No Ads

'ಮಕ್ಕಳ ಕಳ್ಳಿ' ಆರೋಪ.. ಟ್ರೋಲ್ ಮಾಡಿದವರ ಮೇಲೆ ಮೋಕ್ಷಿ ಕಾನೂನು ಕ್ರಮ ..?

ಮನರಂಜನೆ 2025-01-30 14:36:11 372
post

ಫಿನಾಲಿಸ್ಟ್ ಆಗಿದ್ದ ಮೋಕ್ಷಿತಾ ಪೈ (Mokshita Pai) ಸಂದರ್ಶನವೊಂದರಲ್ಲಿ ತನ್ನ ಮೇಲೆ ಕೇಳಿ ಬಂದಿದ್ದ ಕಿಡ್ನಾಪ್ ಆರೋಪದ ಬಗ್ಗೆ ಮಾತನಾಡಿದ್ದಾರೆ. 'ಪಾರು' ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿದ್ದ ಸಂದರ್ಭದಲ್ಲಿ ಅವರ ಮೇಲೆ 'ಮಕ್ಕಳ ಕಳ್ಳಿ' ಎನ್ನುವ ಆರೋಪ ಹೊರಗಡೆ ಹರಿದಾಡಿತ್ತು. 2014ರಲ್ಲಿ ಬಾಲಕಿಯೊಬ್ಬಳನ್ನು ಗೆಳೆಯನ ಜೊತೆಗೂಡಿ ಅಪಹರಣ ಮಾಡಿ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಅವರು ಜೈಲಿಗೂ ಹೋಗಿ ಬಂದಿದ್ದರು ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ ಆಗಿತ್ತು.

ಇದೀಗ ಮೋಕ್ಷಿತಾ ಅವರು ಈ ಬಗ್ಗೆ ಮಾತನಾಡಿದ್ದಾರೆ. "ನಿರಾಪರಾಧಿ ಅಂತ ಸಾಬೀತಾಗಿದೆ. ಇದಾದ ಮೇಲೂ ಮತ್ತೆ ಅದೇ ವಿಚಾರವನ್ನು ಇಟ್ಟುಕೊಂಡು ಟ್ರೋಲ್ ಮಾಡುತ್ತಾರೆ ಅಂದ್ರೆ ಮತ್ತೇನೂ ಹೇಳೋಕೆ ಆಗಲ್ಲ. ಇದು ಮುಗಿದು ಹೋಗಿರುವ ವಿಚಾರ. ಅದನ್ನು ನಾನಿಲ್ಲಿ ಮತ್ತೆ ಕೆದಕಿ ಮಾತನಾಡೋಕೆ ಹೋಗಲ್ಲ. ನಿರಾಪರಾಧಿ ಅಂತ ಸಾಬೀತಾಗಿದೆ. ಈ ಬಗ್ಗೆ ನಾನು ಮಾತನಾಡಲ್ಲ. ಮತ್ತೆ ಏನಾದ್ರು ಹೇಳಿ ಕಾನೂನು ಮೂಲಕ ತೊಂದರೆ ಕೊಡೋಕೆ ನಾನು ಹೋಗಲ್ಲ” ಎಂದಿದ್ದಾರೆ.

ಟ್ರೋಲ್ ಮಾಡಿದವರ ಮೇಲೆ ನಾನು ಕಾನೂನು ಕ್ರಮಕೈಗೊಳ್ಳಲ್ಲ. ಆ ನೋವು ಏನು ಅಂಥ ನನಗೆ ಗೊತ್ತಿದೆ. ಅದನ್ನು ನಾನು ಅನುಭವಿಸಿದ್ದೀನಿ. ವೀವ್‌ಗೋಸ್ಕರ ಇದನ್ನು ಮಾಡಿದ್ದಾರೆ. ಪಾಪ ಮಾಡ್ಕೊಂಡು ಇರಲಿ.ನಾನೇನು ಕ್ರಮ ತೆಗೆದುಕೊಳ್ಳಲ್ಲವೆಂದಿದ್ದಾರೆ.

ಇನ್ನು ಮೋಕ್ಷಿತಾ ಅವರು ಬಿಗ್ ಬಾಸ್‌ನಿಂದ ಬಂದ ಹಣದಲ್ಲಿ ಸ್ವಲ್ಪ ಹಣವನ್ನು ಅಂಗವಿಕಲರ ಆಶ್ರಮಕ್ಕೆ ದಾನವಾಗಿ ನೀಡಿದ್ದಾರೆ. ಆಶ್ರಮಕ್ಕೆ ತೆರಳಿ ತನ್ನ ತಮ್ಮನ ಹೆಸರಿನಲ್ಲಿ ಎರಡು ಲಕ್ಷ ರೂಪಾಯಿ ದಾನ ಮಾಡಿದ್ದಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner