No Ads

15 ವರ್ಷಗಳಲ್ಲೇ ಬಿಸಿಲಲ್ಲಿ ಹೊಸ ದಾಖಲೆ

ಕರ್ನಾಟಕ 2024-04-08 13:54:13 111
post

ಈ ಬಾರಿಯ ಏಪ್ರಿಲ್ ತಿಂಗಳು ಸಿಲಿಕಾನ್ ಸಿಟಿ ಬೆಂಗಳೂರಿಗರಿಗೆ ಸಾಕಪ್ಪಾ ಸಾಕು ಅನ್ನೋ ಹಾಗಾಗಿದೆ. ಮಧ್ಯಾಹ್ನ ಆದ್ರೆ ನೆತ್ತಿ ಸುಡುವ ಬಿಸಿಲಿನ ಶಾಖ ತಾಳಲಾರದೇ ಒದ್ದಾಡುತ್ತಿದ್ದಾರೆ. ಬಿಸಿಲೇರಿದ ಬೆಂಗಳೂರಿನ ತಾಪಮಾನ ಏಪ್ರಿಲ್ 6 ಅಂದ್ರೆ ಕಳೆದ ಶನಿವಾರ ಹೊಸ ದಾಖಲೆ ಬರೆದಿದೆ. ಉದ್ಯಾನನಗರಿಯಲ್ಲಿ 15 ವರ್ಷಗಳ ಬಳಿಕ ಏಪ್ರಿಲ್ ತಿಂಗಳಲ್ಲಿ 3ನೇ ಅಧಿಕ ತಾಪಮಾನ ದಾಖಲಾಗಿದೆ. ಏಪ್ರಿಲ್ ಆರಂಭದಿಂದಲೂ ಬೆಂಗಳೂರಲ್ಲಿ ಬಿಸಿಲಿನ ಸೆಕೆ ಸುಸ್ತಾಗುವಂತೆ ಮಾಡುತ್ತಿದೆ. ದಿನ ಕಳೆದಂತೆ ತಾಪಮಾನ ಏರಿಕೆಯಾಗುತ್ತಿದ್ದು, ಏಪ್ರಿಲ್ 6ರಂದು ಅತ್ಯಾಧಿಕ ತಾಪಮಾನ ಅಂದ್ರೆ 37.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಕಳೆದ 8 ವರ್ಷದಲ್ಲೇ ಇಷ್ಟೊಂದು ಉಷ್ಣಾಂಶ ಕಂಡು ಬಂದಿರಲಿಲ್ಲ. ದಾಖಲೆಯ ತಾಪಮಾನ ವರದಿಯಾಗಿರೋದು ಬೆಂದಕಾಳೂರಿನ ಬಿಸಿ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ನೀಡಿದೆ. 2016ರಲ್ಲಿ ಬೆಂಗಳೂರಿನ ತಾಪಮಾನ 37.2 ಡಿಗ್ರಿ ಸೆಲ್ಸಿಯಸ್‌ಗೆ ಗುರಿಯಾಗಿತ್ತು. ಇದೀಗ ಬೆಂಗಳೂರು ಆ ದಾಖಲೆಯನ್ನು ಬ್ರೇಕ್ ಮಾಡಿದ್ದು ಏಪ್ರಿಲ್ 6ರಂದು 37.6 ತಾಪಮಾನ ದಾಖಲಾಗಿದೆ. ಕಳೆದ ಮಾರ್ಚ್ 5ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 38.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎನ್ನಲಾಗಿದೆ. ದಿನ ಕಳೆದಂತೆ ಬಿಸಿಲಿನ ತಾಪಮಾನ ಮತ್ತಷ್ಟು ಏರಿಕೆಯಾಗುತ್ತಾ ಇದ್ದು, ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಅಲರ್ಟ್ ಕೂಡ ನೀಡಿದೆ. ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿಗಳ ಪ್ರಕಾರ ಏಪ್ರಿಲ್ 6ರ ಜೊತೆಗೆ ಏಪ್ರಿಲ್ 7-10ರವರೆಗೂ ಇದೇ ರೀತಿಯ ತಾಪಮಾನ ಮುಂದುವರಿಯಲಿದೆ. ಏಪ್ರಿಲ್ 10 ಮತ್ತು 11 ರಂದು ಮಳೆರಾಯ ತುಸು ತಂಪೆರೆಯುವ ಮುನ್ಸೂಚನೆಗಳಿವೆ. ಈ ಎರಡು ದಿನ ಮೋಡ ಕವಿದ ವಾತಾವರಣ ಇದ್ದು, ಈ ಬಿಡುವಿನ ಬಳಿಕ ಮತ್ತೆ ಏಪ್ರಿಲ್‌ ತಿಂಗಳು ಅತ್ಯಧಿಕ ತಾಪಮಾನಕ್ಕೆ ಗುರಿಯಾಗಲಿದೆ.  

No Ads
No Reviews
No Ads

Popular News

No Post Categories
Sidebar Banner
Sidebar Banner