ಧಾರವಾಡ: ದೇಶದ ಭವಿಷ್ಯ ಬರೆಯುವ ಚುನಾವಣೆ ಎಂದರೆ ಅದು ಲೋಕಸಭಾ ಚುನಾವಣೆ. ದೇಶದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಅದು ಕಾಂಗ್ರೆಸನಿಂದ ಮಾತ್ರ ಸಾಧ್ಯ. ಬಿಜೆಪಿ ಕೇವಲ ಧರ್ಮ ಹಾಗೂ ಜಾತಿಗಳ ಮಧ್ಯೆ ಒಡಕು ತಂದು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಎಂದು ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಹೇಳಿದರು. ಧಾರವಾಡ ಲೋಕಸಭಾ ವ್ಯಾಪ್ತಿಯ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚಂದನಮಟ್ಟಿ, ಕನಕೂರ, ತಲವಾಯಿ, ವನಹಳ್ಳಿಗಳಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ರೈತರ ಕಷ್ಟಗಳಿಗೆ ಕಿವಿಯಾಗದ, ರೈತರ ಆದಾಯ ಎರಡು ಪಟ್ಟು ಮಾಡದ, ಬರ ಪರಿಹಾರ ಕೊಡಲು ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಬಿಜೆಪಿ ಸರಕಾರ ಕಿತ್ತೊಗೆಯಬೇಕಿದೆ. ರೈತರ, ಬಡವರ ಕಷ್ಟಗಳಿಗೆ ಸ್ಪಂದಿಸುವ, ತಾಯಿ ಹೃದಯಿಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ನೀಡಿ ವಿನೋದ ಅಸೂಟಿಯವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಜನರ ಆರೋಗ್ಯಕ್ಕಾಗಿ ಆರೋಗ್ಯ ಭಾಗ್ಯದ ಗ್ಯಾರಂಟಿ ನೀಡಿರುವ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕೆಂದು. ಈ ಬಾರಿ ಧಾರವಾಡ ಲೋಕಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲು ತಾವೆಲ್ಲರೂ ಮತ ನೀಡಿ ಎಂದರು. ಈ ಬಾರಿ ಧಾರವಾಡದಲ್ಲಿ ಬದಲಾವಣೆ ಖಚಿತ. ಜೋಶಿಗೆ ಸೋಲು ನಿಶ್ಚಿತ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಪತಾಕೆ ಹಾರಿಸೋಣ ಎಂದರು. ಹನುಮಾನ ಜಯಂತಿ ಪ್ರಯುಕ್ತ ವನಹಳ್ಳಿ ಹಾಗೂ ತಲವಾಯಿ ಗ್ರಾಮದ "ಶ್ರೀ ಹನುಮಾನ ದೇವಸ್ಥಾನಕ್ಕೆ" ಭೇಟಿ ನೀಡಿದ್ದ ವಿನೋದ್ ಅಸೂಟಿ ಅವರು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಮತಿ ಶಿವಲೀಲಾ ಕುಲಕರ್ಣಿ, ಅರವಿಂದ ಏಗನಗೌಡ್ರ, ಈಶ್ವರ ಶಿವಳ್ಳಿ, ಗಿರಿಮಲ್ಲಯ್ಯ ನಂದಿಕೋಲಮಠ, ಸಿದ್ದಪ್ಪ ಪ್ಯಾಟಿ, ಬಸಣ್ಣ ಮಾಳಾಪೂರ ಮತ್ತು ಪಕ್ಷದ ಹಿರಿಯರು, ತಲವಾಯಿ ಗ್ರಾಮದ ಸಮಸ್ತ ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.
ಧಾರವಾಡ ಲೋಕಸಭೆ: ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಬಿರುಸಿನ ಪ್ರಚಾರ
No Ads
Log in to write reviews