸಿಡೆಂಟ್ ನಂತ್ರ ರಿಷಬ್ ಪಂಥ್ ಇಂಡಿಯನ್ ಟೀಮ್ ಗೆ ವಾಪಸ್ ಆಗಿರೋದು, ಇದೆಲ್ಲ ಒಳ್ಳೆ ಬೆಳವಣಿಗೆ. ಇದು ಬಿಟ್ರೆ ಹಾರ್ದಿಕ್ ಪಾಂಡ್ಯ ವೈಸ್ ಕ್ಯಾಪ್ಟನ್ ಆಗಿದ್ದಾರೆ, ಪಂತ್ ಮತ್ತೆ ಸಂಜು ಸ್ಯಾಮ್ ಸನ್ ಇಬ್ರು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇದ್ದಾರೆ. ರವೀಂದ್ರ ಜಡೇಜಾ, axar ಪಟೇಲ್, ಯಶಸ್ವಿ ಜೈಸ್ವಾಲ್, ಸೂರ್ಯ ಕುಮಾರ್ ಯಾದವ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಶಿವಂ ದುಬೆ ಮತ್ತು ಅರ್ಶ್ದೀಪ್ ಸಿಂಗ್ ಹೀಗೆ 15 ಆಟಗಾರರು ಮೈನ್ ಸ್ಕ್ವಾಡ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಶುಭ್ಮನ್ ಗಿಲ್, ಆವೇಶ್ ಖಾನ್, ಖಲೀಲ್ ಅಹಮದ್ ಮತ್ತು ರಿಂಕು ಸಿಂಗ್ ರಿಸರ್ವ್ ಪ್ಲೇಯರ್ಸ್ ಆಗಿದ್ದಾರೆ ಅಂದ್ರೆ ಮೈನ್ ಸ್ಕ್ವಾಡ್ ಇಂದ ಹೊರಗಿದ್ದಾರೆ. ರಿಂಕು ಸಿಂಗ್ ಮೈನ್ ಸ್ವಾಯ್ಡ್ ಅಲ್ಲಿ ಇರೋದು ಇಂಪಾರ್ಟೆಂಟ್ ಮೂವ್ ಆಗಿರುತ್ತ ಇತ್ತು, ಬಟ್ ಆಗಿಲ್ಲ. ಈ ನಿರ್ಧಾರ ಕೂಡ ಕೈ ಕೊಡಬಹುದು ಅಂತ ಅನ್ನಿಸ್ತಾ ಇದೆ. ಏನೆ ಇರಲಿ ,ಬಿಸಿಸಿಐ ಸೆಕ್ರೆಟರಿ ಜಯ್ ಶಾ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ಬೌಲರ್ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಕಾರ್ಯನಿರ್ವಹಿಸಿರುವ ಸೆಲೆಕ್ಷನ್ ಕಮಿಟಿ ಈ ಒಂದು ಪಟ್ಟಿಯನ್ನು ಹೊರಹಾಕಿದೆ. ಸಾಕಷ್ಟು ನ್ಯಾಯೋಚಿತ,ಆದ್ರೆ ಋತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅನ್ನ ಕೈಬಿಡುವ ನಿರ್ಧಾರ ಅಸಮಂಜಸ ಅನ್ನಿಸ್ತಾ ಇದೆ ಅವೈಜ್ಞಾನಿಕ ಅಂತ ಅನ್ನಿಸ್ತಾ ಇದೆ. ಇದರಿಂದ ಮುಂದೆ ದುಬಾರಿ ಬೆಲೆತೆರಬೇಕಾದೀತೋ ಏನೋ ಅನ್ನೋ ಭಾವನೆ ಅಂತೂ ಮೂಡ್ತಾ ಇದೆ. -ಸುಜಯ್ ರಾಜ್, ಸ್ಪೆಷಲ್ ಬ್ಯುರೋ
ಅಜಿತ್-ಬಿಸಿಸಿಐ ಸೆಲೆಕ್ಷನ್ ಗಿಮಿಕ್, ರಾಹುಲ್ - ರುತುರಾಜ್ ಗೆ ಮಹಾಮೋಸ
No Ads
Log in to write reviews