ವಾಟರ್ ಟೆಸ್ಟಿಂಗ್ ರಿಪೋರ್ಟ್ ನಿಂದ ಜೀವಜಲದ ನೆಪದಲ್ಲಿ ಜೀವ ಹಿಂಡುವ ಅಂಶ ಜನರ ಹೊಟ್ಟೆ ಸೇರುತ್ತಿರುವವಾಟರ್ ಟೆಸ್ಟಿಂಗ್ ರಿಪೋರ್ಟ್ ನಿಂದ ಜೀವಜಲದ ನೆಪದಲ್ಲಿ ಜೀವ ಹಿಂಡುವ ಅಂಶ ಜನರ ಹೊಟ್ಟೆ ಸೇರುತ್ತಿರುವ ಸತ್ಯ ರಿವೀಲ್ ಆಗಿದೆ. ಆರೋಗ್ಯ ಇಲಾಖೆ ನಡೆಸಿದ ವಾಟರ್ ಟೆಸ್ಟಿಂಗ್ನಲ್ಲಿ ಅಂತಹದೊಂದು ಆಘಾತಕಾರಿ ಅಂಶ ಬಯಲಾಗಿದೆ. ನಗರದಲ್ಲಿ ಕರಾಳ ಕಾಲಾರದ ಕರಿಛಾಯೆ ಮೂಡ್ತಿದ್ದಂಗೆ ಆರೋಗ್ಯ ಇಲಾಖೆ ಅಲರ್ಟ್ ಆಗಿತ್ತು. ಕಾಲಾರದ ಓಟ ಆರೋಗ್ಯ ಇಲಾಖೆಯನ್ನ ಬಡಿದೆಬ್ಬಿಸಿತ್ತು. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರು ಟೆಸ್ಟಿಂಗ್ ಮಾಡಿದ್ದು, ಕೆಲವೆಡೆ ಏರಿಯಾದ ನೀರಿನಲ್ಲಿ ಟಾಯ್ಲೆಟ್ ನೀರು, ಕಲುಷಿತ ನೀರು ಮಿಕ್ಸ್ ಆಗಿರೋದು ರಿಪೋರ್ಟ್ನಲ್ಲಿ ರಿವೀಲ್ ಆಗಿದೆ. ಬೋರ್ ಬೆಲ್, ನಲ್ಲಿ ನೀರು, ಆರ್.ಪ್ಲಾಂಟ್ಗಳ ನೀರನ್ನ ಟೆಸ್ಟಿಂಗ್ ಒಳಪಡಿಸಲಾಗಿತ್ತು. ಒಟ್ಟು 570 ಕಡೆಯಲ್ಲಿ ನೀರನ್ನ ಸಂಗ್ರಹ ಮಾಡಿ ಟೆಸ್ಟಿಂಗ್ ಮಾಡಲಾಗಿತ್ತು. ಈ ಪೈಕಿ 270 ಕಡೆಯ ನೀರಿನ ರಿಪೋರ್ಟ್ ಬಂದಿದ್ದು, ಈ ಪೈಕಿ 20 ಕಡೆಯ ನೀರಿನಲ್ಲಿ E.coli ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ. ಇಂತಹ ನೀರು ಕುಡಿದ್ರೆ ಕಾಲಾರಾ ಸೇರಿದಂತೆ ಇತರೆ ಕಾಯಿಲೆ ಕಾಡಲಿದೆ. 70 ಕಡೆಯ ನೀರು ಕುಡಿಯಲು ಯೋಗ್ಯವಿಲ್ಲ ಅನ್ನೋದನ್ನ ಕೂಡ ರಿಪೋರ್ಟ್ ಹೇಳಿದ್ದು ಕೆಲವೊಂದು ಕಡೆ ಆರ್.ಓ ಪ್ಲಾಂಟ್ ಗಳಿಗೀ ಬೀಗ ಬಿದ್ದಿದೆ. ಒಟ್ಟಿನಲ್ಲಿ ಒಂದು ಕಡೆ ನಗರದಲ್ಲಿ ನೀರಿಗೆ ಹಾಹಾಕಾರ ಇದೆ. ಮತ್ತೊಂದು ಕಲುಷಿತ ನೀರಿನ ಪೂರೈಕೆಯಾಗ್ತಿದೆ. ಇವೆರಡರ ನಡುವೆ ಸಿಲುಕಿರುವ ಜನಸಾಮಾನ್ಯರು ಇದೀಗ ಖಾಯಿಲೇಗೀಡಾಗ್ತಿದೆ. ಆದಷ್ಟು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಈ ರೀತಿಯ ತಪ್ಪುಗಳು ನಡೆಯದಂತೆ ನೋಡಿಕೊಳ್ಳಬೇಕಾಗಿದೆ.
ಆರೋಗ್ಯ ಇಲಾಖೆ ನಡೆಸಿದ ಬೆಂಗಳೂರು ನೀರಿನ ಟೆಸ್ಟಿಂಗ್ನಲ್ಲಿ ಆಘಾತಕಾರಿ ಅಂಶ ಬೆಳಕಿಗೆ
No Ads
Log in to write reviews