No Ads

ಅಸ್ಮಾ ಸಾವು ಪ್ರಕರಣ; ಪತಿಯ ಲ್ಯಾಪ್ಟಾಪ್ನಲ್ಲಿದ್ವು ರಾಸಲೀಲೆ ವಿಡಿಯೋಗಳು.

ಜಿಲ್ಲೆ 2025-04-10 12:51:08 296
post

ಕಳೆದ ವರ್ಷ 2023ರ ಜುಲೈನಲ್ಲಿ ವಿಜಯನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಾಹರ್ ಅಸ್ಮಾ ಹಾಗೂ ಬಷೀರ್ ವುಲ್ಲಾ ವಿವಾಹ ನಡೆದಿತ್ತು. ಕುಟುಂಬದ ಹಿರಿಯರು ನಿಶ್ವಯಿಸಿದ ಮದುವೆ ಇದಾಗಿತ್ತು. ಪತಿ ಬಷೀರ್ ವುಲ್ಲ ಸುಲ್ತಾನ್ ಪಾಳ್ಯದ ನಿವಾಸಿಯಾಗಿದ್ದ. ಬಾಹರ್ ಅಸ್ಮಾ ಬಾಪೂಜಿನಗರ ಶ್ಯಾಮಣ್ಣ ಗಾರ್ಡನ್ ನಿವಾಸಿಯಾಗಿದ್ದಳು. ಪತಿ ಬಷೀರ್ ವುಲ್ಲ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಏರ್ಲೈನ್ಸ್ ಸಿಬ್ಬಂದಿಯಾಗಿದ್ದ. ಈ ಖಾಸಗಿ ಏರ್ಲೈನ್ಸ್​​ನ ಮಹಿಳಾ ಸಿಬ್ಬಂದಿ ಹಾಗೂ ಗಗನಸಖಿಯರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಅನ್ನೋದು ಮೃತ ಅಸ್ಮಾ ಪೋಷಕರ ಆರೋಪವಾಗಿದೆ.

ಅಸ್ಮಾ ಅಸಹಜ ಸಾವು ಪ್ರಕರಣದಲ್ಲಿ ಆರೋಪಿತ ಪತಿ ಬಷೀರ್​ ವುಲ್ಲಾನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸ್ತಿರುವ ಹೆಬ್ಬಾಳ ಪೊಲೀಸರು, ಬಷೀರ್ ಹಾಗೂ ಮೃತ ಅಸ್ಮಾರ ಮೊಬೈಲ್​, ಲ್ಯಾಪ್​ಟಾಪ್​ ವಶಕ್ಕೆ ಪಡೆದಿದ್ದಾರೆ. ಇನ್ನು ತನಿಖೆ ನಡೆಸ್ತಿರುವ ಪೊಲೀಸ್ ಅಧಿಕಾರಿಗಳಿಗೆ ಅಸ್ಮಾ ಲ್ಯಾಪ್​ಟಾಪ್​ನಲ್ಲಿ ಪತಿಯ ರಾಸಲೀಲೆಗಳು ಸಿಕ್ಕಿವೆ ಎನ್ನಲಾಗಿದೆ.

ಇದೀಗ ಬಷೀರ್​​ಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳು ಲ್ಯಾಪ್​ಟಾಪ್​ನಲ್ಲಿ ಇವೆ ಎಂದು ಹೇಳಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲೂ ಆರೋಪಿ ಹಲವು ಯುವತಿಯರ ಜೊತೆ ರಿಲೇಷನ್​ಶಿಪ್​​ನಲ್ಲಿ ಇರೋದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಬಷೀರ್ ವುಲ್ಲ ನ್ಯಾಯಾಂಗ ಬಂಧನದಲ್ಲಿದ್ದಾನೆ. ಅಸ್ಮಾ ಮರಣೋತ್ತರ ಪರೀಕ್ಷೆ ರಿಪೋರ್ಟ್​ ಬಂದ ಬಳಿಕ ಆರೋಪಿಯನ್ನ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner