No Ads

ನನ್ನದು ಗಜಕೇಸರಿ ಯೋಗ, ಪ್ರಧಾನಿ ಆಗ್ತೀನಿ ಸಂಯುಕ್ತಾ ಪಾಟೀಲ್

ಕರ್ನಾಟಕ 2024-04-08 16:32:45 110
post

ನನ್ನ ತಂದೆ ನನ್ನನ್ನು ನಿಮ್ಮ ಉಡಿಯಲ್ಲಿ ಹಾಕಿದ್ದಾರೆ. ನಾನು ಗಜಕೇಸರಿ ಯೋಗದಲ್ಲಿ ಜನಿಸಿದ್ದೇನೆ. ಚಿಕ್ಕವಳಿದ್ದಾಗ ಪ್ರಧಾನಿಯಾಗುವ ಕನಸಿತ್ತು. ಈಗ ಪ್ರಧಾನಿಯೂ ಆಗಬಹುದು,'' ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಹೇಳಿದ್ದಾರೆ. ಭಾನುವಾರ ಬಾಗಲಕೋಟೆಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, "ನನ್ನದು ಗಜಕೇಸರಿ ಯೋಗ. ನಾನು ಹುಟ್ಟಿದಾಗ ನನ್ನ ತಂದೆ ಶಾಸಕರಾದರು. ನಾನು ಚಿಕ್ಕವಳಿದ್ದಾಗ, ನೀನು ಮುಂದೆ ಏನಾಗುತ್ತೀಯಾ ಎಂದು ಕೇಳಿದರೆ ಪ್ರಧಾನಿಯಾಗುತ್ತೇನೆ ಎಂದು ಹೇಳುತ್ತಿದ್ದೆ. ಈಗ ಸಂಸದೆಯಾಗುವ ಅವಕಾಶ ಬಂದಿದೆ. ಮುಂದೆ ನಾನು ಪ್ರಧಾನಿ ಆದರೂ ಆಗಬಹುದು" ಎಂದು ಹೇಳಿದರು. ರಾಜ್ಯದಿಂದ ಪ್ರತಿ ವರ್ಷದ ನಾಲ್ಕು ಲಕ್ಷ ಕೋಟಿ ರೂ ತೆರಿಗೆ ಪಾವತಿಸಲಾಗುತ್ತದೆ. ಕೇಂದ್ರ ಸರ್ಕಾರ 35 ಸಾವಿರ ಕೋಟಿ ರೂ ಪರಿಹಾರ ಕೊಡಲು ಆಗಲ್ಲ ಎನ್ನುತ್ತಿದೆ. ಬರ ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ ಅನುದಾನ ಕೇಳಿದರೆ ಕೊಟ್ಟಿಲ್ಲ, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎನ್ನುವ ಪ್ರಧಾನಿ ಅದೇ ರೈತರ ಮೇಲೆ ಗೋಲಿಬಾ‌ರ್ ನಡೆಸುತ್ತಾರೆ. ನಾನು ಬಾಗಲಕೋಟೆ ಮಗಳು, ಸಹೋದರಿ. ನನ್ನ ತಂದೆ ನನ್ನನ್ನು ನಿಮ್ಮ ಉಡಿಯಲ್ಲಿ ಹಾಕಿದ್ದಾರೆ. ನನಗೆ ಒಂದು ಅವಕಾಶ ಕೊಡಿ, ನಿಮ್ಮ ಜೀತದಾಳಾಗಿ ದುಡಿಯುತ್ತೇನೆ,'' ಎಂದು ಮನವಿ ಮಾಡಿದರು. ರಾಜ್ಯದಿಂದ ಪ್ರತಿ ವರ್ಷದ ನಾಲ್ಕು ಲಕ್ಷ ಕೋಟಿ ರೂ ತೆರಿಗೆ ಪಾವತಿಸಲಾಗುತ್ತದೆ. ಕೇಂದ್ರ ಸರ್ಕಾರ 35 ಸಾವಿರ ಕೋಟಿ ರೂ ಪರಿಹಾರ ಕೊಡಲು ಆಗಲ್ಲ ಎನ್ನುತ್ತಿದೆ. ಬರ ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ ಅನುದಾನ ಕೇಳಿದರೆ ಕೊಟ್ಟಿಲ್ಲ, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎನ್ನುವ ಪ್ರಧಾನಿ ಅದೇ ರೈತರ ಮೇಲೆ ಗೋಲಿಬಾ‌ರ್ ನಡೆಸುತ್ತಾರೆ. ನಾನು ಬಾಗಲಕೋಟೆ ಮಗಳು, ಸಹೋದರಿ. ನನ್ನ ತಂದೆ ನನ್ನನ್ನು ನಿಮ್ಮ ಉಡಿಯಲ್ಲಿ ಹಾಕಿದ್ದಾರೆ. ನನಗೆ ಒಂದು ಅವಕಾಶ ಕೊಡಿ, ನಿಮ್ಮ ಜೀತದಾಳಾಗಿ ದುಡಿಯುತ್ತೇನೆ,'' ಎಂದು ಮನವಿ ಮಾಡಿದರು. ಅಭ್ಯರ್ಥಿ ಸಂಯುಕ್ತಾ ಅವರ ತಂದೆ ಹಾಗೂ ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, "ಇಪ್ಪತ್ತು ವರ್ಷ ಅಧಿಕಾರದಲ್ಲಿರುವ ಬಿಜೆಪಿಯವರು ಅವಳಿ ಜಿಲ್ಲೆಗಳ ಸಮಸ್ಯೆಗೆ ಧ್ವನಿಯಾಗಿಲ್ಲ. ಕೃಷ್ಣಾ ನದಿಯಲ್ಲಿ ನಮ್ಮ ಪಾಲಿನ 200 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಈ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪಿಸಿಲ್ಲ. ಸದ್ಯ ಮಹಾರಾಷ್ಟ್ರಕ್ಕೆ ನೀರು ಕೊಡಿ ಎನ್ನುವ ಸ್ಥಿತಿಯಿದೆ. ಬಿಜೆಪಿ ಸಂಸದರು ಧ್ವನಿ ಎತ್ತಿದ್ದರೆ ಅವಳಿ ಜಿಲ್ಲೆ ನಂದನವನವಾಗುತ್ತಿತ್ತು. ನಾವು ಬಾಗಲಕೋಟೆ, ವಿಜಯಪುರ ಎರಡೂ ಕ್ಷೇತ್ರ ಗೆಲ್ಲುತ್ತೇವೆ. ಕಳೆದ ಚುನಾವಣೆಯಲ್ಲಿ ವೀಣಾ ಅವರು ಪಡೆದ ಮತಗಳಿಗಿಂತ ಎರಡು ಲಕ್ಷ ಲೀಡ್ ಪಡೆಯುತ್ತೇವೆ'' ಎಂದರು.  

No Ads
No Reviews
No Ads

Popular News

No Post Categories
Sidebar Banner
Sidebar Banner