ಧಾರವಾಡ: ಅಭಿವೃದ್ಧಿಪರ, ಜನಪರ, ಬಡವರ ಪರ ಹಾಗೂ ರೈತಪರ ಇರುವ ಪಕ್ಷ ಕಾಂಗ್ರೆಸ್. ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದು ಧಾರವಾಡ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ತಿಳಿಸಿದರು. ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ತಡಕೋಡ ಹಾಗೂ ಹೆಬ್ಬಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿ ಎಂಬ ಸುಳ್ಳಿನ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ. ಕೇಂದ್ರದ ಸರ್ಕಾರ ಕಳೆದ ಹತ್ತು ವರ್ಷದಲ್ಲಿ ಬಡವರ ಬದುಕನ್ನು ದುರ್ಬರವಾಗಿಸಿದೆ. ಬೆಲೆ ಏರಿಸಿ ಕಷ್ಟಕ್ಕೆ ದೂಡಿದೆ. ಆದ್ದರಿಂದ ಬಿಜೆಪಿಗೆ ಬುದ್ದಿಕಲಿಸಿ ಎಂದು ಕರೆ ನೀಡಿದರು. ಸರ್ವರಿಗೂ ಸಮಾನ ನ್ಯಾಯ ದೊರೆಯಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಸಮಾಜದಲ್ಲಿ ಭಾವೈಕ್ಯತೆ ಮೂಡಿಸಿದ್ದು ಕಾಂಗ್ರೆಸ್ ಪಕ್ಷ. ಬಡವರ, ದಲಿತರ, ಮಹಿಳೆಯರ ಹಾಗೂ ಶೋಷಿತರ ಅಭಿವೃದ್ಧಿಯಾಗಲು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಧಾರವಾಡ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ ಲಾಡ್, ಶಿವಲೀಲಾ ಕುಲಕರ್ಣಿ, ಶ್ರೀ ಅಜೀಮ್ ಪೀರ್ ಖಾದ್ರಿ, ಶ್ರೀ ಅನೀಲಕುಮಾರ ಪಾಟೀಲ, ಶ್ರೀ ಜಗದೀಶ್ ಉಪ್ಪಿನ, ಶ್ರೀ ಮಯೂರ ಮೋರೆ, ಶ್ರೀ ಈಶ್ವರ ಶಿವಳ್ಳಿ, ಶ್ರೀ ಅರವಿಂದ ಏಗನಗೌಡ್ರ, ಶ್ರೀ ಸುರೇಶಗೌಡ ಕರಿಗೌಡರ್, ತಡಕೋಡ ಸುತ್ತಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಸದಸ್ಯರು ಮತ್ತು ಹಿರಿಯರು, ಕಾಂಗ್ರೆಸ್ ಪಕ್ಷದ ಸಮಸ್ತ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಧಾರವಾಡ ಲೋಕಸಭೆ: ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಪರ ಚುನಾವಣಾ ಪ್ರಚಾರ ಸಭೆ
No Ads
Log in to write reviews