ಗರ್ಭ ಧರಿಸಿದ ಹಸುವಿನ ತಲೆಕಡಿದು ಮಾಂಸ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸರಿಂದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮೂರು ದಿನಗಳ ಕಾರ್ಯಾಚರಣೆ , ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ಘಟನೆ ನಡೆದಿತ್ತು.
ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಇಂತಹ ನೀಚ ಕೃತ್ಯ ನಡೆದಿತ್ತು. ಕೃಷ್ಣ ಆಚಾರಿ ಎಂಬುವವರ ಹಸುವನ್ನು ಮೇಯಲು ಕಾಡಿಗೆ ಬಿಟ್ಟಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹುಡಕಾಡಿದರೂ ಪತ್ತೆ ಆಗಿಲಿಲ್ಲ. ಆದರೆ ಮರುದಿನ ಬೆಳಗ್ಗೆ ಮಾಲೀಕರಿಗೆ ಆಘಾತ ಕಾದಿತ್ತು. ಮನೆಯಿಂದ ಅನತಿ ದೂರದಲ್ಲೇ ಹಸುವಿನ ತಲೆ ಕತ್ತರಿಸಿ ಬಿದ್ದಿತ್ತು. ಹಸುವಿನ ಕಾಲು ಕಾಣಸಿತ್ತು. ದುಷ್ಟರು ಹಸುವಿನ ಮುಂಡ, ಹಸುವಿನ ಹೊಟ್ಟೆಯಲ್ಲಿದ್ದ ಕರುವಿನ ಮಾಂಸವನ್ನ ಹೊತ್ತೊಯ್ದಿದ್ದಾರೆ ಅಂತಾ ಹಸುವಿನ ಮಾಲೀಕರು ಕಣ್ಣೀರು ಹಾಕಿದ್ದರು. ಈ ಘಟನೆಯಿಂದ ರಾಜ್ಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಗೋಹಂತಕರ ಪತ್ತೆಗಾಗಿ ಸ್ವತಃ ಫೀಲ್ಡಿಗಿಳಿದಿದ್ದ ಎಸ್ಪಿ ಎಂ.ನಾರಾಯಣ ಸಿಬ್ಬಂದಿ ಜತೆ ಕಾಡಿನಲ್ಲೇ ಸುತ್ತಾಡಿದ್ದರು. ಇದುವರೆಗೆ ಐವರು ಗೋಹಂತಕರನ್ನು ಬಂಧಿಸಿರುವ ಪೊಲೀಸರು, ಜಾಲ ಪತ್ತೆ ಮಾಡಲು ಬಲೆ ಬೀಸಿದ್ದಾರೆ. ನಿನ್ನೆವರೆಗೂ ಕಾರ್ಯಾಚರಣೆಗೆ ನಾಲ್ಕು ತಂಡಗಳನ್ನು ಮಾಡಲಾಗಿತ್ತು. ಹೆಚ್ಚುವರಿಯಾಗಿ ಇನ್ನೆರಡು ತಂಡ ರಚನೆ ಮಾಡಿ ಕಾರ್ಯಾಚರಣೆ ಮಾಡಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೊಡ್, ಬಾಸ್ಕೇರಿ, ಹಡಿನಬಾಳ, ಕವಲಕ್ಕಿ ಭಾಗದಲ್ಲಿ ಪೊಲೀಸರಿಂದ ಕಾರ್ಯಾಚರಣೆ ಜೋರಾಗಿದ್ದು, ಈ ಹಿಂದೆ ನಾಪತ್ತೆ ಆಗಿರುವ ಹಸುಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯ ಪೊಲೀಸರ ತಂಡಗಳ ಜೊತೆಗೆ ಹೊನ್ನಾವರ ತಾಲೂಕಿನಲ್ಲೇ ಎಸ್ಪಿ ಎಂ. ನಾರಾಯಣ ಠಿಕಾಣಿ ಹೂಡಿದ್ದಾರೆ.
Log in to write reviews